More

    ಭೂದೇವಿಗೆ ಪೂಜೆ ಸಲ್ಲಿಸಿದ ರೈತರು

    ಬಂಕಾಪುರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ರೈತರು ಶುಕ್ರವಾರ ಶೀಗೆ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ಈ ಬಾರಿ ಮಳೆಯಿಲ್ಲದೇ ಬರ ಅನುಭವಿಸುತ್ತಿರುವ ರೈತರು ಸಂಪ್ರದಾಯದಂತೆ ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದರು.
    ಎತ್ತುಗಳ ಮೈತೊಳೆದು, ಶೃಂಗರಿಸಿ ಕುಟುಂಬ ಸಮೇತ ಚಕ್ಕಡಿ, ಟ್ರಾೃಕ್ಟರ್‌ಗಳಲ್ಲಿ ಹೊಲಗಳಿಗೆ ತೆರಳಿ ಭೂದೇವಿ ಮತ್ತು ಫಸಲುಗಳಿಗೆ ಪೂಜೆ ಸಲ್ಲಿಸಿದರು.
    ಕಡಬು, ಕರ್ಚಿಕಾಯಿ, ಹೋಳಿಗೆ, ಎಣಗಾಯಿ ಪಲ್ಯ, ಪುಂಡಿ ಪಲ್ಯ, ಮಡಕಿಕಾಳು, ಬುತ್ತಿ ಹೀಗೆ ನಾನಾ ಬಗೆಯ ಅಡುಗೆ ಮಾಡಿ ಹೊಲದಲ್ಲಿ ಚರಗ ಚೆಲ್ಲಿದರು. ಬಳಿಕ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜತೆಗೂಡಿ ಸಹಭೋಜನ ಸವಿದರು. ಹಳೇಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಹೋತನಹಳ್ಳಿ, ಬಸರಿಕಟ್ಟಿ, ಬಿಸನಳ್ಳಿ, ಕುಂದೂರ ಗ್ರಾಮಗಳಲ್ಲಿ ರೈತರು ಶೀಗೆ ಹುಣ್ಣಿಮೆ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts