More

    ಬ್ಯಾಂಕ್​ ಕಳವು ಮಾಡಲು ಬಂದ, ಆಕಸ್ಮಿಕವಾಗಿ ತನ್ನ ಕತ್ತನ್ನೇ ಕೊಯ್ದುಕೊಂಡ

    ವಡೋದರ: ಗುಜರಾತ್​ನ ವಡೋದರದಲ್ಲಿನ ಬ್ಯಾಂಕ್​ವೊಂದರಲ್ಲಿ ಕಳವು ಮಾಡಲು ಬಂದ ಕಳ್ಳ, ಆಕಸ್ಮಿಕವಾಗಿ ತನ್ನ ಕತ್ತನ್ನೇ ಕೊಯ್ದುಕೊಂಡು ಮೃತಪಟ್ಟಿದ್ದಾನೆ.
    ವಡೋದರದ ಹರ್ನಿ ರಸ್ತೆಯಲ್ಲಿರುವ ಉಜ್ಜೀವನ್​ ಸ್ಮಾಲ್​ ಫೈನಾನ್ಸ್​ ಬ್ಯಾಂಕ್​ನ ಶಾಖೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ 12.45ರಿಂದ 1 ಗಂಟೆಯ ನಡುವೆ ಕಳ್ಳನೊಬ್ಬ ಬ್ಯಾಂಕ್​ ಒಳಗೆ ನುಗ್ಗಿದ್ದ. ಸೇಫ್ಟಿ ವಾಲ್ಟ್​ ಅನ್ನು ಕತ್ತರಿಸಲು ಎಲೆಕ್ಟ್ರಿಕ್​ ಕಟ್ಟರ್​ ಅನ್ನು ತಂದಿದ್ದ. ಸೇಫ್ಟಿ ವಾಲ್ಟ್​ ಅನ್ನು ಕತ್ತರಿಸಿದ್ದನಾದರೂ, ಹಣವನ್ನು ಕದಿಯುವ ಮುನ್ನ ಆಕಸ್ಮಿಕವಾಗಿ ಚಾಲನೆಗೊಂಡ ಎಲೆಕ್ಟ್ರಿಕ್​ ಕಟ್ಟರ್​ ಆತನ ಕತ್ತನ್ನೇ ಕೊಯ್ದಿದೆ ಎಂದು ವಾರಾಸಿಯಾ ಪೊಲೀಸ್​ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.

    ಕಳ್ಳನ ಚಲನವಲನ ಬ್ಯಾಂಕ್​ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಅಲ್ಲದೆ, ಚೆನ್ನೈನಲ್ಲಿರುವ ಬ್ಯಾಂಕ್​ನ ವಿಚಕ್ಷಣ ದಳದ ಸಿಬ್ಬಂದಿ ಈತನ ಚಲನವಲನವನ್ನು ನೋಡಿ, ಶಾಖಾ ವ್ಯವಸ್ಥಾಪಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಬ್ಯಾಂಕ್​ ಇರುವ ವ್ಯಾಪ್ತಿಯ ಪೊಲೀಸ್​ ಠಾಣೆಗೆ ಕರೆ ಮಾಡಿ, ಶಾಖೆಯನ್ನು ತಲುಪಿ ಒಳ ಹೋಗುವಷ್ಟರಲ್ಲೇ ಕಳ್ಳ ಮೃತಪಟ್ಟಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ರಷ್ಯಾದಲ್ಲಿ ಮೃತಪಟ್ಟ ತಮಿಳುನಾಡಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು; ಇಲ್ಲಿ ಕುಟುಂಬದವರ ಗೋಳಾಟ

    ಸೇಫ್ಟಿ ವಾಲ್ಟ್​ ಇದ್ದ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ನಿಲ್ಲಬಹುದಾದಷ್ಟು ಸ್ಥಳ ಮಾತ್ರ ಇತ್ತು. ಅಲ್ಲಿ ಕತ್ತಲಿದ್ದುದರಿಂದ ತನ್ನ ಚಲನವಲನದ ಮೇಲೆ ನಿಗಾ ಇಡಲು ಕಳ್ಳನಿಗೆ ಸಾಧ್ಯವಾಗಿಲ್ಲ. ಹಾಗಾಗಿ ಆತ ಆಕಸ್ಮಿಕವಾಗಿ ಕಟ್ಟರ್​ನ ವೈರ್​ ಅನ್ನು ಎಳೆದಿದ್ದಾನೆ. ಅದು ಚಾಲನೆಗೊಂಡ ಆತನ ಕತ್ತನ್ನೇ ಕೊಯ್ದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಇನ್​ಸ್ಪೆಕ್ಟರ್​ ಎಸ್​.ಎಸ್​. ಆನಂದ್​ ಹೇಳಿದ್ದಾರೆ.

    ಕಳ್ಳನ ಬಳಿ ಒಂದಷ್ಟು ದಾಖಲಾತಿಗಳು ದೊರೆತಿವೆ. ಆತ ಯಾರೆಂಬುದನ್ನು ಗುರುತಿಸಲು ಆತನ ಕುಟುಂಬದವರ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸದ್ಯ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿಂದು ಸೋಂಕಿತರಿಗಿಂತ ಡಿಸ್ಚಾರ್ಜ್​ ಆದವರೇ ಹೆಚ್ಚು; ರಾಜಧಾನಿಯಲ್ಲೂ ಹೊಸ ಪ್ರಕರಣಗಳಲ್ಲಿ ಗಣನೀಯ ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts