More

    ಸ್ವಲ್ಪ ಸೈಡಿಗೆ ಬನ್ನಿ ಎಂದಿದ್ದಕ್ಕೆ ಯುವತಿ ಗರಂ; ಲಾಂಗ್ ಬೀಸಿದ ರೌಡಿಶೀಟರ್..!

    ಬೆಂಗಳೂರು: ಹೆಣ್ಣು ಹೊನ್ನು ಮಣ್ಣಿಗಾಗಿ ಜನ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದೇ ರೀತಿಯ ಪ್ರಕರಣ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಗಿದೆ.

    ಈತ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡಲು ಬಂದು ಬಾರ್​ಗೆ ಬಂದು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇಷ್ಟೆಲ್ಲ ಗಲಾಟೆ ಮಾಡಿದ್ದೂ ಪ್ರತಿಷ್ಟಿತ ರಾಜಕಾರಣಿಗೆ ಸೇರಿದ ಬಾರ್​ನಲ್ಲಿ! ಈ ರೌಡಿಶೀಟರ್ ಯುವತಿಯೊಬ್ಬಳನ್ನ ಬಾರ್​ಗೆ ಕರೆ ತಂದು ಆತನ ಸಹಚರರೊಂದಿಗೆ ಅವಾಜ್ ಹಾಕಿ ಲಾಂಗ್ ಬೀಸಿ ಕಿರಿಕ್ ಮಾಡಿದ್ದಾನೆ.

    ಈ ಪ್ರಕರಣದ ಎಕ್ಸ್​ಕ್ಲ್ಯೂಸೀವ್ ಸಿಸಿಟಿವಿ ವಿಡಿಯೋ ದಿಗ್ವಿಜಯ ಚ್ಯಾನಲ್​ಗೆ ಲಭ್ಯವಾಗಿದ್ದು ಅದರಲ್ಲಿ ಲಾಂಗ್ ಬೀಸಿ ದರ್ಪ ಮೆರೆದಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

    ಸಂಪೂರ್ಣ ಕಥೆ ಏನು?

    ಈ ಗ್ಯಾಂಗ್ ಬೇರೊಂದು ಕಡೆ ಪಾರ್ಟಿ ಮಾಡಿ ಬಂದಿದ್ದು ಅಲ್ಲಿ ಮದ್ಯ ಖಾಲಿ ಎಂದು ಎಂಆರ್ ಪಿ ಬಾರ್ ಗೆ ಬಂದಿತ್ತು ಎನ್ನಲಾಗಿದೆ. ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಜತೆ ಈ ಗ್ಯಾಂಗ್ ಬಂದಿದ್ದು ಈ ವೇಳೆ ನಡೆದ ಸಿಬ್ಬಂದಿಗೆ ಲಾಂಗ್ ಬೀಸಿ ಬೆದರಿಸಿದ್ದಾರೆ.

    ಲಾಂಗ್ ಬೀಸಿರುವ ಅಸ್ಥಾಬ್ ಮತ್ತು ಯುವತಿ ಮೀಷೋ ಇಬ್ಬರೂ ಪ್ರೇಮಿಗಳಾಗಿದ್ದು ಇಬ್ಬರೂ ಉತ್ತರ ಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಯುವತಿ ಮೀಷೋ ಬರ್ತ್ ಡೇ ಹಿನ್ನಲೆ ಕೋರಮಂಗಲ ಬಳಿ ಪಾರ್ಟಿ ಮಾಡಿದ್ದರು. ಇವರ ಜತೆ ರೌಡಿಶೀಟರ್​ಗಳೂ ಪಾರ್ಟಿಗೆ ಹೋಗಿದ್ದರು.

    ಬಾರ್​ನಲ್ಲಿ ದಾಂಧಲೆ ಮಾಡಿದ್ದ ಗ್ಯಾಂಗ್​ನಲ್ಲಿ ರೌಡಿ ಶೀಟರ್ ಸಂತೋಷ್@ ರೋಸಿ, ರಾಮಾಂಜಿ‌ ಮುಂತಾದವರು ಇದ್ದರು. ಪ್ರೇಮಿಗಳಿಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಎಣ್ಣೆ ಖಾಲಿಯಾಗಿತ್ತು. ಹೀಗಾಗಿ ನೀಲಾ ಬಾರ್​ಗೆ ಆರೋಪಿಗಳು ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಅವರು ಒಂದು ಕೇಸ್ ಬಿಯರ್ ಆರ್ಡರ್​ ಮಾಡಿದ್ದು ಈ ವೇಳೆ ಯುವತಿ ಮಿಷೋ ಅಡ್ಡ ನಿಂತಿದ್ದಳು.

    ಆಗ ‘ಸ್ವಲ್ಪ ಸೈಡ್​ಗೆ ಬನ್ನಿ’ ಅಂದಿದಕ್ಕೆ ಕಿರಿಕ್ ಶುರುವಾಗಿದೆ. ಇದನ್ನು ತಪ್ಪಾಗಿ ಅರ್ಥಸಿಕೊಂಡ ಯುವತಿ ಬಾರ್ ನೌಕರರ ಮೇಲೆ ಗರಂ ಆಗಿದ್ದಾಳೆ. ಈ ವೇಳೆ ಬಾರ್​ನ ನೌಕರರು ಹಾಗೂ ಗ್ಯಾಂಗ್​ನ ನಡುವೆ ಜಗಳ ಉಂಟಾಗಿದ್ದು ಅಷ್ಟಕ್ಕೇ ನಶೆಯಲ್ಲಿದ್ದ ರೌಡಿಶೀಟರ್ ಸಂತೋಷ್ ಲಾಂಗ್ ತಂದು ಬಾರ್ ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದಾನೆ.

    ಲಾಂಗ್ ಬೀಸಿ ಬಾರಿನಲ್ಲಿದ್ದ ವಸ್ತುಗಳನ್ನ ಸಂತೋಷ್ ಪುಡಿ ಮಾಡಿದ್ದಾನೆ. ಅಲ್ಲಿದ್ದ ಯಶ್ವಂತ್, ಪ್ರಸನ್ನ, ಮಂಜುನಾಥ್ ಎಂಬುವರ ಮೇಲೆ ಇ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಸದ್ಯಕ್ಕೆ ರೌಡಿಶೀಟರ್​ಗಳನ್ನ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೀಗ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts