More

    ಭವಿಷ್ಯದಲ್ಲಿ ಎಲ್ಲ ಸೌಕರ್ಯವುಳ್ಳ ಮಾದರಿ ಎಪಿಎಂಸಿ ನಿರ್ಮಾಣವಾಗಲಿ

    ಬಸವನಬಾಗೇವಾಡಿ: ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯು ಆಡು-ಕುರಿಗಳ ಮಾರುಕಟ್ಟೆಯಾಗಿ ಖ್ಯಾತಿ ಹೊಂದಿದ್ದು, ಭವಿಷ್ಯದಲ್ಲಿ ಸಕಲ ಸೌಲಭ್ಯಗಳ ಮಾದರಿ ಎಪಿಎಂಸಿ ಆಗಲಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 2014-15ನೇ ಸಾಲಿನ ಡಬ್ಲೂಐಎ್ ಯೋಜನೆ ಅಡಿ 250 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಹಾಗೂ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಮುಚ್ಚಿದ ಹರಾಜು ಕಟ್ಟೆ ಉದ್ಘಾಟನೆ ಹಾಗೂ ನೂತನ ಆಡಳಿತ ಕಚೇರಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ರೈತರು ಹಾಗೂ ಜನತೆಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ವೇಗದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

    ಎಪಿಎಂಸಿ ಇಂದು ಆಧುನಿಕತೆಗೆ ಅನುಗುಣವಾಗಿ ಮಾರ್ಪಾಡಾಗಿ ತಂತ್ರಜ್ಞಾನವನ್ನು ಅಳವಡಿಸಿ ರೈತರಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದೆ. ತಾಲೂಕಿನ ರೈತರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ತಾವೂ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದರು.

    ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ, ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ವಿಜಯಪುರ ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ, ಉಪಾಧ್ಯಕ್ಷ ಸುರೇಶ ತಳವಾರ, ಎಪಿಎಂಸಿ ನಿರ್ದೇಶಕರಾದ ಶೇಖರ ಗೊಳಸಂಗಿ, ವಿಶ್ವನಾಥಗೌಡ ಪಾಟೀಲ, ಸಿ.ಪಿ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ಮುಖ್ಯ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ, ಸಹಾಯಕ ಕಾರ್ಯದರ್ಶಿ ಬಿ.ಎಲ್.ಜುಮನಾಳ, ಹಿರಿಯ ಮೇಲ್ವಿಚಾರಕ ಧನರಾಜ ಪಾಟೀಲ, ಮಾರುಕಟ್ಟೆ ಸಹಾಯಕ ನವೀನ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಸಾಹಿತಿ ಲ.ರು.ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಗೊಳಸಂಗಿ, ರವಿ ರಾಠೋಡ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts