More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್‌ಗೆ ಆಗ್ರಹ

    ಬಸವನಬಾಗೇವಾಡಿ: ರೈತ ವಿರೋಧಿ, ಭೂ ಸುಧಾರಣೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ತಹಸೀಲ್ದಾರ್ ಎಂ.ಎನ್. ಬಳಿಗಾರ ಮೂಲಕ ಸಿಎಂ ಕಾರ್ಯಾಲಯದ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಜೆಡಿಎಸ್ ಮುಖಂಡ ಸೋಮನಗೌಡ ಪಾಟೀಲ (ಮನಗೂಳಿ) ಮಾತನಾಡಿ, ಭೂ ಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ ರೈತ ವಿರೋಧಿ ನೀತಿ ಅನುಸರಿಸಿದೆ. ಉಳುವವನೇ ಭೂಮಿ ಒಡೆಯ ಎಂಬುದಾಗಿತ್ತು. ಆದರೆ, ಸರ್ಕಾರ ಉಳ್ಳವನೇ ಭೂಮಿ ಒಡೆಯನಂತೆ ಮಾಡಿದ್ದು, ಎಪಿಎಂಸಿ ಕಾಯ್ದೆಯಲ್ಲೂ ತಿದ್ದುಪಡಿ ತರುವ ಮೂಲಕ ದೊಡ್ಡ ವ್ಯಾಪಾರಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳು ರೈತರನ್ನು ಸುಲಿಗೆ ಮಾಡಿ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಶಶಿಧರ ಯರನಾಳ ಮಾತನಾಡಿದರು. ನ್ಯಾಯವಾದಿ ಎನ್.ಎಸ್. ಪಾಟೀಲ, ಮಲ್ಲಿಕಾರ್ಜುನ ಅವಟಿ, ಶಂಕರಗೌಡ ಪಾಟೀಲ (ಮನಗೂಳಿ), ಶರೀಫ್ ಉಳ್ಳಾಗಡ್ಡಿ, ಕೃಷ್ಣ ಚವಾನ್, ಆಕಾಶ ಬಿರಾದಾರ, ಶರೀಫ್ ಹವಾಲ್ದಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts