More

    ‘ನಾನು ಸಿಎಂ ಆಗೋದು ಗ್ಯಾರೆಂಟಿ, ಬಿಎಸ್ವೈ ಅವಧಿ ನಂತ್ರವೋ ಮಧ್ಯದಲ್ಲೋ ಗೊತ್ತಿಲ್ಲ’ ಅಂದಿದ್ರು ಯತ್ನಾಳ್​!

    ಚಿತ್ರದುರ್ಗ: ಇವತ್ತಿನ ರಾಜಕಾರಣದಲ್ಲಿ ನೈತಿಕತೆ ಎಂಬುದು ಉಳಿದಿಲ್ಲ,ಮೂರು ಪಕ್ಷಗಳು ಮತದಾರರಿಗೆ ಹಣ,ಸೆರೆ ಹಂಚುವ ಕೆಲಸ ಮಾಡುತ್ತಿವೆ. ಗೆದ್ದವರು ಅಧಿಕಾರ ನಡೆಸಿದರೆ ಉಳಿದವರು ಟೋಪಿ ಹಾಕಿಸಿಕೊಂಡು ಮನೆಯಲ್ಲಿ ಕೂರುತ್ತಾರೆ ಎಂದು ಮಾಜಿ ಶಿಕ್ಷಣ ಸಚಿವ ಬಸವ ರಾಜ ಹೊರಟ್ಟಿ ಹೇಳಿದರು.

    ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಮತದಾನ ನಡೆಯುತ್ತಿರುವ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಸುದ್ದಿಗಾರರೊಂದಿಗೆ ಮಾತನಾಡಿ,ಜನ ಹಾಗೂ ನಮ್ಮವರು(ರಾಜಕಾರಣಿಗಳು)ಕೆಟ್ಟಿದ್ದಾರೆ. ನನ್ನನ್ನೂ ಸೇರಿದಂತೆ ನೈತಿಕತೆ ಎಂಬುದು ಯಾರಲ್ಲೂ ಉಳಿದಿಲ್ಲ. ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಹಿಂದೇಯೆ ಹೋಗಿದೆ. ನಾವೊಂದು ರೀತಿಯಲ್ಲಿ ಡ್ರಗ್ ಆಡಿಕ್ಟಗಳಂತೆ ಆಗಿದ್ದೇವೆ, ರಾಜಕಾರಣವನ್ನು ಬಿಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಕಲಿತವರು ವೋಟಿಗೆ ದುಡ್ಡು ಕೇಳುವುದು ಸರಿಯಲ್ಲ. ನನಗೆ ಒಬ್ಬರು ಪೋನ್ ಮಾಡಿ ಅವರು 1500 ರೂ.,ಇವರು 1000 ಕೊಡುತ್ತಾರೆ,ನೀವು ಎಷ್ಟು ಕೊಡುತ್ತೀರಿ ಎಂದು ಕೇಳಿದರು. ಆದರೆ ನಾವು ದುಡ್ಡು ಕೊಡುವುದಿಲ್ಲವೆಂದು ಅವರಿಗೆ ತಿಳಿಸಿದೆ.

    ಕಾಂಗ್ರೆಸ್,ಬಿಜೆಪಿ ಸರ್ಕಾರಿ ನೌಕರರು,ಪದವೀಧರರು ಮತ್ತು ಶಿಕ್ಷಕರಿಗೆ ಏನು ಮಾಡಿದೆ ಎಂಬುದನ್ನು ಹೇಳಲಿ. ಆದರೆ ಜನತಾ ಪರಿವಾರ ಅಧಿಕಾರದಲ್ಲಿದ್ದಾಗ ಅವರಿಗಾಗಿಯೇ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಹಾಗೂ ಸತ್ಯನಾರಾಯ ಣರ ಅಭಿವೃದ್ಧಿ ಕೆಲಸದಿಂದಾಗಿ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಆರ್.ಆರ್.ನಗರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ.

    ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಹೈಕಮಾಂಡ್ ಕುಮ್ಮಕ್ಕಿದೆ. ಇಲ್ಲವಾದಲ್ಲಿ ಅವರು ಈ ಹೊತ್ತಿಗೆ ಸಸ್ಪೆಂಡ್ ಆಗ ಬೇಕಿತ್ತು. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಹಿರಂಗ ಹೇಳಿಕೆ ಕೊಡುವ ಮೊದಲು ಯತ್ನಾಳ್ ಅವರೇ ನನ್ನ ಬಳಿ ಹೇಳಿದ್ದರು. ಅದು ಯಡಿಯೂರಪ್ಪ ಅವಧಿ ಪೂರ್ಣವಾದ ಬಳಿಕವೋ ಅಥವಾ ಮಧ್ಯದಲ್ಲೇ ಎಂಬುದು ಗೊತ್ತಿಲ್ಲವೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts