More

    ಜುಲೈ ತಿಂಗಳಲ್ಲಿ 8 ದಿನಗಳು ಬ್ಯಾಂಕ್​ಗಳಿಗೆ ರಜೆ: ಯಾವಾಗ, ಎಲ್ಲೆಲ್ಲಿ ಅನ್ವಯ ಇಲ್ಲಿದೆ ಮಾಹಿತಿ

    ನವದೆಹಲಿ: ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್​ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಏಕೆಂದರೆ ಬರುವ ತಿಂಗಳು ಬಹುತೇಕ ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ.

    ಬ್ಯಾಂಕುಗಳಿಗೆ ಆಯಾ ಪ್ರದೇಶಕ್ಕನುಗುಣವಾಗಿ ರಜೆ ನೀಡಲಾಗುತ್ತಿದೆ. ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಬ್ಯಾಂಕ್​ಗಳ ರಜೆಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತೀಯ ರಿಸರ್ವ್​ ಬ್ಯಾಂಕ್​ ಮೂರು ವಿಭಾಗಗಳಲ್ಲಿ ಬ್ಯಾಂಕ್​ಗಳಿಗೆ ರಜೆ ನೀಡುತ್ತದೆ. ಹಾಗಾಗಿ ಬರುವ ತಿಂಗಳು ಬರೋಬ್ಬರಿ 14 ದಿನಗಳು ರಜೆ ಇರಲಿದೆ.

    ಜುಲೈ ತಿಂಗಳಲ್ಲೇ 5 ಭಾನುವಾರ, ಎರಡನೇ ಹಾಗೂ ಕೊನೇ ಶನಿವಾರ ಮತ್ತು ಜುಲೈ 11 ರಂದು ಈದ್​​ ಇರುವುದರಿಂದ ದೇಶಾದ್ಯಂತ ಬ್ಯಾಂಕ್​ಗಳಿಗೆ ಒಟ್ಟು 8 ದಿನ ರಜೆ ಇರಲಿದೆ. ಈ ನಡುವೆ ಉತ್ತರ ಭಾರತದಲ್ಲಿ ಅಗರ್ತಲ, ಶಿಲ್ಲಾಂಗ್​ ಗ್ಯಾಂಗ್​ಟಕ್​ ಸೇರಿದಂತೆ ಹಲವು ನಗರಗಳಲ್ಲಿ ಇನ್ನೂ ಒಂದು ವಾರಗಳ ಕಾಲ ಪ್ರತ್ಯೇಕ ರಜೆಗಳು ಸೇರಿವೆ.

    ಸದ್ಯಕ್ಕೆ ದೇಶಾದ್ಯಂತ ಒಟ್ಟು 8 ದಿನ ಬ್ಯಾಂಕ್​ಗಳಿಗೆ ರಜೆ ಇದ್ದು, ಏನೇ ಕೆಲಸವಿದ್ದರೂ ರಜೆಗೂ ಮುನ್ನ ಮುಗಿಸಿಕೊಳ್ಳುವುದು ಒಳ್ಳೆಯದು. (ಏಜೆನ್ಸೀಸ್​)

    VIDEO: ಚಲಿಸುತ್ತಿರುವ ರೈಲಿನಿಂದ ಬಿದ್ದ ಯುವಕ, ಬೆಚ್ಚಿಬೀಳಿಸುವ ವಿಡಿಯೋ ಮೊಬೈಲ್​​ನಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts