More

    ಬಸವೇಶ್ವರ ಜಿಲ್ಲೆ ನಾಮಕರಣ ಅಪ್ರಸ್ತುತ, ಸಚಿವ ಶಿವಾನಂದ ಪಾಟೀಲ ಹೀಗೆ ಹೇಳಿದ್ದೇಕೆ?

    ವಿಜಯಪುರ: ಗೋಳಗುಮ್ಮಟ ಹಾಗೂ ಐತಿಹಾಸಿಕ ಸ್ಮಾರಕಗಳಿಂದಾಗಿ ಜಗತ್ಪ್ರಸಿದ್ಧಿ ಪಡೆದಿರುವ ವಿಜಯಪುರ ಜಿಲ್ಲೆಗೆ ಬಸವ ನಾಡು ಎಂಬ ನಾಮಕರಣ ಮಾಡುವುದು ಅಪ್ರಸ್ತುತ ಎಂದು ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದರು.

    ಅಧಿಕಾರವಕಾಶ ಇರುವ ಯಾರೇ ಆಗಲಿ ಬಸವಣ್ಣನವರ ಕರ್ಮಭೂಮಿಯಾಗಲಿ, ಜನ್ಮ ಭೂಮಿಯಾಗಲಿ ಅಥವಾ ಐಕ್ಯ ಸ್ಥಳವಾಗಲಿ ಅದರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕರ್ಮಭೂಮಿ ಬೀದರ್‌ನಲ್ಲಿಯೇ ಇನ್ನೂ ಅಭಿವೃದ್ಧಿಯಾಗಿಲ್ಲ. ಬಸವ ಜನ್ಮ ಭೂಮಿ ಬಸವನಬಾಗೇವಾಡಿ ಇಲ್ಲವೇ ಐಕ್ಯಸ್ಥಳ ಕೂಡಲಸಂಗಮ ಅಭಿವೃದ್ಧಿಯೇ ಇನ್ನೂ ಆಗಿಲ್ಲ. ಮೊದಲು ಆ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ರಾಜಕೀಯ ಲಾಭಕ್ಕಾಗಿ ನಾಮಕರಣ ವಿಚಾರ ಎತ್ತಿದ್ದರೆ ಅದು ತಪ್ಪು. ಯಾರೇ ಆಗಿರಲಿ, ನಮ್ಮವರೇ ಇರಲಿ, ಬೇರೆಯವರೇ ಇರಲಿ ಇಂಥದ್ದು ಮಾಡುವುದು ಸರಿಯಲ್ಲ. ಇತಿಹಾಸ ತಿರುಚುವ ಬದಲು ನೈಜವಾಗಿಸಲು ಪ್ರಯತ್ನಿಸಬೇಕು. ಬಸವಣ್ಣನವರ ಕುರುಹು ಉಳಿಸಲು ಪ್ರಯತ್ನಿಸಬೇಕು. ಜಗತ್ತಿಗೆ ಬಸವಣ್ಣನವರ ಸಾಧನೆ ತೋರಿಸುವಂತೆ ಏನಾದರೊಂದು ಕಾರ್ಯ ಬಸವ ಜನ್ಮಭೂಮಿಯಲ್ಲಾಗಲಿ ಎಂದರು.

    ಬಸವಣ್ಣನ ಬಗ್ಗೆ ಅಭಿಮಾನವಿದೆ. ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆಂದರೆ ಎಂದೂ ಸಾಧ್ಯವಿಲ್ಲ. ಬಸವಣ್ಣನವರ ಅಭಿಮಾನಿ ಇರಬಹುದು. ಅಧಿಕಾರದಲ್ಲಿರುವ ಯಾರೇ ಆಗಲಿ ಬಸವಣ್ಣನವರ ಕುರುಹು ಉಳಿಸುವ ಕೆಲಸ ಮಾಡಬೇಕು. ಈ ಹಿಂದೆ ಪ್ರತ್ಯೇಕ ಪ್ರಾಧಿಕಾರ ಮಾಡುವುದಾಗಿ ಸಿದ್ದರಾಮಯ್ಯನವರೇ ಹೇಳಿದ್ದರು. ಆ ನಿಟ್ಟಿನಲ್ಲಿ ಅವರನ್ನು ಒತ್ತಾಯಿಸುವೆ. ಕೇವಲ ಪ್ರಾಧಿಕಾರ ಸ್ಥಾಪಿಸಿದರೆ ಸಾಲದು ಸೂಕ್ತ ಅನುದಾನ ನೀಡಬೇಕು ಎಂದರು.

    ರಾಜ್ಯಕ್ಕೆ ಬಸವನಾಡು ಎಂದು ಹೆಸರಿಸುವುದು ಸೂಕ್ತವಾದ ವಿಚಾರವಲ್ಲ. ಆ ರೀತಿ ರಾಜಕೀಯ ಗಿಮಿಕ್‌ಗಾಗಿ ಮಾಡಬಾರದು. ರಾಷ್ಟ್ರೀಯ ವಿಚಾರದ ದೃಷ್ಠಿಕೋನದಿಂದ ನೋಡಬೇಕೆ ವಿನಃ ರಾಜಕೀಯ ದೃಷ್ಠಿಯಿಂದ ನೋಡಿದರ ಆಭಾಸ ಎನ್ನಿಸುತ್ತದೆ. ಲೋಕಸಭೆ ಚುನಾವಣೆ ದೃಷ್ಠಿಯಿಂದ ಮಾಡಿದ್ದರೆ ಅದು ನಮ್ಮವರೇ ಆಗಲಿ, ಬೇರೆಯವರೇ ಆಗಲಿ ಮಾಡಿದರೆ ಅದು ತಪ್ಪು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts