More

    ಟ್ರೋಫಿ ಗೆದ್ದ ಬಳಿಕ ಬಾಂಗ್ಲಾ ಅತಿರೇಕದ ವರ್ತನೆ; ಗಂಭೀರವಾಗಿ ಪರಿಗಣಿಸಿದ ಐಸಿಸಿ

    ಪಾಟ್​ಚೆಫ್​ಸ್ಟ್ರೋಮ್ (ದಕ್ಷಿಣ ಆಫ್ರಿಕಾ): ಭಾರತ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿ 19 ವಯೋಮಿತಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಬಾಂಗ್ಲಾದೇಶ ತಂಡ ತೋರಿದ ಅಸಭ್ಯ ವರ್ತನೆಗೆ ಕ್ರಿಕೆಟ್ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಬಾಂಗ್ಲಾ ತಂಡದ ಆಟಗಾರರ ಆಕ್ರಮಣಕಾರಿ ಸಂಭ್ರಮವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಪಂದ್ಯದ ಕೊನೇ ಹಂತದ ಕೆಲ ವಿಡಿಯೋ ದೃಶ್ಯಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ಟೀಮ್ ಇಂಡಿಯಾ ಮ್ಯಾನೇಜರ್ ಅನಿಲ್ ಪಟೇಲ್ ತಿಳಿಸಿದ್ದಾರೆ.

    ಭಾರತ ವಿರುದ್ಧ ಭಾನುವಾರ ದಾಖಲಾದ ಐತಿಹಾಸಿಕ ಮೂರು ವಿಕೆಟ್ ಗೆಲುವಿನ ಬಳಿಕ ಕೆಲ ಬಾಂಗ್ಲಾದೇಶದ ಆಟಗಾರರ ವರ್ತನೆ ಅತಿರೇಕದ ಮಟ್ಟದಲ್ಲಿತ್ತು. ಬಾಂಗ್ಲಾದೇಶ ತಂಡದ ನಾಯಕ ಅಕ್ಬರ್ ಅಲಿ ಕೂಡ ಇದನ್ನು ದುರಾದೃಷ್ಟದ ಘಟನೆ ಎಂದು ಹೇಳಿದ್ದಲ್ಲದೆ, ವರ್ತನೆಗೆ ಕ್ಷಮೆಯಾಚಿಸಿದ್ದರು. ಭಾರತ ತಂಡದ ನಾಯಕ ಪ್ರಿಯಂ ಗಾರ್ಗ್, ‘ಕೊಳಕು ವರ್ತನೆ’ ಎಂದು ಪ್ರತಿಕ್ರಿಯೆ ನೀಡಿದ್ದರು. ಒಟ್ಟಾರೆ ಪ್ರಕರಣದಲ್ಲಿ ಭಾರತದ ಆಟಗಾರರ ಯಾವುದೇ ತಪ್ಪಿಲ್ಲ ಎಂದೂ ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆ ಕ್ಷಣದಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಆಘಾತದಲ್ಲಿದ್ದರು. ಕೊನೇ ಹಂತದ ಕೆಲ ನಿಮಿಷಗಳ ಕೆಲ ದೃಶ್ಯಗಳನ್ನು ನೋಡಿದ ಬಳಿಕ, ಐಸಿಸಿ ನಮಗೆ ಇದರ ಮಾಹಿತಿ ನೀಡಲಿದೆ ಎಂದು ಅನಿಲ್ ಪಟೇಲ್ ಹೇಳಿದ್ದಾರೆ.

    ಬಾಂಗ್ಲಾದೇಶ ತಂಡದ ಫೀಲ್ಡಿಂಗ್ ವೇಳೆಯಲ್ಲೂ ಆಟಗಾರರು ಭಾರತದ ಬ್ಯಾಟ್ಸ್​ಮನ್​ಗಳಿಗೆ ವಿಪರೀತವಾಗಿ ಕೆಣಕಿದ್ದರು. ಅದರಲ್ಲೂ ತಂಡದ ಅಗ್ರ ವೇಗಿ ಶರೀಫುಲ್ ಇಸ್ಲಾಂ ಪ್ರತಿ ಎಸೆದ ಬೆನ್ನಲ್ಲಿಯೇ ಬ್ಯಾಟ್ಸ್​ಮನ್​ಅನ್ನು ಮಾತಿನಿಂದ ಕೆಣುಕುವ ಕೆಲಸ ಮಾಡಿದ್ದರು.

    ಪಂದ್ಯದ ಬೆನ್ನಲ್ಲಿಯೇ ಬಾಂಗ್ಲಾದ ಎಲ್ಲ ಆಟಗಾರರ ಮೈದಾನಕ್ಕೆ ಆಗಮಿಸಿ, ಭಾರತದ ಆಟಗಾರರ ತೀರಾ ಎದು ರಲ್ಲೇ ಸಂಭ್ರಮಿಸಲು ಆರಂಭಿಸಿದರು. ಅವರ ದೇಹಭಾಷೆ ಯೂ ಈ ವೇಳೆ ಅತಿರೇಕದಲ್ಲಿತ್ತು. ಎರಡೂ ತಂಡಗಳ ಆಟ ಗಾರರು ಒಂದು ಹಂತದಲ್ಲಿ ಗುದ್ದಾಡುವ ಮಟ್ಟಕ್ಕೆ ಇಳಿದದ್ದರು. ಕೊನೆಗೆ ಕೋಚಿಂಗ್ ಸಿಬ್ಬಂದಿ ಹಾಗೂ ಮೈದಾನದಲ್ಲಿದ್ದ ಪಂದ್ಯದ ಅಧಿಕಾರಿಗಳು ಸಮಾಧಾನ ಪಡಿಸಿದ್ದರು.

    ಸೋಲು, ಗೆಲುವು ಆಟದ ಬಂದು ಭಾಗ ಎಂದು ನಾವು ನಂಬಿದ್ದೇವೆ. ಒಂದು ತಂಡ ಗೆಲ್ಲಬೇಕು, ಇನ್ನೊಂದು ತಂಡ ಸೋಲಬೇಕು. ಆದರೆ, ಅವರ ಪ್ರತಿಕ್ರಿಯೆ ತೀರಾ ಕೊಳಕಾಗಿತ್ತು. ಈ ಘಟನೆ ನಡೆಯಬಾರದಿತ್ತು.

    | ಪ್ರಿಯಂ ಗಾರ್ಗ್, ಭಾರತ 19 ವಯೋಮಿತಿ ತಂಡದ ನಾಯಕ

    ಮ್ಯಾಚ್ ರೆಫ್ರಿ ವಿಷಾದ

    ಪಂದ್ಯ ಮುಗಿದ ಬೆನ್ನಲ್ಲಿಯೇ ಭಾರತ ತಂಡದ ಡ್ರೆಸಿಂಗ್ ರೂಮ್ೆ ಬಂದ ಮ್ಯಾಚ್ ರೆಫ್ರಿ ಗ್ರೇಮ್ ಲಾಬೋರೆ, ಕೊನೇ ಹಂತದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ‘ರೆಫ್ರಿ ಡ್ರೆಸಿಂಗ್ ರೂಮ್ೆ ಬಂದು, ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಐಸಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ತಿಳಿಸಿದರು. ಕೊನೇ ಹಂತದಲ್ಲಿ ಆಗಿದ್ದೇನು ಎನ್ನುವ ಬಗ್ಗೆ ವಿಡಿಯೋ ಪರಿಶೀಲಿಸಿ ತಿಳಿಸುವುದಾಗಿ ಮಾಹಿತಿ ನೀಡಿದರು’ ಎಂದು ಟೀಮ್ ಇಂಡಿಯಾ ಮ್ಯಾನೇಜರ್ ಅನಿಲ್ ಪಟೇಲ್ ತಿಳಿಸಿದ್ದಾರೆ.

    ಈ ಘಟನೆ ನಡೆಯಬಾರದಿತ್ತು. ಆ ಕ್ಷಣದಲ್ಲಿ ಏನಾಯಿತು ಎನ್ನುವುದು ನನಗೆ ತಿಳಿದಿಲ್ಲ. ಆದರೆ, ಫೈನಲ್​ನಲ್ಲಿ ಇಂಥ ಗೆಲುವು ದಾಖಲಾದಾಗ ಆಟಗಾರರ ಭಾವನೆಗಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಎದುರಾಳಿಗೆ ಗೌರವ ನೀಡಬೇಕಿತ್ತು. ಕ್ರಿಕೆಟ್ ಎನ್ನುವುದು ಜಂಟಲ್​ವುನ್ ಕ್ರೀಡೆ. ನನ್ನ ತಂಡದ ಪರವಾಗಿ ಎಲ್ಲರ ಕ್ಷಮೆ ಕೇಳುತ್ತೇನೆ.

    | ಅಕ್ಬರ್ ಅಲಿ, ಬಾಂಗ್ಲಾದೇಶ 19 ವಯೋಮಿತಿ ತಂಡದ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts