More

    ಬಸರಾಳು ಗ್ರಾಪಂನಲ್ಲಿ ಅ‘ವಿಶ್ವಾಸ’ದ ಸದ್ದು

    ಮಂಡ್ಯ: ತಾಲೂಕು ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಅವರ ವಿರುದ್ಧ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಮಂಡಿಸಲು ಸಿದ್ಧವಾಗಿರುವುದರಿಂದ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯಾ ಅವರು ಜು.27ರಂದು ಬೆಳಗ್ಗೆ 11ಗಂಟೆಗೆ ಸಭೆ ನಿಗದಿ ಮಾಡಿದ್ದಾರೆ.
    18 ಸದಸ್ಯರ ಬಲದ ಗ್ರಾಪಂನಲ್ಲಿ ಬರೋಬರಿ 16 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುತ್ತಿದ್ದಾರೆ. ಉಪಾಧ್ಯಕ್ಷ ಜವರಯ್ಯ, ಗೀತಾ, ಸಂಪೂರ್ಣಯ್ಯ, ಸುನೀಲ್ಕುಮಾರ್, ಶಾಲಿನಿ, ದಿನೇಶ್, ನಿವೇದಿತಾ, ಪದ್ಮಮ್ಮ, ಮಂಜುನಾಥ, ಸ್ವರ್ಣಗೌರಿ, ಶಾಂತಮ್ಮ, ಪದ್ಮಾ, ಪ್ರದೀಪ, ಕೇಶವಮೂರ್ತಿ, ಸುಜಾತಾ, ಬಸವೇಗೌಡ ಅವರು ಅವಿಶ್ವಾಸ ಮಂಡನೆಗೆ ಸಹಿ ಮಾಡಿದ್ದಾರೆ. ಅಂತೆಯೇ ಸದಸ್ಯ ರವಿ ಅವರು ಮಾತ್ರ ಅವಿಶ್ವಾಸ ಮಂಡನೆಗೆ ವಿರುದ್ಧವಾಗಿದ್ದಾರೆ.
    ಅಧ್ಯಕ್ಷೆ ಪವಿತ್ರಾ ಅವರು ಅಭಿವದ್ಧಿ ಕಾರ್ಯಗಳ ಬಗ್ಗೆ ಗಮನಹರಿಸುತ್ತಿಲ್ಲ. ಕಚೇರಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಸೇರಿದಂತೆ ಕೆಲ ಕಾರಣದಿಂದ ಬೇಸರಗೊಂಡಿರುವ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಪವಿತ್ರಾ ಅವರು ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಂತೆಯೇ ಇವರ ವಿರುದ್ಧ ಜು.4ರಂದು ಅವಿಶ್ವಾಸ ಮಂಡನೆಯಾಗಿದೆ. ಒಂದು ವೇಳೆ ಸಭೆ ಯಶಸ್ವಿಯಾದರೆ ಉಳಿದ ಅವಧಿಗೆ ಪದ್ಮಾ ಅವರು ಅಧ್ಯಕ್ಷರಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts