More

    ಸಿನಿಮಾ ಹಾಡಿನಿಂದ ಪ್ರೇರಿತರಾಗಿ ಏನೆಲ್ಲ ಮಾಡಬಹುದು, ಈ ಅದ್ಭುತ ನೋಡಿದರೆ ವಾವ್​ ಎನ್ನುವುದು ಗ್ಯಾರಂಟಿ!

    ಲಖನೌ: ಸಿನಿಮಾ ಹಾಡಿನಿಂದ ಪ್ರೇರಿತಗೊಂಡು ಏನೇನು ಮಾಡಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ!

    ಹಲವು ದಶಕಗಳ ಕಾಯುವಿಕೆ ಮುಗಿದಿದೆ. ಕೊನೆಗೂ ಬರೇಲಿ ತನ್ನ ಜುಮಕಿಯಿಂದ ಶೃಂಗಾರಗೊಂಡಿದೆ. ಹೌದು ಬರೇಲಿ ಮತ್ತು ಜುಮಕಿ ಎಂದಾಕ್ಷಣ ನೆನಪಿಗೆ ಬರುವುದು ಜುಮಕಾ ಗಿರಾರೇ, ಬರೇಲಿ ಕಿ ಬಜಾರ್​ ಮೇ… ಜುಮಕಾ ಗಿರಾರೇ ಎಂಬ ಹಿಂದಿ ಹಾಡು.

    ಬರೇಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ 2 ಕ್ವಿಂಟಾಲ್​ ತೂಗುವ, 20 ಅಡಿ ಎತ್ತರದ ಕಂಬದಲ್ಲಿ ಇರುವ ಹಿತ್ತಾಳೆಯ ಜುಮಕಿಯನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಷ್​ ಗಂಗವಾರ್​ ಉದ್ಘಾಟಿಸಿದರು.

    ಇದು ಬರೇಲಿ ನಗರಕ್ಕೆ ಆಗಮಿಸುತ್ತಿದ್ದಂತೆ ಕಣ್ಣಿಗೆ ಕಾಣುತ್ತದೆ. ದೆಹಲಿಯಿಂದ ಆಗಮಿಸುವವರಿಗೆ ಎದುರಿಗೆ ಥಟ್ಟನೆ ಕಾಣುತ್ತದೆ ಎಂದು ಬರೇಲಿ ಡೆವಲಪ್​ಮೆಂಟ್​ ಅಥಾರಿಟಿ (ಬಿಡಿಎ) ಹಿರಿಯ ಅಧಿಕಾರಿ ತಿಳಿಸಿದರು.

    ಸಾಯಾ ಸಿನಿಮಾದ ಈ ಜನಪ್ರಿಯ ಗೀತೆಯನ್ನು ಹಾಡಿದವರು ಸಾಧನಾ ಅವರು. ಈ ಗೀತೆಯಿಂದ ಪ್ರೇರಿತರಾದ ನಾವು ಈ ತರಹದ ಜುಮಕಿಯನ್ನು ನಿರ್ಮಾಣ ಮಾಡಲು ಯೋಚಿಸಿದೆವು. ಅದು ಈಗ ಉದ್ಘಾಟನೆಯಾಗಿದ್ದು ಎಲ್ಲರಲ್ಲೂ ಸಂತಸ ತಂದಿದೆ ಎಂದರು.

    ಹಾಗಾದರೆ ನೀವು ಮುಂದೆ ಬರೇಲಿಗೆ ಹೋದರೆ ಸೆಲ್ಫಿ ತೆಗೆದುಕೊಳ್ಳಲು ಉತ್ತಮ ಸ್ಥಳದ ಪರಿಚಯವಾಯಿತು ಅಲ್ಲವೆ? (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts