More

  VIDEO| ಯುವಿ ಮಾದರಿಯಲ್ಲೇ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ ನ್ಯೂಜಿಲೆಂಡ್​ ಬ್ಯಾಟ್ಸ್​ಮನ್!

  ವೆಲ್ಲಿಂಗ್ಟನ್​: ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​, 2007ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದು ಇಂದಿಗೂ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಇದೀಗ ಯುವಿ ಮಾದರಿಯಲ್ಲೇ ನ್ಯೂಜಿಲೆಂಡ್​ ಕ್ರಿಕೆಟರ್ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸುವ ಮೂಲಕ ಮತ್ತೊಮ್ಮೆ ಯುವಿಯನ್ನು ನೆನೆಯುವಂತೆ ಮಾಡಿದ್ದಾರೆ.​

  ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಟ್​ ಟಿ20 ಲೀಗ್​ನ ಭಾನುವಾರದ ಪಂದ್ಯದಲ್ಲಿ ಬ್ಯಾಟ್ಸ್​ಮನ್​ ಲಿಯೋ ಕಾರ್ಟರ್​ ಅಮೋಘ ಪ್ರದರ್ಶನ ನೀಡಿದರು. ಕಾರ್ಟರ್​ ತಮ್ಮ ತಂಡ ಕಾಂಟೆರ್​ಬರಿ ಕಿಂಗ್ಸ್​ ಪರ ನಾರ್ಥರ್ನ್​ ನೈಟ್ಸ್​ ಎದುರು ಉತ್ತಮ ರನ್​ ರಣಿಕೆ ನೀಡಿದರು. ನಾರ್ಥರ್ನ್​ ನೈಟ್ಸ್​ ತಂಡದ ಸ್ಪಿನ್ನರ್​ ಆ್ಯಂಟನ್​ ಡೆವಿಚ್​ ಎಸೆದ 16ನೇ ಓವರ್​ನ ಪ್ರತಿ ಬಾಲ್​ ಅನ್ನು ಕಾರ್ಟರ್​ ಬೌಂಡರಿ ಗೆರೆಯಿಂದಾಚೆಗೆ ಅಟ್ಟಿದರು.

  ಮೊದಲು ಬ್ಯಾಟ್​ ಮಾಡಿದ ನಾರ್ಥರ್ನ್​ ನೈಟ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 219 ರನ್​ ಗಳಿಸಿತು. ಗುರಿ ಬೆನ್ನತ್ತಿದ ಕಾಂಟೆರ್​ಬರಿ ಕಿಂಗ್ಸ್​ ತಂಡ 104 ರನ್​ 3 ವಿಕೆಟ್​ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಈ ವೇಳೆ 11ನೇ ಓವರ್​ನಲ್ಲಿ ಲಿಯೋ ಕಾರ್ಟರ್​ ಮೈದಾನಕ್ಕೆ ಆಗಮಿಸಿದರು. ಪ್ರಾರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ ಮಾಡಿ 15ನೇ ಓವರ್​ ಅಂತ್ಯಕ್ಕೆ 12 ಎಸೆತಗಳಲ್ಲಿ ಕೇವಲ 11 ರನ್​ ಕಲೆಹಾಕಿದ್ದರು. ಆದರೆ, ಕಾರ್ಟರ್​ ಜತೆಯಾಗಿದ್ದ ಕೊಲ್​ ಮೆಕೆಂಜಿ ಅಬ್ಬರದ ಆಟವಾಡಿ 19 ಎಸೆತಗಳಲ್ಲಿ 43 ರನ್​ ಗಳಿಸಿದ್ದರು. ಈ ಸಮಯದಲ್ಲಿ ಕಿಂಗ್ಸ್​ 156 ರನ್​ ಗಳಿಸಿತ್ತು.

  ಇಲ್ಲಿಂದಾಚೆಗೆ ಘರ್ಜಿಸಿದ ಲಿಯೋ ಕಾರ್ಟರ್​, 16ನೇ ಓವರ್​ನ ಎಲ್ಲಾ ಎಸೆತಗಳನ್ನು ಸಿಕ್ಸರ್​ ಗಡಿ ದಾಟಿಸಿದರು. ಇದಕ್ಕೂ ಮುನ್ನ 30 ಎಸೆತಕ್ಕೆ 64 ರನ್​ ಗುರಿ ಇದ್ದುದ್ದನ್ನು 24 ಎಸೆತಕ್ಕೆ 28 ರನ್​ಗೆ ತಂದರು. ಕೊನೆಗೂ 18.5 ಒವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಕಿಂಗ್ಸ್​ ತಂಡ ಗೆಲುವಿನ ಸಿಹಿಯನ್ನುಂಡಿತು. ಸ್ಫೋಟಕ ಆಟವಾಡಿದ ಕಾರ್ಟರ್​, 29 ಎಸೆತಗಳಲ್ಲಿ 7 ಸಿಕ್ಸರ್​, 3 ಬೌಂಡರಿ ಸೇರಿದಂತೆ 70 ರನ್​ ಗಳಿಸಿ ಅಜೇಯರಾಗಿ ಉಳಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts