More

    ಹೈಕೋರ್ಟ್​ ಮುಂದೆ ಬಿಬಿಎಂಪಿ ಕಮಿಷನರ್​! ಅಕ್ರಮ ಕಟ್ಟಡ ತೆರವಿಗೆ ಡೆಡ್​ಲೈನ್​

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ತೆರವು ಸಂಬಂಧವಾಗಿ ಇಂದು ಕರ್ನಾಟಕ ಹೈಕೋರ್ಟ್ ಮುಂದೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಜರಾದರು. “ಹಲವು ಪ್ರಕರಣಗಳಲ್ಲಿ ಈ ಅಂಶ ಗಮನಕ್ಕೆ ಬಂದಿದೆ‌. ಹೈಕೋರ್ಟ್​ನ ಆದೇಶಗಳನ್ನು ಬಿಬಿಎಂಪಿ ಏಕೆ ಪಾಲಿಸುತ್ತಿಲ್ಲ?” ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಗುಪ್ತ ಅವರಿಗೆ ಪ್ರಶ್ನೆ ಹಾಕಿತು.

    ಈವರೆಗೆ ಎಷ್ಟು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ್ದೀರಿ? ಎಂಬ ಕೋರ್ಟ್​ ಪ್ರಶ್ನೆಗೆ ಉತ್ತರ ನೀಡಿದ ಬಿಬಿಎಂಪಿ ಪರ ಹಿರಿಯ ವಕೀಲರು, 2020ರ ನಂತರ ನಿರ್ಮಾಣವಾದ 5905 ಕಟ್ಟಡಗಳ ಸರ್ವೆ ಮಾಡಲಾಗಿದೆ. ಇವುಗಳಲ್ಲಿ 4279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 2591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೇ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂ ಕೋರ್ಟಿನಲ್ಲಿ ಬಾಕಿಯಿದೆ ಎಂದು ಹೇಳಿಕೆ ನೀಡಿದರು.

    ಇದನ್ನೂ ಓದಿ: ಆ ಒಂದು ಮಾತಿಗೆ ಆಕೆಯ ಉಸಿರನ್ನೇ ನಿಲ್ಲಿಸಿ ತಾನೂ ಸತ್ತ… ಛೇ ಇದೆಂಥಾ ಪ್ರೀತಿ?

    ಬಿಬಿಎಂಪಿ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ ಎಂದ ನ್ಯಾಯಪೀಠ, 2019 ರಲ್ಲಿ ಪಿಐಎಲ್ ದಾಖಲಾದ ಮೇಲೂ ಕ್ರಮ ಕೈಗೊಂಡಿಲ್ಲ. ನಕ್ಷೆಯಿಲ್ಲದ ಕಟ್ಟಡಗಳ ಮೇಲೆ ಕ್ರಮ ಏಕೆ ತೆಗೆದುಕೊಂಡಿಲ್ಲ. ಅಕ್ರಮ ಕಟ್ಟಡ ನೆಲಸಮ ಮಾಡಲು ಹೆದರುತ್ತಿರುವುದೇಕೆ? ಎಂದು ಪ್ರಶ್ನಿಸಿತು. ಇದು ತೀರಾ ಆಘಾತಕಾರಿ ವಿಚಾರ. ಬೇಗ ಕ್ರಮ ಕೈಗೊಂಡರೆ ನಿಮಗೂ ಒಳ್ಳೆಯದು ಎಂದಿತು.

    ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡ ತೆರವುಗೊಳಿಸಲೇಬೇಕು ಎಂದ ಹೈಕೋರ್ಟ್​, ತೆರವುಗೊಳಿಸಿದ ಫೋಟೋಸಹಿತ ವರದಿಯನ್ನು ಸಲ್ಲಿಸಲು ಬಿಬಿಎಂಪಿಗೆ ಸೂಚಿಸಿತು. ಸರ್ವೆ ಕಾರ್ಯವನ್ನೂ ಪೂರ್ಣಗೊಳಿಸಿ ಡಿಸೆಂಬರ್​ 9 ರೊಳಗೆ ವರದಿ ನೀಡಲು ತಾಕೀತು ಮಾಡಿತು.

    ರಾಜ್ಯ ಸರ್ಕಾರಿ ನೌಕರರಿಗೂ ಸಿಹಿಸುದ್ದಿ: ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ

    10 ವರ್ಷದ ಹಿಂದೆ ಶಾರುಖ್​ನ ತಡೆಹಿಡಿದಿದ್ದರು, ಎನ್​ಸಿಬಿ ನಿರ್ದೇಶಕ ಸಮೀರ್​ ವಾಂಖೇಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts