More

    ಐವರು ಆರೋಪಿಗಳ ಬಂಧನ

    ವಿಜಯಪುರ: ಬಸವನಬಾಗೇವಾಡಿ ಪಟ್ಟಣದ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಫೆ.25ರಂದು ನಡೆದ ಸಂಸ್ಥೆ ಅಧ್ಯಕ್ಷ ದಾಮು ನಾಯಕ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
    ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಅಶೋಕ ಮಾನಸಿಂಗ ಲಮಾಣಿ (23), ಕಣಕಾಲ ತೋಟದ ವಸ್ತಿಯ ಸುಭಾಷ್ ದಾಮು ಲಮಾಣಿ (35), ಪ್ರೇಮಾ ದಾಮು ನಾಯಕ (44), ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದ ಅವ್ವಣ್ಣ ಸಂಗಪ್ಪ ಗ್ವಾತಗಿ (32), ಮುದ್ದೇಬಿಹಾಳ ತಾಲೂಕಿನ ಗುಡಿಹಾಳದ ಶಿವಣ್ಣ ಕೊಣ್ಣೂರ ಬಂಧಿತ ಆರೋಪಿಗಳು.

    ಘಟನೆ ಹಿನ್ನೆಲೆ

    ಕೊಲೆಯಾದ ದಾಮು ನಾಯಕನ ಎರಡನೇ ಪತ್ನಿ ಪ್ರೇಮಾ ಹಾಗೂ ಮೊದಲ ಪತ್ನಿಯ ಹಿರಿಯ ಮಗ ಸುಭಾಷ್ ಲಮಾಣಿ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಅಲ್ಲದೆ, ಆಸ್ತಿ ವಿವಾದದಿಂದಾಗಿ ದಾಮು ನಾಯಕ ಜತೆ ವೈಮನಸ್ಸು ಉಂಟಾಗಿತ್ತು. ಅಶೋಕ ಲಮಾಣಿ ಎಂಬಾತನಿಗೆ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದ ಅವ್ವಣ್ಣ ಗ್ವಾತಗಿ ಮತ್ತು ಶಿವಣ್ಣ ಕೊಣ್ಣೂರ ಅವರನ್ನು ಅಮಾನತು ಮಾಡಿದ್ದರಿಂದ ಇಬ್ಬರು ಶಿಕ್ಷಕರು ದಾಮು ನಾಯಕನ ಕೊಲೆಗೆ ಕೈಜೋಡಿಸಿದ್ದರು ಎಂದು ತಿಳಿಸಿದರು.

    ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ್ ಅರಸಿದ್ಧಿ, ಬಸವನಬಾಗೇವಾಡಿ ಡಿವೈಎಸ್‌ಪಿ ಶಾಂತವೀರ ಈ., ಸಿಪಿಐ ಸೋಮಶೇಖರ ಜುಟ್ಟಲ್, ಪಿಎಸ್‌ಐ ಚಂದ್ರಶೇಖರ ಹೆರಕಲ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು. ಪ್ರಕರಣವನ್ನು ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸಲಾಯಿತು.

    ಐವರು ಆರೋಪಿಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts