More

    ಉದಯಭಾನು ಕಲಾ ಸಂಘದಲ್ಲಿ ಕೌಶಲ್ಯ ತರಬೇತಿ ಶಿಬಿರ

    ಬೆಂಗಳೂರು : ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಕನಿಷ್ಠ ಎರಡು ಕೌಶಲ್ಯಗಳನ್ನಾದರೂ ಕಲಿಯಬೇಕಾಗಿದ್ದು ಅಗತ್ಯ ಎಂದು ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಚೇರ್ಮನ್ ಲೋಕನಾಥ ಅಭಿಪ್ರಾಯಿಸಿದ್ದಾರೆ. ಗವಿಪುರಂ ಗುಟ್ಟಳ್ಳಿಯಲ್ಲಿರುವ ಉದಯಭಾನು ಕಲಾಸಂಘವು ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರದ ನಾಲ್ಕನೇ ತಂಡದ ಸಮಾರೋಪ ಮತ್ತು ಐದನೇ ತಂಡದ ಚಾಲನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ತರಬೇತಿ ಪೂರೈಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರತಿವರ್ಷ 25 ಸಾವಿರ ಬಟ್ಟೆಯ ಕೈಚೀಲಗಳನ್ನು ಹೊಲಿದು ಕೊಡುವಂತೆ ಕೋರಿದರು. ಆ ಚೀಲಗಳನ್ನು ರೋಟರಿ ಕ್ಲಬ್ ಖರೀದಿಸಿ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಆಚರಿಸಲು ಪ್ರೇರೇಪಿಸಲು ಉಚಿತವಾಗಿ ವಿತರಿಸಲಿದೆ ಎಂದು ತಿಳಿಸಿದರು.

    ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ರೋಟರಿಕ್ಲಬ್ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಒದಗಿಸಿಕೊಡಲು ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

    ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉದಯಭಾನು ಕಲಾಸಂಘದ ಅಧ್ಯಕ್ಷ ರಾಮೇಗೌಡರು ಮಾತನಾಡಿ, ಕೌಶಲ್ಯಾಭಿವೃದ್ಧಿ ತರಗತಿಗಳು ಜೀವನೋಪಾಯದ ಮಾರ್ಗಗಳನ್ನು ರೂಪಿಸಲಿದ್ದು, ಸಂಘವು ನೀಡುವ ತರಬೇತಿಯನ್ನು ಪಡೆದು ಜೀವನದಲ್ಲಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

    ಐದನೇ ತಂಡದ ಹೊಲಿಗೆ ಮತ್ತು ಕಸೂತಿ ತರಬೇತಿ ತರಗತಿಗಳು ಆರಂಭವಾಗಿದ್ದು, ಮುಂದಿನ ಆರು ತಿಂಗಳ ಕಾಲ ನಡೆಯಲಿರುವ ತರಬೇತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು 9844192952 ಈ ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು. . ಸಮಾರೋಪ ಕಾರ್ಯಕ್ರಮದಲ್ಲಿ ರೋಟರಿ ಲೋಕನಾಥ್, ಅಧ್ಯಕ್ಷರಾದ ರಾಮೇಗೌಡ, ಗೌ.ಕಾರ್ಯದರ್ಶಿ ಕೆ.ವಿ.ರಾಧಾಕೃಷ್ಣ, ಸದಸ್ಯರಾದ ಸುಗುಣ ಚಂದ್ರ, ಟಿ. ಶ್ರೀನಿವಾಸ, ಎಲ್.ವೆಂಕಟಪ್ಪ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts