More

    ಜನರಲ್ಲಿ ಹೃದಯವಂತಿಕೆಯ ಕೊರತೆ

    ಮಂಡ್ಯ: ಪ್ರಸ್ತುತ ದಿನಗಳಲ್ಲಿ ಜನರು ಆರ್ಥಿಕವಾಗಿ ಸದೃಢವಾಗಿದ್ದರೂ ಹೃದಯವಂತಿಕೆ ಕೊರತೆ ಇದೆ ಎಂದು ಹಿರಿಯ ವಕೀಲ ಬಸವಯ್ಯ ವಿಷಾದಿಸಿದರು.

    ನಗರದ ವ್ಯಾಸರಾಜ ಮಠದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

    ಈ ಹಿಂದೆ ಜನರಲ್ಲಿ ಹಣದ ಕೊರತೆ ಮಾತ್ರ ಇತ್ತು. ಆದರೆ, ಹೃದಯ ಶ್ರೀಮಂತಿಕೆ ಮತ್ತು ಹೃದಯ ವೈಶಾಲ್ಯತೆಗೆ ಧಕ್ಕೆ ಇರಲಿಲ್ಲ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಆರ್ಥಿಕ ಶಕ್ತಿ ಇದ್ದರೂ ಹೃದಯವಂತಿಕೆ ಇಲ್ಲದಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

    ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ನಾಡಿನಲ್ಲಿ ವಿಶಿಷ್ಟತೆ ಕಾಯ್ದುಕೊಂಡು ಬಂದಿರುವ ಕರಾವಳಿ ಜನರ ಜೀವನ ಮತ್ತು ಸಂಸ್ಕೃತಿ ಮಾದರಿ. ಅವರು ಜಿಲ್ಲೆಗೆ ನೀಡಿರುವ ಮಹತ್ವವಾದದ್ದು ಎಂದು ಬಣ್ಣಿಸಿದರು.

    ವೈದ್ಯರಾದ ಡಾ.ಎಂ.ಆರ್.ಅನುಪಮಾ, ಡಾ.ಪಿ.ಎಂ. ಜಗದೀಶ್‌ಕುಮಾರ್, ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಡಿ.ದೊಡ್ಡಾಚಾರ್, ವಿದುಷಿ ಸುನೀತಾ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.

    ಒಕ್ಕೂಟದ ಅಧ್ಯಕ್ಷ ಎಸ್.ಶ್ರೀನಿವಾಸಶೆಟ್ಟಿ, ಗೌರವಾಧ್ಯಕ್ಷ ಡಾ.ಜಗನ್ನಾಥ ಎಸ್.ಶೆಟ್ಟಿ, ಗಣೇಶ ನಾರಾಯಣ ಹೆಗಡೆ, ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಭಾರತೀ ಅಡಿಗ, ಮಂಜುನಾಥ ಹೆಗಡೆ, ಸುಧಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts