More

    ನಿಗದಿತ ಸಮಯಕ್ಕೆ ಕರ ಪಾವತಿಸಿ

    ಬಸವನಬಾಗೇವಾಡಿ: ನಿಗದಿತ ಸಮಯದಲ್ಲಿ ಆಸ್ತಿಗಳ ಕರ ಪಾವತಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಿಡಿಒ ಐ.ಎ. ಮಮದಾಪುರ ಹೇಳಿದರು.

    ತಾಲೂಕಿನ ನರಸಲಗಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಹಾಗೂ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

    ಬಸ್ ನಿಲ್ದಾಣ ಸುತ್ತ್ತಲಿನ ಮನೆಗಳ ಕೊಳಚೆ ನೀರನ್ನು ರಸ್ತೆ ಮೇಲೆ ಬಿಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಅವುಗಳನ್ನು ತಡೆಗಟ್ಟಲು ಸರ್ಕಾರ ಪ್ರತಿ ಮನೆಗೆ ಇಂಗು ಗುಂಡಿಗಳನ್ನು ಮಾಡಿಕೊಳ್ಳಲು ಸಾವಿರಾರು ರೂ. ನೀಡುತ್ತದೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

    ಕಿರಿಯ ಆರೋಗ್ಯ ಸಹಾಯಕಿ ಇರುವ ಆರೋಗ್ಯ ಉಪಕೇಂದ್ರದ ಆವರಣದಲ್ಲಿ ಕೆಲ ಕಿಡಿಗೇಡಿಗಳು ರಾತ್ರಿ ವೇಳೆ ಗಲಾಟೆ ಮಾಡುತ್ತಿರುವುದು ಕಂಡು ಬಂದಿದೆ. ಅಂತಹ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಿರಿಯ ಆರೋಗ್ಯ ಸಹಾಯಕಿ ಒತ್ತಾಯಿಸಿದಾಗ ಮುಖಂಡ ಸೋಮನಗೌಡ ಪಾಟೀಲ ಅವರು ಉಪ ಆರೋಗ್ಯ ಕೇಂದ್ರದ ಮುಂದಿನ ಆಸನಗಳನ್ನು ಸ್ಥಳಾಂತರಿಸಿ ಆರೋಗ್ಯ ಕೇಂದ್ರಕ್ಕೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.

    ಬಂಗಾರೆಪ್ಪಗೌಡ ಪಾಟೀಲ, ಎ.ಎಂ. ಹಾಲಿಹಾಳ, ನಾಗರಾಜ ಓದಿ, ವಿದ್ಯಾಧರ ದೊಡಮನಿ, ಬಸವರಾಜ ನಾಟೀಕಾರ, ಅಂಗನವಾಡಿ ಕಾರ್ಯಕರ್ತೆರಾದ ಶಿವಮ್ಮ ಹಚಡದ, ಶೈಲಾ ಲಮಾಣಿ, ಶ್ರೀದೇವಿ ಬಡಿಗೇರ, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು, ಗ್ರಾಪಂ ಸಿಬ್ಬಂದಿ ರಮೇಶ ಹಾಲಿಹಾಳ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts