More

    ಗ್ರಾಹಕರ ಅಗತ್ಯ ಅರಿತರೆ ವ್ಯವಹಾರದಲ್ಲಿ ಲಾಭ

    ಚಿಕ್ಕಮಗಳೂರು: ಗ್ರಾಹಕರ ಅಗತ್ಯ ಹಾಗೂ ಸಂತೃಪ್ತಿ ಅರಿತರೆ ಯಾವುದೆ ವ್ಯವಹಾರದಲ್ಲಿ ಸೋಲಿಲ್ಲ. ಉತ್ತಮ ಕಾರ್ಯಕ್ಷಮತೆ ಹಾಗೂ ಸೇವೆಯಿಂದ ಅಭಿವೃದ್ಧಿ ಹೊಂದಬಹುದು ಎಂದು ಎಐಟಿ ಪ್ರೊ. ಡಾ. ಸಿ.ಟಿ.ಜಯದೇವ್ ಹೇಳಿದರು.

    ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ಣಾಟಕ ಬ್ಯಾಂಕ್​ನ ಐದನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರೇ ಇಲ್ಲದಿದ್ದರೆ ಯಾವ ವ್ಯವಹಾರವೂ ಇರುವುದಿಲ್ಲ. ಗ್ರಾಹಕರೇ ದೇವರೆಂಬಂತೆ ನಡೆದುಕೊಂಡರೆ ವ್ಯವಹಾರ ಉನ್ನತಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದರು.

    ಬ್ಯಾಂಕ್ ಶಾಖಾ ಪ್ರಬಂಧಕ ಶ್ರೀಪಾದ್ ಮಾತನಾಡಿ, ಕಲ್ಯಾಣನಗರದಂತಹ ಚಿಕ್ಕ ಬಡಾವಣೆಯಲ್ಲಿ ಆರಂಭವಾದ ಬ್ಯಾಂಕ್ ಶಾಖೆ ಕೇವಲ ಐದು ವರ್ಷಗಳಲ್ಲಿ 5 ಸಾವಿರ ಗ್ರಾಹಕರನ್ನು ಹೊಂದಿ 36 ಕೋಟಿ ರೂ. ವ್ಯವಹಾರ ಮಾಡಿರುವುದು ಹೆಮ್ಮೆ ಎನಿಸುತ್ತದೆ. ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಪರಿಶ್ರಮವೇ ಇದಕ್ಕೆ ಕಾರಣ ಎಂದು ತಿಳಿಸಿದರು.

    ಐಡಿಎಸ್​ಜಿ ಕಾಲೇಜು ಉಪನ್ಯಾಸಕ ಡಾ. ಬಿ.ಪಿ.ರಮೇಶ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಸ್.ಜಲಜಾಕ್ಷಿ, ಶಿವಮೊಗ್ಗ ಶ್ರೀನಿವಾಸ್, ಸá-ಧೀರ್, ಪೂರ್ಣಿಮಾ, ಯಶಸ್ವಿನಿ, ಸುನೀಲ್, ಶಾಂತಾ, ಮದನ್, ರಂಜನಾ, ಚಂದನ್, ಗ್ರಾಹಕರಾದ ಡಿ.ಕೆ.ಕೃಷ್ಣಮೂರ್ತಿ, ಗುರುಮೂರ್ತಿ, ಅನಿಲ್, ಆನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts