More

    ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ : ಬೊಮ್ಮಾಯಿ

    74 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಿಟಿಟಿಸಿ ಕೇಂದ್ರಕ್ಕೆ ಶಂಕುಸ್ಥಾಪನೆ

    ಹಾವೇರಿ: ಕೋವಿಡ್ ಬಂದರೂ ಆರ್ಥಿಕವಾಗಿ ರಾಜ್ಯ ಪ್ರಗತಿ ಕಂಡಿದೆ. ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಪಿಎಫ್, ಇಎಸ್​​ಐ ದಾಖಲೆ ಆಧಾರದಲ್ಲಿ ಈ ಮಾಹಿತಿ ಕೊಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

    ಶಿಗ್ಗಾಂವಿ ತಾಲೂಕಿನ ಕಲ್ಯಾಣ ಗ್ರಾಮದಲ್ಲಿ 74 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಿಟಿಟಿಸಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು, ನಾನು ಸಿಎಂ ಆದ ಬಳಿಕ ಪ್ರತಿ ವರ್ಷ 1.80 ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಿದ್ದೇವೆ. ಜಿಟಿಟಿಸಿ ಪ್ರಮುಖವಾದ ಸಂಸ್ಥೆ. ನಾನು ಇಂಜಿನಿಯರಿಂಗ್ ಪದವಿ ಮುಗಿಸಿದ‌ ನಂತರ 1982ರಲ್ಲಿ ಆರು ತಿಂಗಳು ಬೆಂಗಳೂರು ಜಿಟಿಟಿಸಿಯಲ್ಲಿ ತರಬೇತಿ ಪಡೆದಿದ್ದೇನೆ. ಇಂಜಿನಿಯರಿಂಗ್ ಗಿಂತ ಹತ್ತು ಪಟ್ಟು ಹೆಚ್ಚು ಜಿಟಿಟಿಸಿಯಲ್ಲಿ ಕಲಿತಿದ್ದೇನೆ. ಇಲ್ಲಿ ಕಲಿತ ಪರಿಣಾಮ ಟಾಟಾ ಕಂಪನಿಗೆ ಆಯ್ಕೆ ಆದೆ. ಇಲ್ಲಿ ಕಲಿತ ಎಲ್ಲರಿಗೂ ಶೇ.100ರಷ್ಟು ಉದ್ಯೋಗ ಸಿಗುತ್ತದೆ. ತರಬೇತಿ ತುಂಬ ಚೆನ್ನಾಗಿ ಇರುತ್ತದೆ. ಶೇ.50% ರಷ್ಟು ಜಿಟಿಟಿಸಿಗೆ, ಶೆ. 50%ರಷ್ಟು ಯೋಗ್ಯತೆಗೆ ಅಂಕ ಕೊಡಲಾಗುತ್ತದೆ ಎಂದರು.

    ಇದನ್ನೂ ಓದಿ:  ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!
    ಜಿಟಿಟಿಸಿಗೆ ಹೆಚ್ಚು ಒತ್ತು ನೀಡಿದ್ದೇವೆ. ಪಿಯುಸಿ ಫೇಲ್ ಆದವರಿಗೂ ತರಬೇತಿ ಕೊಟ್ಟು ಉದ್ಯೋಗ ಕೊಡಿಸುವ ಗುರಿ ಈ ಕೇಂದ್ರದ ಮೂಲಕ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಸಿಗಲಿದೆ. ಕ್ಷೇತ್ರದಲ್ಲಿ ಕೆಎಸ್ ಆರ್ ಟಿಸಿ ಐಟಿಐ, ಪಾಲಿಟೆಕ್ನಿಕ್, ವೆಟರ್ನರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದೆ. ಇಂತಹ ಕೇಂದ್ರಗಳ ಸಂಖ್ಯೆ ಹೆಚ್ಚಾದಲ್ಲಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಜನಸಂಖ್ಯೆ ದೇಶ ಮುನ್ನಡೆಸಲು ಅಡ್ಡಿ ಇದೆ ಎನ್ನುತ್ತಾರೆ. ಆದರೆ, ಮೋದಿ ಅವರು ಜನಸಂಖ್ಯೆಯೇ ನಮ್ಮ ಆಸ್ತಿ ಎನ್ನುತ್ತಾರೆ. ಕೌಶಲ ನೀಡುವುದಕ್ಕಾಗಿ ಕೌಶಲ ಭಾರತ ಯೋಜನೆ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ:  ‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..
    ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ,‌ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಇತರರು ಭಾಗಿಯಾಗಿದ್ದರು.

    ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಪ್ರತಿನಿತ್ಯ ಕರಾಳ ದಿನವಾಗಿದೆ; ಡಿ‌ ಕೆ ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts