More

    ಬಸವಣ್ಣ ಸಾಂಸ್ಕೃತಿಕ ನಾಯಕ; ರಾಜ್ಯ ಸರ್ಕಾರದ ನಿರ್ಣಯದಿಂದ ಅಮಿತ ಸಂತಸ: ಬಸವಾಶ್ರಮದ ಮಾತೆ ಶರಣಾಂಬಿಕೆ

    ಶಿಕಾರಿಪುರ: ಕ್ರಾಂತಿಯೋಗಿ ಅಣ್ಣ ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸೂಕ್ತವಾಗಿದೆ ಎಂದು ಬಸವಾಶ್ರಮದ ಮಾತೆ ಶರಣಾಂಬಿಕೆ ಹೇಳಿದರು.

    ಜಗಜ್ಯೋತಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಸಮಾಜ ಭಾನುವಾರ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಅವರು, ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದರು.
    ಶ್ರೇಷ್ಠ ತೆಯ ಮಹಾನುಭಾವ, ಮಹಾಶರಣ ಅಣ್ಣ ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಣೆ ಮಾಡಿದ್ದು ಬರೀ ಬಸವ ಅನುಯಾಯಿಗಳಿಗಲ್ಲ ಇಡೀ ಜಗದ ಜನತೆಗೆ ಸಂತಸವನ್ನುಂಟು ಮಾಡಿದೆ ಎಂದರು.
    ಜಗದ ಜ್ಯೋತಿಯಾಗಿ ಬೆಳಗಿದ ಬಸವಣ್ಣ ನುಡಿದಂತೆ ನಡೆದ ಶರಣ. ಸಹಸ್ರಾರು ಶರಣರನ್ನು ಸಾಮಾಜಿಕ ಕಾರ್ಯಕ್ಕೆ ಕಳುಹಿಸಿದ ಮಹಾತ್ಮ. ರಾಗದ್ವೇಷಗಳಿರದ ಹೃದಯ ನಮ್ಮದಾಗಲಿ, ಸಹಬಾಳ್ವೆ ಕಾಯಕ ದಾಸೋಹದ ಮಂತ್ರ ಜಗದಗಲ ಮುಗಿಲಗಲ ಪಸರಿಸಲಿ, ಸರ್ವರಲ್ಲಿಯೂ ಶರಣತ್ವ ಉದಯಿಸಲಿ ಎಂದು ಬಯಸಿದ ಮಹಾನುಭಾವ. ನಾವು ಬಸವೇಶ್ವರರನ್ನು ಜಾತಿಗೆ ಸೀಮಿತಗೊಳಿಸದೆ ಸರ್ವರ ಹಿತ ಬಯಸುವ ಧಾರ್ಮಿಕ ನಾಯಕ ಎಂದೇ ಪರಿಗಣಿಸಬೇಕು. ಬಸವಣ್ಣನ ಹೆಜ್ಜೆಗಳೆಂದರೆ ಸದ್ವಿಚಾರದ ಮತ್ತು ಸಮಾನತೆಯ ಹೆಜ್ಜೆಗಳು ಎಂದರು.
    ಈ ಭಾಗದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣಗಳಲ್ಲಿ ಒಂದಕ್ಕೆ ಅಲ್ಲಮಪ್ರಭು ಹೆಸರು ಹಾಗೂ ಒಂದು ರೈಲಿಗೆ ಅಕ್ಕಮಹಾದೇವಿ ಹೆಸರಿಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
    ಶಿರಾಳಕೊಪ್ಪದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಪುರಸಭೆ ಸದಸ್ಯ ನಾಗರಾಜಗೌಡ, ಸಹಕಾರಿ ಧುರೀಣ ಬಿ.ಡಿ.ಭೂಕಾಂತ್, ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ರುದ್ರಮುನಿ, ಜಿಲ್ಲಾ ಕಾರ್ಯದರ್ಶಿ ಸಿ.ಕೊಟ್ರೇಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕಾಂಚನಾ ಕುಮಾರ್, ಯುವ ಘಟಕದ ಅಧ್ಯಕ್ಷ ವೀರಣ್ಣಗೌಡ, ತಾಲೂಕ ಘಟಕದ ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಅಶ್ವಿನ್, ಕುಮಾರಸ್ವಾಮಿ, ಚಂದ್ರಶೇಖರ್ ಮಂಚಾಲಿ, ಮಮತಾ, ಶಶಿಧರ್ ಸ್ವಾಮಿ, ಸುಭಾಷ್ ಚಂದ್ರ ಸ್ಥಾನಿಕ್, ಪ್ರಸನ್ನ ಕುಮಾರ್, ಬಸವಣ್ಯಯ್ಯ ಮಠದ, ಶ್ರೀಧರಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts