More

    ಬಾಂಗ್ಲಾ ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

    ಬೆಂಗಳೂರು: ಕಳೆದ ವರ್ಷ ರಾಜಧಾನಿ ಬೆಂಗಳೂರನ್ನೇ ನಡುಗಿಸಿದ್ದ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕೊನೆಗೂ ಶಿಕ್ಷೆಯಾಗಿದೆ.

    54ನೇ ಸಿಸಿಹೆಚ್​​ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 11 ಅಪರಾಧಿಗಳ ಪೈಕಿ ಇಬ್ಬರಿಗೆ ನ್ಯಾಯಾಲಯ ಪ್ರತ್ಯೇಕ ಶಿಕ್ಷೆ ವಿಧಿಸಿದೆ. ಅಪರಾಧಿ ತಾನ್ಯಾ ಎಂಬುವನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಜಮಾಲ್​​ ಎಂಬುವವನಿಗೆ ಫಾರಿನ್​ ಆ್ಯಕ್ಟ್​ ಅನ್ವಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ನ್ಯಾಯಾಧೀಶ ಎನ್​​. ಸುಬ್ರಹ್ಮಣ್ಯ ಅವರಿಂದ ತೀರ್ಪು ಪ್ರಕಟಿಸಿದ್ದು, ಸೋಭುಜ್ ಶೇಖ್, ರಿದಯ್ ಬಾಬು,ರಕಿಬುಲ್ ಇಸ್ಲಾಂ ಸಾಗರ್,ಮಹಮ್ಮದ್ ಬಾಬು,ರಫ್ಸಾನ ಮಂಡಲ್, ತಾನಿಯಾ ಲೇ, ದಾಲಿಮ್, ಅಜೀಂ, ಜಮಾಲ್, ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

    2021ರ ಮೇ18 ರಂದು ನಡೆದಿದ್ದ ಗ್ಯಾಂಗ್ ರೇಪ್‌ ಭಾರೀ ಸಂಚಲನ ಮೂಡಿಸಿತ್ತು. ವೀಡಿಯೋ ವೈರಲ್ ಆಗ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು.ಮೇ 27 ರಂದು ಎಫ್ಐಆರ್ ದಾಖಲಿಸಿದ್ದರು.

    ತನಿಖೆ ನಡೆಸಿ ಒಟ್ಟು 12 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.(ದಿಗ್ವಿಜಯ ನ್ಯೂಸ್​)

    ಐದು ವರ್ಷಗಳಿಂದ ಬಟ್ಟೆಯೇ ಧರಿಸಿಲ್ಲ, ಬಟ್ಟೆ ಅಂದ್ರೆನೇ ಆಗಿಬರಲ್ಲ ಎಂದು ಈ ಮಹಿಳೆ ಮಾಡಿಕೊಂಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts