More

    ಪಾಳುಬಿದ್ದ ಬಾಲಭವನ ರಂಗಮಂದಿರ, ಪಾರ್ಕ್

    | ಅವಿನ್ ಶೆಟ್ಟಿ ಉಡುಪಿ

    ಬನ್ನಂಜೆ-ಬ್ರಹ್ಮಗಿರಿ ರಸ್ತೆಯಲ್ಲಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಲಾದ ಜಿಲ್ಲಾ ಬಾಲಭವನ ರಂಗಮಂದಿರ ಮತ್ತು ಪಾರ್ಕ್ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬಾಲಭವನ ಕಾರ್ಯಾಚರಿಸುತ್ತಿದೆ. ಹಲವು ವರ್ಷಗಳಿಂದ ಪಾಳುಬಿದ್ದಿದ್ದ ಈ ಜಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ಮಕ್ಕಳ ಪರಿಕರಗಳನ್ನು ಅಳವಡಿಸಲಾಗಿತ್ತು. ಆದರೆ ನಿರ್ವಹಣೆಯಿಲ್ಲದೆ ಒಂದೊಳ್ಳೆಯ ಪ್ರದೇಶ ಬಳಕೆಯಿಲ್ಲದೆ ವ್ಯರ್ಥವಾಗುತ್ತಿದೆ.

    14 ಲಕ್ಷ ರೂ. ರಂಗಮಂದಿರ: ನಾಲ್ಕು ವರ್ಷದ ಹಿಂದೆ ಜಿಲ್ಲಾ ಬಾಲಭವನದ ರಂಗಮಂದಿರವನ್ನು 14 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇದು ಉದ್ಘಾಟನೆಯಾಗಿ ಒಂದೆರಡು ಕಾರ್ಯಕ್ರಮವಷ್ಟೇ ನಡೆದಿದೆ. ಕಟ್ಟಡ ನಿರ್ಮಾಣದ ಸಾಮಗ್ರಿ, ಕಸ, ಕಡ್ಡಿಗಳಿಂದ ರಂಗಮಂದಿರ ಅವ್ಯವಸ್ಥೆಯ ಆಗರವಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

    ತುಕ್ಕು ಹಿಡಿದಿವೆ ಪರಿಕರಗಳು: ಇಲ್ಲಿ ಹಲವು ಬಗೆಯ ಆಟದ ಪರಿಕರಗಳಿದ್ದು ಅವೆಲ್ಲವೂ ತುಕ್ಕು ಹಿಡಿದಿದ್ದು, ಕೆಲವು ಮುರಿದು ಬಿದ್ದಿವೆ. ಲಕ್ಷಾಂತರ ರೂ. ಖರ್ಚು ಮಾಡಿ ರೂಪಿಸಿದ ರಂಗಮಂದಿರ ಮತ್ತು ಆಟದ ಪರಿಕರಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಾಳು ಮಾಡುತ್ತಿರುವ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಜಿಲ್ಲಾ ಬಾಲಭವನ ರಂಗಮಂದಿರ ಮತ್ತು ಪಾರ್ಕ್ ನಿರ್ವಹಣೆಗೆ ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ಅಡ್ಡಿಯಾಗಿತ್ತು. ಇದರ ನಿರ್ವಹಣೆಗೆ ಸಮಿತಿ ಕಾರ್ಯರೂಪದಲ್ಲಿದ್ದು, ಸಮಿತಿಯೊಂದಿಗೆ ಚರ್ಚಿಸಿ ಸ್ಥಳ ಸ್ವಚ್ಛತೆಗೆ ಮತ್ತು ನಿರ್ವಹಣೆ ಮಾಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
    | ಶೇಷಪ್ಪ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

    ಕ್ವೋಟ್
    ಬಾಲಮಂದಿರ ನಿರ್ವಹಣೆ ಮತ್ತು ಸ್ವಚ್ಛತೆ ಕಾರ್ಯಕ್ಕೆ ಕೂಡಲೆ ಕ್ರಮ ಕೈಗೊಳ್ಳಲಾಗುವುದು. ರಂಗಮಂದಿರ ಸಾರ್ವಜನಿಕ ಬಳಕೆಗೆ ಯೋಗ್ಯ ರೀತಿಯಲ್ಲಿ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು.
    |ದಿನಕರ ಬಾಬು, ಜಿಪಂ ಅಧ್ಯಕ್ಷ (ಪಟ ಹಾಖಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts