More

    ಬಂಜಾರರು ಪ್ರಕೃತಿ ಆರಾಧಕರು

    ಚಿತ್ರದುರ್ಗ; ನಮ್ಮ ಮುಂದಿರುವ ಸಂತ ಶ್ರೀ ಸೇವಾಲಾಲ್ ಆದರ್ಶಗಳನ್ನು ನಾವೆಲ್ಲರೂ ಪಾಲಿಸ ಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾವತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸೇವಾಲಾಲ್ ಅವರು ಮಹಿಳೆ ಮತ್ತು ಬಾಲಕಿಯರನ್ನು ದೇವರಂತೆ ಕಾಣಬೇಕೆಂದು ಹೇಳಿದ್ದಾರೆ ಎಂದರು.

    ಬಂಜಾರ ಸಮುದಾಯದವರು ಶ್ರಮಿಕರು ಹಾಗೂ ಪ್ರಕೃತಿ ಆರಾಧಕರು. ಜಗತ್ತಿನ ಯಾವುದೇ ಮೂಲೆಗೂ ಹೋದರೂ ಅವರಾಡುವ ಭಾಷೆ ಒಂದೇ ಆಗಿರುತ್ತದೆ. ಆಧುನೀಕರಣದ ಈ ಸಂದರ್ಭದಲ್ಲಿ ಬಂಜಾರ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳ ಬೇಕಿದೆ. ಸಮಾಜದ ಬೆಳವಣಿಗೆಗೆ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

    ಸಾಮಾಜಿಕ ಕಾರ‌್ಯಕರ್ತ ಆರ್.ವಿಶ್ವಸಾಗರ್ ಉಪನ್ಯಾಸ ನೀಡಿ, ವಿಶ್ವದಲ್ಲಿ 9 ಕೋಟಿ, ಭಾರತದಲ್ಲಿ 7 ಕೋಟಿ, ಕರ್ನಾಟಕದಲ್ಲಿ 30 ಲಕ್ಷ ಜನಸಂಖ್ಯೆ ಇದೆ. ದೇಶದ 22 ರಾಜ್ಯಗಳಲ್ಲಿ ಸಮುದಾಯದವರಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ್ದರಿಂದಾಗಿ ಅವರು ಸಮುದಾಯವನ್ನು ಅಪರಾಧಿ ಬುಡಕಟ್ಟು ಎಂದು ಕರೆದರು ಎಂದರು.
    ಸಮುದಾಯದ ಆಡಳಿತ ವ್ಯವಸ್ಥೆ ಗ್ರಾಪಂ ರಾಜ್ ವ್ಯವಸ್ಥೆಯನ್ನು ಹೋಲುತ್ತದೆ. ಸಕಲ ಸಮುದಾಯಗಳ ಹಿತವನ್ನೂ ಬಯಸುವ ಈ ಸಮುದಾಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದ ಬೇಕಿದೆ ಎಂದು ಹೇಳಿದರು.

    ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು. ಕುರುಬ ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ನಾಯಕ ಸಂಘದ ಮುಖಂಡ ಪಾಪನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಬಂಜಾರ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗೇಂದ್ರ ನಾಯ್ಕ,

    ಗೌರವಾಧ್ಯಕ್ಷ ಜಿ.ರಾಜನಾಯ್ಕ, ಕಾರ‌್ಯದರ್ಶಿ ಕೆ.ಮಂಜುನಾಥನಾಯ್ಕ, ನಿರ್ದೇಶಕ ನರೇನಹಳ್ಳಿ ಅರುಣ್‌ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗೇಂದ್ರನಾಯ್ಕ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ, ಗ್ರಾಪಂ ಸದಸ್ಯೆ ಸವಿತಾಬಾಯಿ ಉಮೇಶ್‌ನಾಯ್ಕ, ಬಂಜಾರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ವೀಣಾ, ಸಮುದಾಯದ ಮುಖಂಡರಾದ ಅನಂತಮೂರ್ತಿ, ಸುರೇಶ್‌ನಾಯ್ಕ, ಪ್ರಕಾಶ ನಾಯ್ಕ, ಎನ್.ಹಾಲನಾಯ್ಕ, ಸಿ.ರಮೇಶ್, ವಸಂತ್ ನಾಯ್ಕ, ಗಣೇಶ್, ನಿಂಗನಾಯ್ಕ, ರಮೇಶ್ ರಾವತ್ ಇತರರು ಇದ್ದರು.

    ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಜಿ.ವಿ.ಮಾರುತೇಶ್ ಮತ್ತವರ ತಂಡದವರು ಹಾಗೂ ಸಮುದಾಯದ ಹಿರಿಯರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts