More

    ಕರೊನಾ ನಿಯಂತ್ರಣಕ್ಕೆ ಸೇನಾನಿಗಳ ಪರಿಶ್ರಮ ಅವಿಸ್ಮರಣೀಯ

    ಬಸವನಬಾಗೇವಾಡಿ: ಇಡೀ ಜಗತ್ತಿನ ಹಲವು ದೇಶಗಳು ಕರೊನಾ ವೈರಸ್‌ಗೆ ತತ್ತರಿಸಿ ಹೋಗಿದ್ದು ಇಂತಹ ಸಂದರ್ಭ ವಾರಿಯರ್ಸ್ ಪರಿಶ್ರಮ ಹಾಗೂ ಸೇವೆ ಅವಿಸ್ಮರಣೀಯವಾಗಿದೆ ಎಂದು ಹಿರಿಯ ಮುಖಂಡ ಅಣ್ಣಾಸಾಹೇಬಗೌಡ ಪಾಟೀಲ ಹೇಳಿದರು.

    ತಾಲೂಕಿನ ಉಕ್ಕಲಿ ಗ್ರಾಪಂ ಸಭಾಭವನದಲ್ಲಿ ಸೋಮವಾರ ಕರೊನಾ ಸೇನಾನಿಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಆಹಾರದ ಪೊಟ್ಟಣ ಹಾಗೂ ಸೀರೆ ವಿತರಿಸಿ ಅವರು ಮಾತನಾಡಿದರು.

    ಕರೊನಾ ವೈರಸ್ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಮೇಲೆ ಹೊಡೆತ ನೀಡುವ ಜತೆಗೆ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ನಾವೆಲ್ಲರೂ ಜಾಗೃತರಾಗಿ ಮುನ್ನಡೆಯಬೇಕೆಂದು ಹೇಳಿದರು.

    ಗ್ರಾಪಂ ಅಧ್ಯಕ್ಷೆ ಶಬನಮ್ ಪಾಂಡುಗೋಳ, ಸದಸ್ಯರಾದ ಎನ್.ಜಿ. ಸಿಂದಗಿ, ಶಫೀಕ್ ಬೇದರಕರ, ನಾಗಪ್ಪ ಯರಗಟ್ಟಿ, ಯಲ್ಲಪ್ಪ ಜಾಲವಾದಿ, ವಿಶ್ವನಾಥ ತಡಲಗಿ, ಲಾಲಸಾಬ ತಿಪ್ಪಿಮನಿ, ಅಶೋಕ ಇಂಡಿ, ಧರೆಪ್ಪ ಮಸಳಿ, ವಿಲಾಸ ರಾಠೋಡ, ಸವಿತಾ ಸಜ್ಜನ, ವೈಶಾಲಿ ಸಿಂಧೆ, ಶಶಿಕಲಾ ಬ್ಯಾಕೋಡ, ಹಮೀನಾಬಾನು ಕರೋಶಿ, ಪಾವರ್ತಿ ದೊಡಮನಿ, ವಲಯ ಅರಣ್ಯಾಧಿಕಾರಿ ಅನಂತ ಪಾಕಿ, ಕಿರಿಯ ಆರೋಗ್ಯ ಸಹಾಯಕಿ ವಿದ್ಯಾ ಹಿರೇಮಠ, ಪಿಡಿಒ ಎಂ.ಟಿ. ಬಂಡಿವಡ್ಡರ, ಕಾರ್ಯದರ್ಶಿ ಎಚ್.ಬಿ. ಪಾಟೀಲ, ಗ್ರಾಪಂ ಸಿಬ್ಬಂದಿ ಈಶ್ವರ ಬಸರಿಗಿಡದ ಸೇರಿ ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts