More

    ವಿಂಬಲ್ಡನ್ ಚಾಂಪಿಯನ್ ಆದ ಮಾಜಿ ಕ್ರಿಕೆಟ್ ಆಟಗಾರ್ತಿ..!

    ಲಂಡನ್: ವಿಶ್ವ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಅಶ್ಲೆಗ್ ಬಾರ್ಟಿ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದರು. 2ನೇ ಬಾರಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಬಾರ್ಟಿ ಕ್ರಿಕೆಟ್ ಆಟಗಾರ್ತಿಯೂ ಹೌದು. ಪೂರ್ಣ ಪ್ರಮಾಣದಲ್ಲಿ ಟೆನಿಸ್ ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಬಾರ್ಟಿ ಮಹಿಳಾ ಬಿಗ್‌ಬಾಷ್ ಲೀಗ್‌ನಲ್ಲಿ ಬ್ರಿಸ್ಬೇನ್ ಹಿಟ್ಸ್ ತಂಡ ಪ್ರತಿನಿಧಿಸುತ್ತಿದ್ದರು.

    ಇದನ್ನೂ ಓದಿ: ಟಿ20ಯಲ್ಲಿ ದ್ವಿಶತಕ ಸಿಡಿಸಿದ ದೆಹಲಿ ಬ್ಯಾಟ್ಸ್‌ಮನ್,

    ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಶ್ಲೆಗ್ ಬಾರ್ಟಿ 6-3, 6-7, 6-3 ಸೆಟ್‌ಗಳಿಂದ ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ಎದುರು ಒಂದು ಗಂಟೆ 55 ನಿಮಿಷಗಳ ಹೋರಾಟದಲ್ಲಿ ಜಯ ದಾಖಲಿಸಿದರು. ಆಸ್ಟ್ರೇಲಿಯಾದ ಇವೊನ್ನೆ ಗೂಲಾ ಗಾಂಗ್ ಅವರ ಚೊಚ್ಚಲ ವಿಂಬಲ್ಡನ್ ಗೆಲುವಿಗೆ 50 ವರ್ಷ ಪೂರ್ಣಗೊಂಡ ಸಂಭ್ರಮವನ್ನು ಬಾರ್ಟಿ ಪ್ರಶಸ್ತಿಯೊಂದಿಗೆ ಹೆಚ್ಚಿಸಿಕೊಂಡರು. ಇದಕ್ಕೂ ಮೊದಲು 2019ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದ ಬಾರ್ಟಿಗೆ ಗ್ರಾಸ್ ಕೋರ್ಟ್ ನಲ್ಲಿ ಆಡಿದ ಮೊದಲ ಫೈನಲ್‌ನಲ್ಲೇ ಪ್ರಶಸ್ತಿ ದಕ್ಕಿಸಿಕೊಂಡರು.

    ಇದನ್ನೂ ಓದಿ: ಮುಂದಿನ ವರ್ಷ ಧೋನಿ ಐಪಿಎಲ್ ಆಡದಿದ್ದರೆ ಸುರೇಶ್ ರೈನಾ ಕೂಡ ಗುಡ್‌ಬೈ..!, 

    15ನೇ ವಯಸ್ಸಿನವರೆಗೂ ಟೆನಿಸ್ ಆಡಿದ ಬಾರ್ಟಿ, 2013ರಲ್ಲಿ ವಿಂಬಲ್ಡನ್‌ನಲ್ಲಿ ಆಡಿದರು. ಬಳಿಕ ಕ್ರಿಕೆಟ್‌ಗಾಗಿ 2014ರಲ್ಲಿ ಟೆನಿಸ್‌ನಿಂದ ಹಿಂದೆ ಸರಿದಿದ್ದರು. ತಮ್ಮ 19ನೇ ವಯಸ್ಸಿನವರೆಗೂ ಬ್ರಿಸ್ಬೇನ್ ತಂಡದ ಪರ ಆಡಿದ ಬಾರ್ಟಿ 2018ರಲ್ಲಿ ಮತ್ತೆ ಟೆನಿಸ್‌ಗೆ ವಾಪಸಾದರು. ಟೆನಿಸ್‌ಗೆ ಡಬಲ್ಸ್ ಮೂಲಕ ವಾಪಸಾದ ಬಾರ್ಟಿ, 2018ರಲ್ಲಿ ಯುಎಸ್ ಓಪನ್ ಜಯಿಸಿದ್ದರು. 2011ರಲ್ಲಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಬಾರ್ಟಿ, ಮುಕ್ತಯುಗದಲ್ಲಿ ಜೂನಿಯರ್ ಹಾಗೂ ಸೀನಿಯರ್ ಎರಡೂ ವಿಭಾಗದಲ್ಲೂ ವಿಂಬಲ್ಡನ್ ಪ್ರಶಸ್ತಿ ಜಯಿಸಿದ 3ನೇ ಆಟಗಾರ್ತಿ ಎನಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts