More

    ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಪ್ರತಿನಿತ್ಯ ಕರಾಳ ದಿನವಾಗಿದೆ; ಡಿ‌ ಕೆ ಶಿವಕುಮಾರ್

    ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದೆ. ಲಿಂಗಾಯತರಿಗೆ 2D ಮೀಸಲಾತಿ, ಒಕ್ಕಲಿಗರಿಗೆ 2C ಮೀಸಲಾತಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಮುಸ್ಲಿಮರಿಗೆ 2B ಮೀಸಲಾತಿ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ‌ನಾಯಕರ ಜಂಟಿ ಸುದ್ದಿಗೊಷ್ಠಿ ಮಾಡಿದ್ದು. ಬಿಜೆಪಿ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​​ಸಿ- ಎಸ್​ಟಿ ಮೀಸಲು ಇಷ್ಟು ದಿನ ಏಕೆ ಹಾಗೆ ಇಟ್ಟಿರಿ? ಅಲ್ಪ ಸಂಖ್ಯಾತರ ಶೇ.4 ಮೀಸಲು ಏಕೆ ತೆಗೆದು ಹಾಕಿದ್ದೀರಾ? ವೀರಶೈವರು, ಒಕ್ಕಲಿಗರು ಭಿಕ್ಷುಕರೇ? ನಿಮಗೆ ದಲಿತರು, ಅಲ್ಪಸಂಖ್ಯಾತರು ಯಾರು ನಿಮಗೆ ಬೇಡವಾಗಿದ್ದಾರಾ? ಎಂದು ಪ್ರಶ್ನೆ ಮಾಡುವ ಮೂಲಕವಾಗಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

     ಇದನ್ನೂ ಓದಿ: ತಂದೆ ಮೃತ್ಯು: 5 ವರ್ಷದ ಮಗನ ಕೈ ಹಿಡಿದ ಪೊಲೀಸ್‌ ಹುದ್ದೆ!

    ‘ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಪ್ರತಿ ದಿನ ಕರಾಳ ದಿನವಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿವೆ. ದೇಶದ ಉದ್ದಗಲಕ್ಕೂ ಜನ ಹೋರಾಟಕ್ಕೆ ಸಜ್ಜಾಗಿದ್ದಾರೆ. ತೊಂಬತ್ತು ದಿನದಲ್ಲಿ ಮೀಸಲನ್ನು ಮೂರು ಬಾರಿ ಬದಲಾವಣೆ ಮಾಡಿದ್ದಾರೆ. ಯಾವ ಆಯೋಗ ಪೂರ್ಣ ವರದಿಕೊಟ್ಟಿಲ್ಲ. ಮೀಸಲಾತಿ ಇವರ ಮನೆ ಆಸ್ತಿನಾ? ಅವರಿವರೇ ಬರೆದುಕೊಂಡು ತೀರ್ಮಾನ‌ ಮಾಡಿದ್ದಾರೆ. ಇಲ್ಲಿ ಯಾರೂ ಭಿಕ್ಷುಕರಲ್ಲ. ಎಸ್​​ಸಿ- ಎಸ್​ಟಿ ಮೀಸಲು ಇಷ್ಟು ದಿನ ಏಕೆ ಹಾಗೆ ಇಟ್ಟಿರಿ? ಅಲ್ಪ ಸಂಖ್ಯಾತರ ಶೇ.4 ಮೀಸಲು ಏಕೆ ಕಿತ್ತಿರಿ? ವೀರಶೈವರು ಒಕ್ಕಲಿಗರು ಭಿಕ್ಷುಕರೇ?” ಎಂದು ಆಢಳಿತ ಸರ್ಕಾರದ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ.

    ಇದನ್ನೂ ಓದಿ: ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!

    ಸರ್ಕಾರ ಈಗ ಕೈಗೊಂಡ ಎಲ್ಲ ತೀರ್ಮಾನವನ್ನು ರದ್ದು ಮಾಡುತ್ತೇವೆ. ನಾಲ್ಕು ಮಂದಿ ಸ್ವಾಮೀಜಿಗೆ ಫೋನ್ ಮಾಡಿ ಹೆದರಿಸುತ್ತೀರಾ? ಕಾನೂನು ಇಲಾಖೆ ಇದೆಯೇ? ಸರ್ಕಾರದ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..
    ಇದೇ ವೇಳೆ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, “ಬಸವರಾಜ ಬೊಮ್ಮಾಯಿ ರಾಜ್ಯದ ಶಕುನಿಯಂ ತಾಗಿದ್ದಾರೆ. ಕರ್ನಾಟಕದ ಪಾಂಡವರನ್ನು ಸೋಲಿಸಲು ಸಾಧ್ಯವಿಲ್ಲ. ಬೊಮ್ಮಾಯಿ ಅವರದ್ದು 420 ಸರ್ಕಾರವಾಗಿದೆ. ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಗೊತ್ತಾದ ಮೇಲೆ ಈ ರೀತಿ ಮೀಸಲು ತೀರ್ಮಾನ ಮಾಡಿ ಗೊಂದಲ ಎಬ್ಬಿಸುವ ಕೆಲಸ ಮಾಡಿದ್ದಾರೆ. ಮೂರು ತಿಂಗಳಲ್ಲಿ ಮೂರು ಬಾರಿ‌ ಮೀಸಲು ಬದಲಿಸಿರುವುದು ದೇಶದಲ್ಲಿ ಈ ಹಿಂದೆ ನಡೆದಿಲ್ಲ‌. ಇದು ವಿಭಜನೆ ರಾಜಕಾರಣವಾಗಿದೆ” ಎಂದಿದ್ದಾರೆ.

    ಎಸ್​​ಸಿ- ಎಸ್​ಟಿ ಮೀಸಲು ಹೆಚ್ಚಳ ಶಿಫಾರಸನ್ನು ಸರ್ಕಾರದ ಕೊನೆ ಹಂತದಲ್ಲಿ ತಂದಿದೆ. ಇದು ಮಾನ್ಯವಾಗಲ್ಲ, ಏಕೆಂದರೆ ಶೇ.50 ಮೀಸಲು‌ ಮಿತಿ ದಾಟಲಿದೆ. ಒಕ್ಕಲಿಗ ಹಾಗೂ ಲಿಂಗಾಯತ ಮೀಸಲು ಕೆಟಗರಿ ಬದಲು ಮಾಡಿರುವುದು ಕೋರ್ಟ್‌ನಲ್ಲಿ ಪ್ರಶ್ನೆಯಾಗಿದೆ. ಈಗ ಮಾಡಿರುವ ತೀರ್ಮಾನ‌ಕೂಡ ಮಾನ್ಯವಾಗಲ್ಲ. ಗೊಂದಲ‌ ಮೂಡಿಸುವುದಷ್ಟೇ ಅವರ ಉದ್ದೇಶ. ಇದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ಪ್ರಜಾಪ್ರಭುತ್ವದ ಅಣಕ ಎಂದು ಬಿಜೆಪಿ ಸರ್ಕಾರದ ನಿಲುವಿನ ಕುರಿತಾಗಿ ಕಿಡಿಕಾರಿದ್ದಾರೆ.

    ಕಾಂಗ್ರೆಸ್ ‌ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ, ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಅಬ್ದುಲ್ ಜಬ್ಬಾರ್ ಭಾಗಿಯಾಗಿದ್ದರು.

    4.5 ಲಕ್ಷ ರೂ.ಗೆ ನವಜಾತ ಶಿಶುವನ್ನು ಮಾರಾಟ ಮಾಡಿದ ತಾಯಿ, 11 ಮಂದಿ ಅರೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts