More

    ಈ ಸಲ ಬಜೆಟ್​ನಲ್ಲಿ ನಿಮಗೇನು ಬೇಕು, ನೀವೇ ಹೇಳಿ; ನಿಮ್ಮ ಬಳಿಗೇ ಬರಲಿದೆ ವಾಹನ, ಸಲಹೆ ನೀಡಿ..

    ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ನನ್ನ ನಗರ ನನ್ನ ಬಜೆಟ್’ 2023-24 ಅಭಿಯಾನಕ್ಕೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಗುರುವಾರ ಚಾಲನೆ ನೀಡಿದರು. ಒಂದು ತಿಂಗಳ ಕಾಲ 243 ವಾರ್ಡ್‌ಗಳಲ್ಲಿ ಬಜೆಟ್ ಅಭಿಯಾನದ ವಾಹನ ಸಂಚಾರಿಸಿ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲಿದೆ.

    ಅಯವ್ಯಯದ ಪೂರಕವಾಗಿ ಜನಾಗ್ರಹ ಸಂಸ್ಥೆ, ನಗರ ಬಜೆಟ್‌ಗಾಗಿ ಸಾರ್ವಜನಿಕ ಸಲಹೆಗಳ ಸ್ವೀಕಾರ ಕಾರ್ಯ ಮಾಡುತ್ತಿದೆ. ಅದರಂತೆ ಈ ಬಾರಿಯೂ ಸಂಸ್ಥೆ ಹಮ್ಮಿಕೊಂಡಿರುವ ‘ನನ್ನ ನಗರ ನನ್ನ ಬಜೆಟ್’ ಅಭಿಯಾನದಡಿ ರಸ್ತೆ ಪಾದಚಾರಿ ಮಾರ್ಗ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ನಗರದ ಜನತೆ ತಮ್ಮ ಸಲಹೆ ನೀಡಬಹುದು.

    ಏಳು ವರ್ಷಗಳಿಂದ ಬಜೆಟ್ ಅಭಿಯಾನ ನಡೆದುಕೊಂಡು ಬರುತ್ತಿದೆ. 2023-2024ನೇ ಸಾಲಿನ ಆಯವ್ಯಯದಲ್ಲಿ ಯಾವೆಲ್ಲ ಕೆಲಸ ಆಗಬೇಕು ಎಂಬುದರ ಬಗ್ಗೆ ಮುಂದಿನ ಒಂದು ತಿಂಗಳು ಬಜೆಟ್ ವಾಹನ ನಗರದಾದ್ಯಂತ ಸಂಚರಿಸಿ ಸಲಹೆಗಳನ್ನು ಸಂಗ್ರಹಿಸಲಿದೆ. ನಂತರ ಜನಾಗ್ರಹ ಸಂಸ್ಥೆಯು ನಾಗರಿಕರು ನೀಡಿರುವ ಸಲಹೆಗಳನ್ನು ಒಟ್ಟುಗೂಡಿಸಿ ಪಾಲಿಕೆಗೆ ವರದಿ ಸಲ್ಲಿಸಲಿದೆ. ನಾಗರಿಕರು ನೀಡಿರುವ ಸಲಹೆಗಳನ್ನು ಆಯವ್ಯಯದಲ್ಲಿ ಸೇರ್ಪಡೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಜಯರಾಂ ಹೇಳಿದರು.

    ಈ ಸಲ ಬಜೆಟ್​ನಲ್ಲಿ ನಿಮಗೇನು ಬೇಕು, ನೀವೇ ಹೇಳಿ; ನಿಮ್ಮ ಬಳಿಗೇ ಬರಲಿದೆ ವಾಹನ, ಸಲಹೆ ನೀಡಿ..

    ಕಳೆದ ವರ್ಷದ ಆಯವ್ಯಯದಲ್ಲಿ 198 ವಾರ್ಡ್‌ಗಳ ಪೈಕಿ ಪ್ರತಿ ವಾರ್ಡ್‌ಗೆ ತಲಾ 1 ಕೋಟಿ ರೂ. ನಿಗದಿಪಡಿಸಲಾಗಿತ್ತು. ವಾರ್ಡ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ 70 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಬಾಕಿ 30 ಲಕ್ಷ ರೂ. ರಸ್ತೆ ಗುಂಡಿ ಮುಚ್ಚಲು ವ್ಯಯಿಸಲಾಗುತ್ತದೆ. ವಾರ್ಡ್​​ಗಳಿಗೆ ಹೆಚ್ಚು ಅನುದಾನ ನೀಡಬೇಕೆಂಬ ಒತ್ತಾಯ ಇದೆ. ಇದನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಈ ಸಲ ಬಜೆಟ್​ನಲ್ಲಿ ನಿಮಗೇನು ಬೇಕು, ನೀವೇ ಹೇಳಿ; ನಿಮ್ಮ ಬಳಿಗೇ ಬರಲಿದೆ ವಾಹನ, ಸಲಹೆ ನೀಡಿ..

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಬಜರಂಗದಳದ ಹರ್ಷ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಗೂ ಸಿಕ್ತು ಜಾಮೀನು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts