More

    ಭಗವಂತನ ಪೂಜೆಯಿಂದ ಮನಸ್ಸಿಗೆ ನೆಮ್ಮದಿ

    ಬಸವಕಲ್ಯಾಣ: ನಿತ್ಯ ಭಗವಂತನ್ನು ಪೂಜಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಮಲ್ಲಯ್ಯನ ಗಿರಿಯ ಶ್ರೀ ಡಾ.ಬಸವಲಿಂಗ ಅವಧೂತರು ನುಡಿದರು.

    ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಬಸವ ಜ್ಯೋತಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿದ ಪೂಜ್ಯರು, ಭಕ್ತಿ-ಶೃದ್ಧೆಯಿಂದ ಪೂಜಿಸಿದರೆ ಸಾಕ್ಷಾತ್ಕಾರವಾಗುದೆ. ಬಸವಕಲ್ಯಾಣ ಕ್ರಾಂತಿ ಭೂಮಿಯಾಗಿದೆ. ಶಿವಶರಣರು ತಮ್ಮನ್ನು ತಾವು ಸಮರ್ಪಿಸಿಕೊಂಡ ಈ ಭೂಮಿ ಅತ್ಯಂತ ಪವಿತ್ರವಾದದ್ದು, ಇಲ್ಲಿ ಜನ್ಮ ಪಡೆಯುವದೇ ಒಂದು ದೊಡ್ಡ ಪುಣ್ಯವಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡಿ ಎಂದು ಹೇಳಿದರು.

    ಬಿಡಿಪಿಸಿ ಆದ್ಯಕ್ಷ ಬಸವರಾಜ ಕೋರಕೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ರೇವಣಪ್ಪ ರಾಯವಾಡೆ, ನಿರ್ದೇಶಕರಾದ ಮಲ್ಲಯ್ಯ ಸ್ವಾಮಿ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಭಾವಿ, ಜಗನ್ನಾಥ ಖೂಬಾ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ, ನಾಗಯ್ಯಸ್ವಾಮಿ, ಮಲ್ಲಿಕಾರ್ಜುನ ಮಂಠಾಳೆ, ಗದಗೆಪ್ಪ ಹಲಶಟ್ಟೆ, ಸೋಮಶೇಖರಯ್ಯ ವಸ್ತçದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts