More

    ಕಲೆ ಯಾರ ಮನೆ ಸ್ವತ್ತಲ್ಲ

    ಬಸವನಬಾಗೇವಾಡಿ: ಕಲಾದೇವಿ ಆರಾಧಕರ ಮನಸ್ಸಿನಲ್ಲಿ ಉಲ್ಲಾಸ ಇಮ್ಮಡಿಗೊಳಿಸಿ ಮುನ್ನಡೆಸುತ್ತಾಳೆ. ಕಲೆ ಯಾರ ಮನೆ ಸ್ವತ್ತಲ್ಲ. ಉತ್ತಮ ಪರಿಸರದಲ್ಲಿ ಛಲ, ಆತ್ಮವಿಶ್ವಾಸದಿಂದ ಪೂಜಿಸಬೇಕೆಂದು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
    ಸ್ಥಳೀಯ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿನ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭರತನಾಟ್ಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ಕಲೆ ಸನಾತನ ಕಾಲದಿಂದಲೂ ಬಂದಿದೆ. ಪ್ರತಿಭೆ ಎಂಬುವುದು ಶ್ರೀಮಂತರ ಮನೆ ಸ್ವತ್ತಲ್ಲ. ಅದು ಎಲ್ಲರ ಮನೆಯಲ್ಲೂ ಇರುತ್ತದೆ. ಭಾರತ ಕಲೆ, ಸಾಹಿತ್ಯ ಸಂಸ್ಕೃತಿಯ ಬೀಡಾಗಿದ್ದು, ಇಲ್ಲಿನ ಅಪಾರ ಸಂಪತ್ತನ್ನು ಪರಕೀಯರು ದೋಚಿಕೊಂಡು ಹೋದರು. ಆದರೆ, ಇಲ್ಲಿ ಸಂಪತ್ತು ಇನ್ನೂ ಬೆಳೆಯುತ್ತಲಿದೆ ಎಂದು ಹೇಳಿದರು. ಕಲಾವಿದೆ ಶ್ರೀದೇವಿ ರೂಢಗಿ ಮಾತನಾಡಿ, ಭರತನಾಟ್ಯವು ಶಾಸೀಯವಾಗಿ ನಡೆಯುವ ಶಿಬಿರ. ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಹಾಗೂ ಪ್ರತಿಯೊಬ್ಬರೂ ಭರತನ್ಯಾಟವನ್ನು ಕಲಿಯಬಹುದು. ಕಲೆಗಾಗಿ ಕಲಿಯಬೇಕು, ಹೊರತು ಮನರಂಜನೆಗಾಗಿ ಅಲ್ಲ ಎಂದು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಹಿರಿಯ ನ್ಯಾಯವಾದಿ ಬಿ.ಕೆ. ಕಲ್ಲೂರ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ ಮಾತನಾಡಿದರು, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಬಾಲಚಂದ್ರ ಮುಂಜಾನೆ, ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ, ಹಿರಿಯ ಪತ್ರಕರ್ತ ಡಿ.ಬಿ. ವಡವಡಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts