More

    ಬಾಂಗ್ಲಾ ಯುವತಿಯ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣ: ಪೊಲೀಸ್​ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಯಲು

    ಬೆಂಗಳೂರು: ಬಾಂಗ್ಲಾ ಯುವತಿಯ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 164 ಹೇಳಿಕೆ ದಾಖಲಿಸಲು ಸಂತ್ರಸ್ತ ಯುವತಿಯನ್ನು ಇಂದು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಇದಕ್ಕೂ ಮುನ್ನ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಕೆಲವು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯುವತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ 164 ಹೇಳಿಕೆ ದಾಖಲಿಸಲು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಅಜ್ಞಾತ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ 164 ಹೇಳಿಕೆ ದಾಖಲಿಸಲಾಗುತ್ತದೆ.

    ಈ ನಡುವೆ ಯುವತಿ ನೀಡಿದ ಮಾಹಿತಿಗೆ ಮೇರೆಗೆ ವಿಚಾರಣೆಗೆಂದು ಇಬ್ಬರು ಮಹಿಳಾ ಆರೋಪಿಗಳನ್ನು ಮಹಿಳಾ ಪೊಲೀಸರು ಭದ್ರತೆಯಲ್ಲಿ ಕರೆತಂದಿದ್ದಾರೆ. ನಿನ್ನೆ ಮಹಿಳಾ ಆರೋಪಿಗಳನ್ನು ವಿಚಾರಣೆ ನಡೆಸಿದ್ದ ಪೊಲೀಸರು ಇಂದು ರಾಮಮೂರ್ತಿನಗರ ಠಾಣೆಗೆ ಕರೆತಂದಿದ್ದಾರೆ. ಈ ಇಬ್ಬರು ಮಹಿಳಾ ಆರೋಪಿಗಳು ಯುವತಿ ಮೇಲೆ ಹಲ್ಲೆ ನಡೆಯುವಾಗ ಸ್ಥಳದಲ್ಲೇ ಇದ್ದರು ಎಂದು ತಿಳಿದುಬಂದಿದೆ.

    ಆರೋಪಿಗಳ ವಿಚಾರಣೆಯಿಂದ ಇದೀಗ ಮತ್ತಷ್ಟು ಮಾಹಿತಿ ಬೆಳಕಿಗೆ ಬಂದಿದ್ದು, ಬಂಧಿತ ಇಬ್ಬರು ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದೆ ಯುವತಿಯಂತೆ. ಆರೋಪಿ ರಖೀಬುಲ್ ಇಸ್ಲಾಂ ಸಾಗರ್ ಮತ್ತು ರಿದಯ್ ಬಾಬುನನ್ನು ಕೆಲ ತಿಂಗಳ ಹಿಂದೆ ಯುವತಿ ಬೆಂಗಳೂರಿಗೆ ಕರೆತಂದಿದ್ದಳಂತೆ. ಹೀಗೆಂದು ಹೈದರಾಬಾದ್ ಮೂಲದ ಆರೋಪಿ ಹಕೀಲ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಇನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಹೈದರಾಬಾದ್ ಪೊಲೀಸರಿಂದ ಆರೋಪಿ ಮೊಹಮ್ಮದ್ ಶೇಕ್ ಪತ್ನಿ ಒಮ್ಮೆ ಬಂಧಿತಳಾಗಿದ್ದಳು. ಈ ವೇಳೆ ಸಂತ್ರಸ್ತ ಯುವತಿಯೇ ಶೇಕ್​ ಪತ್ನಿಯ ಜಾಮೀನಿಗೆ ಶ್ಯೂರಿಟಿ ನೀಡಿ ಬಿಡುಗಡೆಗೆ ಸಹಾಯ ಮಾಡಿದ್ದಳು. ಇದೇ ಸಲುಗೆ ಮೇಲೆ ಆರೋಪಿ ಮೊಹಮ್ಮದ್‌ ಶೇಕ್ ಸಂತ್ರಸ್ತೆಗೆ ಬೆಂಗಳೂರಿನ ಮನೆಯಲ್ಲಿ ಉಳಿದುಕೊಳ್ಳಲು ಕೀ ಕೊಟ್ಟಿದ್ದ ಎಂದು ತಿಳಿದುಬಂದಿದೆ.

    ಮನೆಯಲ್ಲಿ ಆಕೆ ಒಬ್ಬಳೆ ಇದ್ದಾಳೆ ಅಂದುಕೊಂಡಿದ್ದೆ. ಆದರೆ, ಈ ಯುವಕರು ಯಾಕ್ರಿದ್ರೂ ಎಂಬುದು ಗೊತ್ತಿರಲಿಲ್ಲ ಎಂದು ಆರೋಪಿ ಮೊಹಮ್ಮದ್‌ ಬಾಬು ಶೇಕ್ ಹೇಳಿಕೆ ನೀಡಿದ್ದಾನೆ.

    ಸದ್ಯ ಬಂಧಿತ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಇದೀಗ ಯುವತಿ ಹೇಳಿಕೆ ಪಡೆದು ಹೇಗೆ ಪರಿಚಯ? ನಗರಕ್ಕೆ ಬಂದಿದ್ದು ಯಾವಾಗ? ಏನು ಕೆಲಸ ಮಾಡುತ್ತಿದ್ದರು? ಆರೋಪಿಗಳು ನಿಮಗೆ ಮೊದಲೇ ಪರಿಚಯ ಇತ್ತಾ? ಆರೋಪಿಗಳು ಕೊಟ್ಟ ಹೇಳಿಕೆ ಆಧಾರದ ಮೇಲೂ ಯುವತಿಯ ವಿಚಾರಣೆಯನ್ನು ನಡೆಸಲಾಗುತ್ತದೆ. ಆ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ತಯಾರಿ ನಡೆಯುತ್ತದೆ.

    ಈಗಾಗಲೇ ಪ್ರಕರಣ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರು ಜನರ ಬಗ್ಗೆಯೂ ಯುವತಿಯಿಂದ ಮಾಹಿತಿ ಪಡೆಯಲಿದ್ದಾರೆ. ಬಂಧಿತ ಬಾಂಗ್ಲಾ ಆರೋಪಿಗಳ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. ಪಾಸ್ ಪೋರ್ಟ್, ಐಡಿ ಕಾರ್ಡ್ ಆಗಲಿ ಏನು ಇಲ್ಲ. ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ ಬೆಂಗಳೂರಿಗೆ ಎಂಟ್ರಿ ನೀಡಿರುವುದು ತಿಳಿದುಬಂದಿದೆ.

    ಪೊಲೀಸರ ವಿಚಾರಣೆ ವೇಳೆ ಪಾಸ್ ಪೋರ್ಟ್ ಸೇರಿದಂತೆ ಯಾವುದೇ ದಾಖಲೆ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿಲ್ಲ. ನಾಲ್ಕೈದು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆನ್ನಲಾಗಿದೆ. ಆರೋಪಿ ಮೊಹಮ್ಮದ್‌ ಬಾಬು ಶೇಕ್ ಬಡಗಿ ಕೆಲಸ ಎಂದು ಮಾಹಿತಿ ನೀಡಿ ಆಧಾರ್ ಕಾರ್ಡ್ ಮಾಡಿಸಿದ್ದ. ರಿದಯ್ ಬಾಬು ಯೂಟ್ಯೂಬರ್ ಅಗಿದ್ದೆ ಎಂದು ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಮೂಲದ ಹಕೀಲ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನಂತೆ. ಅಕ್ರಮ ವಲಸೆ ಬಂದು ನಗರದಲ್ಲಿ ನೆಲೆಸಿದ್ದರು. ಫಾರಿನರ್ಸ್ ಆಕ್ಟ್ ಅಡಿಯಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬೆಂಗಳೂರಿನಲ್ಲಿ 22 ವರ್ಷದ ಯುವತಿ ಮೇಲೆ ಅತ್ಯಾಚಾರ! ಮರ್ಮಾಂಗಕ್ಕೆ ಮದ್ಯದ ಬಾಟಲ್ ಇಟ್ಟು ವಿಡಿಯೋ ಮಾಡಿದ್ದ ಪಾಪಿಗಳನ್ನು ವಶಕ್ಕೆ ಪಡೆದ ಪೊಲೀಸ್​

    ಬೆಂಗಳೂರಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇನ್ನೂ ಕೆಲ ಆರೋಪಿಗಳು ಕೇರಳದಲ್ಲಿ ಅಡಗಿರುವ ಶಂಕೆ

    ಮೇಟಿ ಲೈಂಗಿಕ ಹಗರಣ ಮುಚ್ಚಿಹಾಕಿದವರು ಈಗ ನೈತಿಕತೆ ಕಲಿಸ್ತಿದ್ದಾರೆಯೆ?- ಬೊಮ್ಮಾಯಿ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts