More

    ಟಿ20 ವಿಶ್ವಕಪ್ ಮೊದಲ ಸುತ್ತು: ಸೂಪರ್-12 ಹಂತಕ್ಕೇರಿದ ಬಾಂಗ್ಲಾದೇಶ

    ಮಸ್ಕತ್: ಅನುಭವಿ ಆಟಗಾರ ಶಕೀಬ್ ಅಲ್ ಹಸನ್ (46ರನ್, 37 ಎಸೆತ, 3 ಸಿಕ್ಸರ್, 9ಕ್ಕೆ 4) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸತತ 2ನೇ ಜಯ ದಾಖಲಿಸುವ ಮೂಲಕ ಬಿ ಗುಂಪಿನಿಂದ ಸೂಪರ್-12 ಹಂತಕ್ಕೇರಿತು. ಗುರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 84 ರನ್‌ಗಳಿಂದ ಪಪುವಾ ನ್ಯೂ ಗಿನಿಯಾ (ಪಿಎನ್‌ಜಿ) ತಂಡವನ್ನು ಸೋಲಿಸಿ ಅತ್ಯುತ್ತಮ (1.733) ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು ಆಘಾತ ಎದುರಿಸಿದ್ದ ಬಾಂಗ್ಲಾದೇಶ ತಂಡ ಸತತ ಎರಡು ಗೆಲುವಿನ ಮೂಲಕ ಗಮನಸೆಳೆಯಿತು. ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿದ ಪಿಎನ್‌ಜಿ ಟೂರ್ನಿಗೆ ಅಧಿಕೃತ ವಿದಾಯ ಹೇಳಿತು.

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಶಕೀಬ್ ಅಲ್ ಹಸನ್ ಹಾಗೂ ನಾಯಕ ಮೊಹಮದುಲ್ಲ (50ರನ್, 28 ಎಸೆತ, 3 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 181 ಕಲೆಹಾಕಿತು. ಪ್ರತಿಯಾಗಿ ಬಾಂಗ್ಲಾದೇಶ ಬೌಲರ್‌ಗಳಾದ ಶಕೀಬ್, ಮೊಹಮದ್ ಸೈುದ್ದೀನ್ (21ಕ್ಕೆ 2), ಟಸ್ಕಿನ್ ಅಹಮದ್ (12ಕ್ಕೆ 2) ಮಾರಕ ದಾಳಿಗೆ ನಲುಗಿದ ಪಿಎನ್‌ಜಿ ತಂಡ 19.3 ಓವರ್‌ಗಳಲ್ಲಿ 97 ರನ್‌ಗಳಿಗೆ ಸರ್ವಪತನ ಕಂಡಿತು.

    ಬಾಂಗ್ಲಾದೇಶ: 7 ವಿಕೆಟ್‌ಗೆ 181 (ಲಿಟನ್ ದಾಸ್ 29, ಶಕೀಬ್ ಅಲ್ ಹಸನ್ 46, ಮೊಹಮದುಲ್ಲ 50, ಅಫ್ಿ ಹುಸೇನ್ 21, ಕಬುವಾ ಮೊರೆಯಾ 26ಕ್ಕೆ 2, ಡೊಮಿನ್ ರಾವು 40ಕ್ಕೆ 2, ಅಸಾದ್ ವಾಲಾ 26ಕ್ಕೆ 2), ಪಪುವಾ ನ್ಯೂ ಗಿನಿ: 19.3 ಓವರ್‌ಗಳಲ್ಲಿ 97 (ಕಿಪ್ಲಿನ್ ಡೊರಿಗಾ 46*, ಶಕೀಬ್ ಅಲ್ ಹಸನ್ 9ಕ್ಕೆ 4, ಟಸ್ಕಿನ್ ಅಹಮದ್ 12ಕ್ಕೆ 2, ಮೊಹಮದ್ ಸೈುದ್ದೀನ್ 21ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts