More

    ತಲಾಖ್ ಕೊಟ್ಟ ಗಂಡ; ಪ್ರಧಾನಿ ಮೋದಿ ಗಮನಕ್ಕೆ ತಂದು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಉಪಮಹಾಪೌರೆ!

    ಕೆ.ಆರ್.ಪುರ: ಪತಿ ತಲಾಖ್ ಕೊಟ್ಟಿದ್ದಕ್ಕೆ ಹಾಗೂ ಆ ಸಂಬಂಧ ಪೊಲೀಸರು ಕೂಡ ದೌರ್ಜನ್ಯ ನಡೆಸಿದ್ದಕ್ಕೆ ಮತ್ತು ಬಿಜೆಪಿ ಶಾಸಕರ ವಿರುದ್ಧವೂ ಆರೋಪ ಹೊರಿಸಿದ ಬಿಬಿಎಂಪಿ ಮಾಜಿ ಉಪ ಮೇಯರ್ ಪ್ರಧಾನಿ ಮೋದಿಯವರ ಗಮನಕ್ಕೆ ತಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದೆ.

    ಬಿಬಿಎಂಪಿ ಮಾಜಿ ಉಪಮೇಯರ್ ಶಹತಾಜ್ ಖಾನಂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಪತಿ ಅನ್ವರ್ ಪಾಷಾ ತಲಾಖ್ ನೀಡಿದ್ದಾರೆ. ನನಗೆ ಆರು ಮಂದಿ ಮಕ್ಕಳಿದ್ದಾರೆ. ನೀವು ತಲಾಖ್ ರದ್ದು ಗೊಳಿಸಿದ್ರಿ. ಅದು ಇಡೀ ದೇಶವೇ ಹೆಮ್ಮ ಪಡುವ ವಿಷಯ. ಆದರೆ ನಾನು ಮಾಜಿ ಉಪಮಹಾಪೌರರಾಗಿದ್ದರೂ ಅದು ನನಗೆ ಅನ್ವಯಿಸುತ್ತಿಲ್ಲ. ಇನ್ನು ಸಾಮಾನ್ಯ ಮಹಿಳೆಯರಿಗೆ ಹೇಗೆ ಅನ್ವಯಿಸುತ್ತದೆಯೋ? ನನ್ನ ಪತಿ ಅನ್ವರ್ ಪಾಷಾ ನನಗೆ ತಲಾಖ್ ನೀಡಿದ್ದಾರೆ ಎಂದು ಫೇಸ್​ಬುಕ್​ನಲ್ಲಿ ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ ಹೇಳುತ್ತ ಶಹತಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ನನ್ನ ಗಂಡ ಅನ್ವರ್ ಪಾಷಾ ಖಾಸಗಿ ಶಾಲಾ ಕಾಲೇಜು ನಡೆಸುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಡಿಸಿಪಿ ಗಿರೀಶ್ ಅವರಿಗೂ ಮಾಹಿತಿ ನೀಡಿದ್ದೇನೆ. ಅದಾಗ್ಯೂ ನನಗೆ ಕೆ.ಆರ್. ಪುರ ಇನ್​ಸ್ಪೆಕ್ಟರ್​ ನಂದೀಶ್, ಎಎಸ್ಐ ಅನಿತಾ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಕಣ್ಣ ಮುಂದೆಯೇ ಪೋಲೀಸರ ದೌರ್ಜನ್ಯ, ನನ್ನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವಂತೆ ಸೆಕ್ಯೂರಿಟಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇದನ್ನ ನೋಡಿ ನಾನು ಸಹಿಸಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ ಎಂದು ಶಹತಾಜ್​ ತನ್ನ ಅಳಲು ತೋಡಿಕೊಂಡಿದ್ದಾರೆ.

    ಕೇಂದ್ರದಲ್ಲಿ ನೀವು ಮೋದಿಜೀ ಇದ್ದೀರಿ. ಇಲ್ಲಿ ನಾನು ವಾಸವಾಗಿರುವ ಕ್ಷೇತ್ರದಲ್ಲಿ ನಿಮ್ಮ ಬಿಜೆಪಿ ಶಾಸಕ ಬೈರತಿ ಬಸವರಾಜ್ ಇದ್ದಾರೆ. ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಇನ್​ಸ್ಪೆಕ್ಟರ್​ ನಂದೀಶ್ ನಿಮ್ಮ ಪಕ್ಷದ ಎಂಎಲ್​ಸಿ ಹೆಚ್. ವಿಶ್ವನಾಥ್ ಅಳಿಯ. ಆದ್ರೆ ಈ ದೇಶದಲ್ಲಿ ಮಹಿಳೆಯರಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    1991ರಲ್ಲಿ ಅನ್ವರ್ ಪಾಷಾ ಜೊತೆ ಮದುವೆಯಾಗಿತ್ತು. 2011ರಲ್ಲಿ ಪೇಪರ್ ಆ್ಯಡ್ ಮೂಲಕ ನನಗೆ ಡೈವರ್ಸ್ ಅಂತ ಕಳಿಸಿದ್ದ. ಇದರ ವಿರುದ್ಧ ನಾನು ಕೋರ್ಟ್​ಗೆ ಹೋಗಿದ್ದೆ, ಅಲ್ಲಿ ನನಗೆ ಜಯ ಸಿಕ್ಕಿದೆ. ಅವನೇ ನಿನ್ನ ಗಂಡ ಅಂತ ಕೋರ್ಟ್​ನಲ್ಲಿ ನನ್ನ ಪರ ಆಗಿದೆ. ಹಾಗಾಗಿ ಕೋರ್ಟ್ ಆದೇಶದ ಪರ ನಾನು ನನ್ನ ಗಂಡನ ಬಳಿ ಇರಬೇಕು. ಹಾಗಾಗಿ ನನ್ನ ಗಂಡ ಇರುವ ಕೆ.ಆರ್.ಪುರಕ್ಕೆ ಹೋಗಿದ್ದೆ. ಆದರೆ ಅಲ್ಲಿ ಆತ ಕೆ.ಆರ್.ಪುರ ಪೊಲೀಸರನ್ನು ಬಳಸಿಕೊಂಡು ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ. ಪೊಲೀಸರು ಕುಡಿದು ನನ್ನ ಮೇಲೆಯೇ ಹಲ್ಲೆ ಮಾಡಲು ಮುಂದಾಗ್ತಾರೆ. ನೀನು ಮಾಜಿ ತಾನೇ.. ನಿಂತೇ ಮಾತಾಡು ಅಂತ ಕೆ.ಆರ್.ಪುರ ಇನ್​ಸ್ಪೆಕ್ಟರ್​​ ನಂದೀಶ್ ಮೇಲೆ ಶಹತಾಜ್ ಆರೋಪ ಮಾಡಿದ್ದಾರೆ.

    ‘ನನ್ನನ್ಯಾರೋ ಕೊಲೆ ಮಾಡ್ತಾರೆ’ ಎಂದು ಪೊಲೀಸರಿಗೆ ಆಗಾಗ ಕರೆ ಮಾಡ್ತಿದ್ದ ಮಹಿಳೆಯ ಕೊಲೆ!

    ತಂದೆಯ ಕಣ್ಣೆದುರೇ ವಾಹನದಡಿಗೆ ಸಿಲುಕಿ ಸಾವಿಗೀಡಾದ ಹತ್ತು ವರ್ಷದ ಪುತ್ರ!

    ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಎಬಿವಿಪಿ ಧ್ವಜ; ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts