More

    ಏಪ್ರಿಲ್​ನಲ್ಲಿ 15 ದಿನ ಬ್ಯಾಂಕ್ ರಜೆ; ಯಾವ್ಯಾವ ದಿನಾಂಕ? ಇಲ್ಲಿದೆ ಪೂರ್ಣ ವಿವರ…

    ನವದೆಹಲಿ: ಪ್ರಸಕ್ತ ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತಿದೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳಿನಲ್ಲಿಯೇ ಬ್ಯಾಂಕ್​ಗಳಿಗೆ ಸಾಲು ಸಾಲು ರಜೆಗಳು ಎದುರಾಗಿವೆ. ಹಬ್ಬಗಳು ಮತ್ತು ವಾರಾಂತ್ಯದ ರಜೆಗಳನ್ನು ಲೆಕ್ಕಹಾಕಿದರೆ ಒಟ್ಟು 15 ದಿನಗಳ ಕಾಲ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ.
    ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ; ವಿಜಯಾನಂದ ಕಾಶಪ್ಪನವರ್ ರಾಜೀನಾಮೆ

    ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್​ಗಳು ತೆರೆದಿರುವುದಿಲ್ಲ. ತಿಂಗಳ ಪ್ರತಿ ಆದಿತ್ಯವಾರ ಬ್ಯಾಂಕ್​ಗಳಿಗೆ ರಜೆ ಇರುತ್ತವೆ. ಇವುಗಳ ಹೊರತಾಗಿ ರಾಷ್ಟ್ರೀಯ ಹಬ್ಬ ಹಾಗೂ ಪ್ರಾದೇಶಿಕವಾಗಿ ಆಚರಣೆಗೊಳ್ಳುವ ಹಬ್ಬದಂದು ಬ್ಯಾಂಕ್​ಗಳು ಗ್ರಾಹಕರ ಸೇವೆಗೆ ಲಭ್ಯವಿರುವುದಿಲ್ಲ.

    ಇದೀಗ ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕ್​ಗಳಿಗೆ ಸಾಲು ಸಾಲು ರಜೆಗಳು ಎದುರಾಗಿದ್ದು, ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಪ್ರಿಲ್ 1,2,4,5,7,8,9,14,15,16,18,21,22,23 ಮತ್ತು 30 ರಂದು ಬ್ಯಾಂಕ್​ಗಳು ರಜೆ ಇರುತ್ತವೆ. ಒಟ್ಟಾರೆ 15 ದಿನಗಳ ರಜೆಯ ಸಮಯದಲ್ಲಿ ಎಟಿಎಂ, ನಗದು ಠೇವಣಿ, ಆನ್​ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

    2023 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜೆಯ ಪಟ್ಟಿ;

    • ಏಪ್ರಿಲ್ 2 ಭಾನಿವಾರ
    • ಏಪ್ರಿಲ್ 4 ಮಹಾವೀರ ಜಯಂತಿ
    • ಏಪ್ರಿಲ್ 5 ಬಾಬು ಜಗಜೀವನ್ ರಾಮ್ ಜಯಂತಿ
    • ಏಪ್ರಿಲ್ 7 ಗುಡ್​ಫ್ರೈಡೆ
    • ಏಪ್ರಿಲ್ 8 ಎರಡನೇ ಶನಿವಾರ
    • ಏಪ್ರಿಲ್ 9 ಭಾನುವಾರ
    • ಏಪ್ರಿಲ್ 14 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನ
    • ಏಪ್ರಿಲ್ 15 ವಿಷು ಹಬ್ಬ, ಹಿಮಾಚಲ ದಿನ, ಬಂಗಾಳಿ ಹೊಸ ವರ್ಷದ ಕಾರಣ ಅಗರ್ತಲಾ, ಗುವಾಹಟಿ, ಕೊಚ್ಚಿ, ಕೊಲ್ಕತಾ, ಶಿಮ್ಲಾ, ತಿರುವನಂತಪುರಂನಲ್ಲಿ ರಜೆ
    • ಏಪ್ರಿಲ್ 16 ಭಾನುವಾರ
    • ಏಪ್ರಿಲ್ 18 ರಂದು ಶಬ್​ ಇ ಕಬರ್ ಸಲುವಾಗಿ ಜಮ್ಮ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ
    • ಏಪ್ರಿಲ್ 21 ಈದ್​-ಉಲ್-ಫಿತರ್ ಕಾರಣದಿಂದ ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರದಲ್ಲಿ ರಜೆ
    • ಏಪ್ರಿಲ್ 22 ನಾಲ್ಕನೇ ಶನಿವಾರ
    • ಏಪ್ರಿಲ್ 23 ಭಾನುವಾರ
    • ಏಪ್ರಿಲ್ 30 ಭಾನುವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts