More

    ಬಿಬಿಎಂಪಿ ಆಸ್ತಿತೆರಿಗೆ ಸರಳೀಕರಣಕ್ಕೆ ಹೊಸ ವಿಧಾನ

    ಬೆಂಗಳೂರು: ನಿವೇಶನದ ಮಾರ್ಗಸೂಚಿ ದರ ಹಾಗೂ ಕಟ್ಟಡ ನಿರ್ಮಾಣ ವೆಚ್ಚ ಆಧರಿಸಿ ಆಸ್ತಿತೆರಿಗೆಯನ್ನು ನಿಗದಿಗೊಳಿಸಿ ವಸೂಲು ಮಾಡುವ ಹೊಸ ಪದ್ಧತಿಯನ್ನು ಮುಂದಿನ ಆರ್ಥಿಕ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿ ಜಾರಿಯಲ್ಲಿರುವ ಘಟಕವಾರು ಮೌಲ್ಯಾಧಾರಿತ ಪದ್ಧತಿ (ಯುಎವಿ) ಕೆಲವೊಂದು ಅಂಶಗಳನ್ನು ಸಮಪರ್ಕವಾಗಿ ವಿಶ್ಲೇಷಿಸುತ್ತಿರಲಿಲ್ಲ. ಜತೆಗೆ ಸ್ವತ್ತುದಾರರು ಪಾವತಿಸುವ ಆಸ್ತಿತೆರಿಗೆಯಲ್ಲಿ ಸೋರಿಕೆಗೆ ಅವಕಾಶವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ತಿತೆರಿಗೆ ವಿಧಾನವನ್ನು ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮುಂದಿನ ವರ್ಷದಿಂದ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

    ಸದ್ಯ ಮೂರು ವಲಯಗಳಾಗಿ ವಿಂಗಡಿಸಿದ್ದ ತೆರಿಗೆ ನಿಗದಿ ಪದ್ಧತಿ ಇನ್ನು ಮುಂದೆ 6 ವಲಯಗಳಾಗಿ ಮಾರ್ಪಾಡಾಗಲಿದೆ. ಆದರೆ, ಆಸ್ತಿತೆರಿಗೆ ನಿಗದಿಯಲ್ಲಿ ಸಮಾನ ದರ ಅನ್ವಯವಾಗಲು ಆಯಾ ಪ್ರದೇಶದ ಮಾರ್ಗಸೂಚಿ ದರವನ್ನು ಪ್ರಧಾನವಾಗಿ ಪರಿಗಣಿಸಲಾಗುವದು. ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ತಾರಾ ಹೋಟೆಲ್, ಕೈಗಾರಿಕೆಗಳಿಗೆ ಪ್ರತ್ಯಕ ದರ ನಿಗದಿಯಾಗಲಿದೆ. ಕಟ್ಟಡಗಳ ಮೇಲಿರುವ ದೂರಸಂಪರ್ಕ ಗೋಪುರ, ಹೋರ್ಡಿಂಗ್ಸ್, ಬಿಲ್ ಬೋರ್ಡ್ಸ್/ಎಲೆಕ್ಟ್ರಾನಿಕ್ ಸಾಧನಗಳಿಗೆ ವಾರ್ಷಿಕ 20 ಸಾವಿರ ರೂ. ಮತ್ತು ಸೆಸ್ ನಿಗದಿಯಾಗಲಿದೆ. ಆದರೆ, ಸರ್ಕಾರ ಬಡವರಿಗೆ ಮಂಜೂರು ಮಾಡಿರುವ 300 ಚದರ ಅಡಿ ವಿಸ್ತೀರ್ಣದ ಮನೆಗಳಿಗೆ ವಾರ್ಷಿಕ ರೂ. ಜತೆಗೆ ಸೆಸ್ ಮಾತ್ರ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.

    ಆಕ್ಷೇಪಣೆಗೆ ಕಾಲಾವಕಾಶ:

    ಆಸ್ತಿತೆರಿಗೆಯ ಹೊಸ ವಿಧಾನ ಸಂಬಂಧ ಹೊರಡಿಸಿರುವ ಕರಡು ಅಧಿಸೂಚನೆ ಸಾರ್ವಜನಿಕರಿಂದ ಆಕ್ಷೇಪ, ಸಲಹೆ-ಸೂಚನೆ ಕ್ರೊಡೀಕರಿಸಲು ಮಾ.5ರ ವರೆಗೆ ಕಾಲಾವಕಾಶ ನೀಡಲಾಗಿದೆ. ಇದನ್ನು ನಾಗರಿಕರು ಪಾಲಿಕೆ ಮುಖ್ಯ ಆಯುಕ್ತರಿಗೆ ಅಥವಾ ಇ-ಮೇಲ್ ( ಟ್ಚಟಞಞ್ಟಛಿಃಚಿಚಿಞ.ಜಟ.ಜ್ಞಿ) ಮಾಡಬಹುದಾಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

    ಹೊರ ಆಗದಂತೆ ಮಿತಿ ಹೇರಿಕೆ:

    ಸ್ವತ್ತುದಾರರು ಉದ್ದೇಶಿತ ತೆರಿಗೆ ಪದ್ಧತಿಯಲ್ಲಿ ಮಾರ್ಗಸೂಚಿ ದರ ಪ್ರತೀವರ್ಷ ಹೆಚ್ಚಳವಾದಂತೆ ತೆರಿಗೆಯೂ ಏರಲಿದೆ. ಇದು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರಗಳನ್ನು ಆಧರಿಸಿರುತ್ತದೆ. ಒಂದು ವೇಳೆ ತೆರಿಗೆದಾರರಿಗೆ ಹೆಚ್ಚು ಹಣ ಪಾವತಿ ಮಾಡುವ ಸಂದರ್ಭ ಬಂದಲ್ಲಿ ಅಂತಹ ಮೊತ್ತವನ್ನು ಶೇ.20ಕ್ಕಿಂತ ಹೆಚ್ಚಾಗದಂತೆ ಮಿತಿ ಹೇರಲಾಗುವುದು ಎಂದು ಮುಖ್ಯ ಆಯುಕ್ತರು ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts