More

    ಲೋಕನಾಥ ಅಗರವಾಲ, ಈರಣ್ಣ ಪಟ್ಟಣಶೆಟ್ಟಿ ನೇತೃತ್ವದ ಬಣಕ್ಕೆ ದಿಗ್ವಿಜಯ

    ಬಸವನಬಾಗೇವಾಡಿ: ಪಟ್ಟಣದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಲೋಕನಾಥ ಅಗರವಾಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ನೇತೃತ್ವದ ಬಣ ಒಟ್ಟು 13ರ ಪೈಕಿ 12 ಸ್ಥಾನಗಳಲ್ಲಿ ಜಯಶಾಲಿಯಾಗುವ ಮೂಲಕ ದಿಗ್ವಿಜಯ ಸಾಧಿಸಿದೆ.

    ಜ. 13ರಂದು ಹಿಂದುಳಿದ ವರ್ಗ ‘ಅ’ ಮೀಸಲು 2 ಸ್ಥಾನಗಳಲ್ಲಿ ಶ್ರೀಶೈಲ ಚಂದ್ರಶೇಖರ ಪತ್ತಾರ, ಬಸವರಾಜ ಮುತ್ತಪ್ಪ ಚೌರಿ ಹಾಗೂ ಪರಿಶಿಷ್ಟ ಜಾತಿಯ ಮೀಸಲು 1 ಸ್ಥಾನದಲ್ಲಿ ನೀಲಪ್ಪ ಖುಬಾಜಿ ನಾಯಕ ಅವಿರೋಧ ಆಯ್ಕೆಯಾಗಿದ್ದರು. ಪರಿಶಿಷ್ಟ ಪಂಗಡ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ, ಮಹಿಳಾ ಮೀಸಲು 2 ಸ್ಥಾನಗಳು, 7 ಸಾಮಾನ್ಯ ಕ್ಷೇತ್ರ ಸೇರಿ ಉಳಿದ 9ಸ್ಥಾನಗಳಿಗೆ ಭಾನುವಾರ ಸ್ಥಳೀಯ ಗುರು ಕೃಪಾ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆಯಿಂದ ಸಂಜೆ 4ರ ವರೆಗೆ ಅರ್ಹ 409 ಮತಗಳ ಪೈಕಿ 372ಮತದಾರರು ಮತದಾನ ಮಾಡಿದರು. 18 ಮತಗಳು ತಿರಸ್ಕೃತಗೊಂಡಿದ್ದು, ಮತ ಎಣಿಕೆ ಕಾರ್ಯವೂ ನಡೆದು ತಡರಾತ್ರಿ ಲಿತಾಂಶವನ್ನು ಚುನಾವಣಾ ಅಧಿಕಾರಿ ಆರ್.ಎಸ್. ಹಳ್ಳಿ ಘೋಷಿಸಿದರು.

    ಸಾಮಾನ್ಯ ಕ್ಷೇತ್ರದಲ್ಲಿ ಲೋಕನಾಥ ನೇಮಿಚಂದ ಅಗರವಾಲ(274), ವೀರಬಸಪ್ಪ ರುದ್ರಪ್ಪ ದುಂಬಾಳಿ(257), ಉಮೇಶ ಸದಾಶಿವಪ್ಪ ಹಾರಿವಾಳ(256), ಬಸಪ್ಪ ಈರಪ್ಪ ಗೊಳಸಂಗಿ(227), ಗುರುಸಂಗಪ್ಪ ಮಲ್ಲಪ್ಪ ಹಳ್ಳೂರ(211), ಯಮನಪ್ಪ ಧೂಳಪ್ಪ ನಾಯ್ಕೋಡಿ(198), ರಮೇಶ ವಿಶ್ವನಾಥ ಯಳಮೇಲಿ(188), ಮಹಿಳಾ ಮೀಸಲು ಸ್ಥಾನದಲ್ಲಿ ಕಮಲಾ ಲಿಂಗನಗೌಡ ತಿಪ್ಪನಗೌಡರ (281), ಸುಮಿತ್ರಾಬಾಯಿ ಬಸಪ್ಪ ಪಟ್ಟಣಶೆಟ್ಟಿ (214) ಗೆಲುವು ಸಾಧಿಸಿದರೆ, ಸಿದ್ದರಾಮ ರೇವಣಸಿದ್ದಪ್ಪ ಕಿಣಗಿ(153), ರಮೇಶ ಮುರಿಗೆಪ್ಪ ಕೋರಿ(52), ರವಿ ಚಂದ್ರಾಮಪ್ಪ ಪಡಶೆಟ್ಟಿ(167), ಶಂಕರಗೌಡ ಶಿವನಗೌಡ ಬಿರಾದಾರ(58), ನಿರ್ಮಲಾ ಬಸಪ್ಪ ಚಿಕ್ಕೊಂಡ (157) ಪರಾಭವಗೊಂಡರು.

    ನಂತರ ಹಾಲಿ ಅಧ್ಯಕ್ಷ ಲೋಕನಾಥ ಅಗರವಾಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ನೇತೃತ್ವದ ಬಣ ಗೆಲುವು ಸಾಧಿಸಿದ್ದರಿಂದಾಗಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರಲ್ಲದೆ, ನೂತನ ಸದಸ್ಯರನ್ನು ಸನ್ಮಾನಿಸಿ ಮೆರವಣಿಗೆಯಲ್ಲಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

    ಬ್ಯಾಂಕ್ ಅಭಿವೃದ್ಧಿಗೆ ಸಂದ ಜಯ
    ಬ್ಯಾಂಕ್‌ನ ಅಭಿವೃದ್ಧಿ ಕಾರ್ಯಗಳಿಂದ ಸದಸ್ಯರು ನಮ್ಮ ಗುಂಪಿಗೆ ಅರ್ಹ ಜಯ ದೊರಕಿಸಿಕೊಟ್ಟಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದಿ.ಆರ್.ಎಂ. ದುಂಬಾಳಿಯವರ ನಂತರದಲ್ಲಿ ಬ್ಯಾಂಕ್ ಜವಾಬ್ದಾರಿ ವಹಿಸಿಕೊಂಡ ಅಗರವಾಲ ಅವರು ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಲು ಸಾಕಷ್ಟು ಶ್ರಮಿಸಿದ್ದಾರೆ. ಹೂವಿನಹಿಪ್ಪರಗಿ, ಕೊಲ್ಹಾರ, ನಿಡಗುಂದಿ ಶಾಖೆಗಳನ್ನು ಆರಂಭಿಸಿದ್ದಾರೆ. ತಮ್ಮ ಹಿರಿತನದ ಅನುಭವದಿಂದ ಸದಸ್ಯರ ಸಹಕಾರದಿಂದ ಬ್ಯಾಂಕ್‌ನ ಸಮತೋಲನದಲ್ಲಿ ಕಾಯ್ದುಕೊಂಡಿದ್ದಾರೆ. ಸತತ 3ನೇ ಬಾರಿ ಅಧ್ಯಕ್ಷರಾಗಿ ಲೋಕನಾಥ ಅಗರವಾಲ ಅವರು ಆಯ್ಕೆಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದರು.

    ಬ್ಯಾಂಕ್ ಹಾಲಿ ಅಧ್ಯಕ್ಷ ಲೋಕನಾಥ ಅಗರವಾಲ, ಸುರೇಶಗೌಡ ಪಾಟೀಲ, ಎಂ.ಜಿ. ಆದಿಗೊಂಡ, ಅನಿಲ ಪವಾರ, ಸಂಕನಗೌಡ ಪಾಟೀಲ, ಭರತು ಅಗರವಾಲ, ಅಶೋಕ ಕಲ್ಲೂರ ಸೇರಿ ಚುನಾಯಿತ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಬೆಂಬಲಿಗರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts