More

    ಸಮಾಜಮುಖಿಯಾಗಿ ಸೇವೆ ಸಲ್ಲಿಸಿ: ಮಂಜುನಾಥ್ ಪಾಟೀಲ್

    ಕಲಬುರಗಿ: 12ನೇ ಶತಮಾನದ ಕಾಯಕಯೋಗಿ ಅಣ್ಣ ಬಸವಣ್ಣನವರಂತೆ ಸಮಾಜಮುಖಿಯಾಗಿ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಶಹಾಬಜಾರ್ ಅಧ್ಯಕ್ಷ ಮಂಜುನಾಥ ಪಾಟೀಲ್ ತಿಳಿಸಿದರು.

    ನಗರದ ಶಹಾಬಜಾರ್ ಬಡಾವಣೆಯ ಶ್ರೀ ಮರಗಮ್ಮಾ ದೇವಸ್ಥಾನದ ಮುಂಭಾಗದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಶಹಾಬಜಾರ್ ಕಲಬುರಗಿ ವತಿಯಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ೮೯೧ನೇ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಾಯಕದಲ್ಲೆ ಕೈಲಾಸವನ್ನು ಕಾಣುವಂತಹ ಮನೋವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇಡೀ ವಿಶ್ವಕ್ಕೆ ಅನುಭವ ಮಂಟಪವನ್ನು ಪರಿಚಯಿಸಿದ ಅಣ್ಣ ಬಸವಣ್ಣನವರ ತತ್ವಗಳು, ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಹಾಗೂ ಶರಣರು ನಡೆದಾಡಿದ ನಾಡು ಕಲಬುರಗಿಯಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ನಿಮ್ಮೆಲ್ಲರ ಸಹಕಾರ ಹಾಗೂ ಸೇವೆಯಿಂದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿ ಕಂಡಿದ್ದು, ತಮಗೆಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದರು.

    ವೀರಶೈವ ಲಿಂಗಾಯತ ಬಂದು ಸಮಾಜ ಪ್ರಧಾನ ಕಾರ್ಯದರ್ಶಿ ಈರಣ್ಣಾ ಗೊಳೆದ ಮಾತನಾಡಿ, ಕಳೆದು ಹಲವು ವರ್ಷಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಹಾಗೂ ವಿಶೇಷವಾಗಿ ಶಹಾಬಜಾರ್ ಬಡಾವಣೆಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭವ್ಯ ಮೆರವಣಿಗೆ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ಸಮಿತಿಯ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ಅಣ್ಣ ಬಸವಣ್ಣನವರ ದಾರಿಯಲ್ಲಿ ನಾವೆಲ್ಲರೂ ಸಾಗಿ, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಶಿವಾನಂದ ಬಂಡಕ್, ಮಹೇಶ್ ಪಟ್ಟಣ, ಶಂಕರ್ ಜಾಧವ್, ಸುಭಾಷ್ ಟೈಲರ್, ಪ್ರಭುಲಿಂಗ ಗೊಬ್ಬುರ್, ಶಿವಲಿಂಗಪ್ಪಾ ಬಂಡಕ್, ಚಂದ್ರಕಾಂತ ಡೆಂಗಿ, ಸೂರ್ಯಕಾಂತ್ ಡೆಂಗಿ, ಶರಣು ಅವರಾದಿ, ಜಗದೀಶ್ ಗೊಳೆದ್,ಶರಣು ಕುರತಳ್ಳಿ, ಗುರುರಾಜ್ ಚಿನ್ನಮಳ್ಳಿ, ಶಾಂತಕುಮಾರ್ ಬಿರಾದಾರ, ಶಾಂತಕುಮಾರ್ ಖೇಮಜಿ, ವಿಜಯಕುಮಾರ್ ಮುನ್ನೋಳ್ಳಿ, ಆನಂದ ಕಲ್ಲೂರ್,ಕಿರಣ ಬಂಡಕ್, ರೇವಣಸಿದ್ದಪ್ಪ ಮಸೂತಿ, ಶಿವು ಅವರಾದಿ ಸೇರಿದಂತೆ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.

    ಭವ್ಯ ಮೆರವಣಿಗೆ,ಮಹಾ ಪ್ರಸಾದದ ವ್ಯವಸ್ಥೆ: ಬಸವ ಜಯಂತಿ ಉತ್ಸವ ಸಮಿತಿ ಶಹಾಬಜಾರ್ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಉತ್ಸವದಲ್ಲಿ ಭಾಗವಹಿಸಿದ ಬಸವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಹಾಪ್ರಸಾದ ದ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಿಂದ ವಿಶ್ವಗುರು ಬಸವಣ್ಣನವರ ಭವ್ಯ ಶೋಭಾಯಾತ್ರೆ ಶಹಾಬಜಾರ್ ನಿಂದ ಜಗತ್ ವೃತ್ತದವರೆಗೂ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts