More

    ಲೋಕಾಯುಕ್ತರ ಪತ್ರ ನೋಡಿ ಅಚ್ಚರಿಗೊಳಗಾದ ಬಿಬಿಎಂಪಿ ಸಿಬ್ಬಂದಿ!; ಅಂಥದ್ದೇನಿತ್ತು ಪತ್ರದಲ್ಲಿ?

    ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರವನ್ನು ನೋಡಿದ ಪಾಲಿಕೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಸಾವರಿಸಿಕೊಂಡು ಪತ್ರವನ್ನು ಮತ್ತೊಮ್ಮೆ ಓದಿದಾಗ ಲೋಕಾಯುಕ್ತ ಅಧಿಕಾರಿಗಳು ಭ್ರಮೆಯಲ್ಲಿ ಪತ್ರ ಬರೆದಿರುವುದು ತಿಳಿದಿದೆ.

    ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅವಧಿ 2020ರ ಸೆ.10ಕ್ಕೆ ಪೂರ್ಣಗೊಂಡಿದ್ದು, ಒಂದೂವರೆ ವರ್ಷದಿಂದ ಆಡಳಿತಾಧಿಕಾರಿಗಳ ಆಡಳಿತ ನಡೆಯುತ್ತಿದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಮಾತ್ರ ಬಿಬಿಎಂಪಿಯಲ್ಲಿ ಈಗಲೂ ಮೇಯರ್ ಆಡಳಿತ ನಡೆಯುತ್ತಿದೆ ಎಂಬ ಭ್ರಮೆಯಲ್ಲೇ ಪಾಲಿಕೆಗೆ ಪತ್ರ ಬರೆದಿದ್ದಾರೆ.

    ರಾಜ್ಯ ಲೋಕಾಯುಕ್ತ ಕಾಯ್ದೆ ಪ್ರಕಾರ ಜನಪ್ರತಿನಿಧಿಗಳು ಪ್ರತಿವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಈ ಮೂಲಕ ಜನಪ್ರತಿನಿಧಿಗಳ ಆಸ್ತಿ ಗಳಿಕೆ ಮೇಲೆ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ವಿವರ ನೀಡದ ಕೌನ್ಸಿಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತಕ್ಕಿದೆ.

    ಹೀಗಾಗಿ, ಬಿಬಿಎಂಪಿಯಲ್ಲಿ ಯಾವ ಪ್ರಕಾರದ ಆಡಳಿತವಿದೆ ಎಂಬುದನ್ನು ತಿಳಿಯದೇ ಲೋಕಾಯುಕ್ತ ಅಧಿಕಾರಿಗಳು 2021-22ನೇ ಸಾಲಿನಲ್ಲಿನ ಕೌನ್ಸಿಲರ್‌ಗಳ ಆಸ್ತಿ ವಿವರ ಸಲ್ಲಿಸುವಂತೆ ಪತ್ರ ಬರೆದಿದ್ದಾರೆ. ಇಲ್ಲದ ಕೌನ್ಸಿಲರ್‌ಗಳ ಆಸ್ತಿ ವಿವರ ಹೇಗೆ ಸಲ್ಲಿಸಬೇಕು ಎಂಬ ಚಿಂತೆಗೆ ಸಿಬ್ಬಂದಿ ಈಡಾಗಿದ್ದಾರೆ.

    ಲೋಕಾಯುಕ್ತರ ಪತ್ರ ನೋಡಿ ಅಚ್ಚರಿಗೊಳಗಾದ ಬಿಬಿಎಂಪಿ ಸಿಬ್ಬಂದಿ!; ಅಂಥದ್ದೇನಿತ್ತು ಪತ್ರದಲ್ಲಿ?

    ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..

    ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ್ರು ಐದು ರೂಪಾಯಿ ಡಾಕ್ಟರ್​ ಶಂಕರೇಗೌಡ ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts