More

    ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಕನ್ನಡಿಗ ರಚಿನ್ ರವೀಂದ್ರ ಆಯ್ಕೆ

    ವೆಲ್ಲಿಂಗ್ಟನ್: ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೂನ್ 2 ರಿಂದ ಆರಂಭವಾಗಲಿರುವ 2 ಟೆಸ್ಟ್ ಪಂದ್ಯಗಳ ಸರಣಿಗೆ 20 ಸದಸ್ಯರ ನ್ಯೂಜಿಲೆಂಡ್ ತಂಡದಲ್ಲಿ 21 ವರ್ಷದ ಆಲ್ರೌಂಡರ್ ರಚಿನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಚಿನ್ ರವೀಂದ್ರ ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಮೂಲತಃ ಬೆಂಗಳೂರಿನವರಾಗಿದ್ದು, ನ್ಯೂಜಿಲೆಂಡ್‌ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಸ್ಪತ್ರೆಯಿಂದ ಬಿಡಗಡೆ

    2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ 16 ವರ್ಷದ ರಚಿನ್ ರವೀಂದ್ರ ನ್ಯೂಜಿಲೆಂಡ್ ತಂಡ ಪ್ರತಿನಿಧಿಸಿದ್ದರು. ತಮ್ಮ ಪ್ರತಿಭೆ ಅನಾವರಣ ಮಾಡಲು ರಚಿನ್‌ಗೆ ಹೆಚ್ಚು ಅವಕಾಶ ಸಿಗಲಿಲ್ಲ. ಬಳಿಕ 2018ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲೂ ಆಡಿದ ರಚಿನ್, ಉತ್ತಮ ನಿರ್ವಹಣೆ ತೋರಿದ್ದರು. ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ ರಚಿನ್‌ಗೆ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮಣೆಹಾಕಿದೆ. ಸ್ಪಿನ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ರಚಿನ್, ತಂದೆ ಕೃಷ್ಣಮೂರ್ತಿ ಅವರ ಕನಸನ್ನು ನನಸಾಗಿಸಿದ್ದಾರೆ. ಕೃಷ್ಣಮೂರ್ತಿ ಸಹ ಬೆಂಗಳೂರಿನಲ್ಲಿ ಹಲವು ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಮಾಜಿ ಆಟಗಾರ ಜೆ.ಅರುಣ್ ಕುಮಾರ್ ಅವರ ಒಡನಾಡಿಯಾಗಿದ್ದಾರೆ.

    ಇದನ್ನೂ ಓದಿ: VIDEO: ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್..!

    ಎಡಗೈ ಸ್ಪಿನ್ನರ್ ಆಗಿರುವ ರಚಿನ್ 26 ಪ್ರಥಮ ದರ್ಜೆ ಪಂದ್ಯಗಳಿಂದ 144 ವೈಯಕ್ತಿಕ ಗರಿಷ್ಠ ಮೊತ್ತದೊಂದಿಗೆ 1470 ರನ್ ಗಳಿಸಿ, 22 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಎರಡು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಆಲ್ರೌಂಡರ್ ರಚಿನ್ ರವೀಂದ್ರ ಜತೆಗೆ ವೇಗಿ ಜಾಕೊಬ್ ಡುಫಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿದ್ದಾರೆ. 2016ರ ಆಗಸ್ಟ್‌ನಲ್ಲಿ ಕಡೇ ಬಾರಿಗೆ ಟೆಸ್ಟ್ ಪಂದ್ಯವಾಡಿದ್ದ ಡೌಗ್ ಬ್ರೇಸ್‌ವೆಲ್ ತಂಡಕ್ಕೆ ವಾಪಸಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts