More

    ಸ್ವದೇಶಿ ಮೇಳ ಸ್ವಾಭಿಮಾನದ ಸಂಕೇತ; ಶ್ರೀ ಶಿವರುದ್ರ ಸ್ವಾಮೀಜಿ ಅಭಿಮತ

    ಬೆಂಗಳೂರು : ಸ್ವದೇಶಿ ಮೇಳ ಸ್ವಾಭಿಮಾನದ ಸಂಕೇತವಾಗಿದ್ದು, ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಭಾರತದ ಅಂತಃಸತ್ವವನ್ನು ಜಾಗೃತಗೊಳಿಸುವ ಕೆಲಸ ಸ್ವದೇಶಿ ಜಾಗರಣ ಮಂಚ್ ಸಾಧ್ಯವಾಗಿದೆ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ನಾಲ್ಕು ದಿನಗಳ ಸ್ವದೇಶಿ ಮೇಳದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಭಾರತ ಸಂಸ್ಕಾರವನ್ನು, ಯೋಜನೆ, ಯೋಚನೆಯನ್ನು ಜಗತ್ತಿಗೆ ಕಲಿಸಿಕೊಟ್ಟ ರಾಷ್ಟ್ರ. ಆದರೆ ವ್ಯಾಪಾರದ ಹೆಸರಲ್ಲಿ ಈ ನಾಡಿಗೆ ಆಗಮಿಸಿದ ಪಾಶ್ಚಾತ್ಯರು ಇಲ್ಲಿನ ಸಂಸ್ಕೃತಿಗೆ ಧಕ್ಕೆ ತಂದರು. ಇಲ್ಲಿನ ಸ್ವಾಭಿಮಾನದ ಆಧಾರವಾಗಿದ್ದ ಕರಕುಶಲ ವ್ಯಾಪಾರವನ್ನು ಧ್ವಂಸಗೊಳಿಸಿದರು. ಅದನ್ನೇ ನಂಬಿಕೊಂಡು ಆದಂತಹ ಅವಾಂತರಗಳಿಂದ ಹೊರಗೆ ಬರಬೇಕು. ರಾಷ್ಟ್ರ ಮುಖ್ಯ ಎನ್ನುವ ಭಾವ ನಮ್ಮಲ್ಲಿ ಜಾಗೃತವಾಗಬೇಕು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಆಂದೋಲನದ ಮೂಲಕ ಮೂಡಿದ ರಾಷ್ಟ್ರಭಾವದ ಜಾಗರಣ ಸ್ವಾತಂತ್ರ್ಯದ ನಂತರದಲ್ಲಿ ಮತ್ತೆ ಹಿನ್ನೆಲೆಗೆ ಸರಿದಿತ್ತು. ಆದರೆ ಪ್ರಸ್ತುತ ನಾವು ಯಾರ ಗುಲಾಮರೂ ಅಲ್ಲ ಎನ್ನುವ ನಾಯಕತ್ವ ಬಂದ ಪರಿಣಾಮವಾಗಿ ಭಾರತದ ಕರ್ತೃತ್ವ ಶಕ್ತಿಯ ಪರಿಚಯವನ್ನು ಜಗತ್ತಿಗೆ ಮತ್ತೊಮ್ಮೆ ಮಾಡಿಕೊಡುತ್ತಿದೆ. ಆತ್ಮ ನಿರ್ಭರ ಭಾರತದ ಸಂಕಲ್ಪ ಶಕ್ತಿ ಜಗತ್ತನ್ನು ವ್ಯಾಪಿಸುತ್ತಿದೆ ಎಂದು ಶ್ರೀಗಳು ವಿವರಿಸಿದರು.

    ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ ಸಹ ಸಂಯೋಜಕ ಅಶ್ವಿನ್ ಮಹಾಜನ್ ಶಾಸಕ ಸಿ ಕೆ ರಾಮಮೂರ್ತಿ, ಸಂಯೋಜಕ ಅಶ್ವತ್ಥ್ ನಾರಾಯಣ ಟಿ.ಎಸ್.ಸಂಘಟಕ ಅಮಿತ್ ಅಮರನಾಥ್ ಉಪಸ್ಥಿತರಿದ್ದರು. ಫೆ.7 ರಿಂದ 11 ರ ವರೆಗೆ ನಡೆದ ಸ್ವದೇಶಿ ಮೇಳಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು.

    ಸ್ವದೇಶಿ ಉದ್ಯಮಗಳಿಗೆ ಬ್ರ್ಯಾಂಡಿಗ್ ಅಗತ್ಯ : ಸ್ವಭಾಷಾ, ಸ್ವಭೂಷಾ, ಸ್ವದೇಶಿ, ಸ್ವಧರ್ಮ ವಿದ್ದಾಗ ಮಾತ್ರ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ತಿಲಕರು, ಅರವಿಂದರಾದಿಯಾಗಿ ಅನೇಕ ಹಿರಿಯರು ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ವಿವಿಧತೆಯಿಂದ ಕೂಡಿದ ಸಂಸ್ಕೃತಿ ನಮ್ಮದು. ಇಲ್ಲಿನ ಸಾಂಸ್ಕೃತಿಕ ನೆಲಗಟ್ಟಿನಲ್ಲಿ ನಿರ್ಮಾಣವಾದ ಉದ್ಯಮಗಳಿಗೆ ಬ್ರ್ಯಾಂಡಿಂಗ್ ನೀಡುವ ಅವಶ್ಯಕತೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts