More

    ಬೆಂಗಳೂರಿನ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ‘ಛಾತ್ರ ವಿಶ್ವಕರ್ಮ’ ಪ್ರಶಸ್ತಿ

    ಬೆಂಗಳೂರು/ನವದೆಹಲಿ: ರಾಜ್ಯದ ನಾಲ್ವರು ಪ್ರತಿಭಾನ್ವಿತ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯಕವಾದ ಎಲೆಕ್ಟ್ರೊ-ಮೆಕಾನಿಕಲ್​ ರೋಬೋಟ್​ ಒಂದನ್ನು ರೂಪಿಸಿ, ರಾಷ್ಟ್ರ ಮಟ್ಟದ ‘ಛಾತ್ರ ವಿಶ್ವಕರ್ಮ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ‘ಫೀನೋಮ್ಸ್​’ ತಂಡ ಈ ಸಾಧನೆ ಮೆರೆದಿದ್ದು, ಎಐಸಿಟಿಯು ನಡೆಸಿದ ಅಖಿಲ ಭಾರತ ಸ್ಪರ್ಧೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಥೀಮ್​ನಡಿ ಮೊದಲ ರಾಂಕ್​ ಪಡೆದಿದೆ.

    ಸಾಯಿರಾಂ ಕಾಲೇಜಿನ ಉಪನ್ಯಾಸಕ ಡಾ. ಪ್ರಭಾಕರನ್​ ಟಿ.ಎನ್​. ಅವರ ಮಾರ್ಗದರ್ಶನದಲ್ಲಿ ಇಂಜಿನಿಯರಿಂಗ್​ ವಿದ್ಯಾರ್ಥಿಗಳಾದ ಅಭಿಲಾಷ್​​ ಎಸ್., ಸೈಯದ್​ ಅಪ್ಸಾನಾ ಎ., ಸ್ವಾತಿ ಎಸ್.​ ಮತ್ತು ಸ್ವಾತಿ ಬಾಲನ್​ ಅವರ ತಂಡ, ‘ಮೆಡಿಕಲ್​ ಅಸಿಸ್ಟೆನ್ಸ್​ ಡ್ರಾಯ್ಡ್​’ ತಯಾರಿಸುವ ಪ್ರಾಜೆಕ್ಟನ್ನು ಕೈಗೊಂಡಿತ್ತು. ಸೆರೆಬ್ರಲ್ ಪಾಲ್ಸಿ ರೋಗಿಗಳು ಮತ್ತು ಬುದ್ಧಿಮಾಂದ್ಯತೆ ಹೊಂದಿದವರಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸಹಾಯಕವಾಗುವ ಡ್ರಾಯ್ಡ್​ ಇದಾಗಿದೆ.

    ಇದನ್ನೂ ಓದಿ: ಮತ್ತೆ ದೆಹಲಿ ಕಡೆಗೆ ಸಿಎಂ ಬಸವರಾಜ ಬೊಮ್ಮಾಯಿ!

    ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ಎಐಸಿಟಿಯು, ಭಾನುವಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಜ್ಯದ ಈ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. 50 ಸಾವಿರ ರೂ.ಗಳ ನಗದು ಬಹುಮಾನವನ್ನೊಳಗೊಂಡ ಪ್ರತಿಷ್ಠಿತ ‘ಛಾತ್ರ ವಿಶ್ವಕರ್ಮ ಅವಾರ್ಡ್​ 2020’ಅನ್ನು ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಪ್ರದಾನಿಸಿದರು.

    ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​.ಅಶ್ವತ್ಥನಾರಾಯಣ ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ. “ಮೆಡಿಕಲ್​ ಡ್ರಾಯ್ಡ್​ಅನ್ನು ನಿರ್ಮಿಸುವುದು ಸುಲಭವಲ್ಲ. ಕರ್ನಾಟಕದ ಶ್ರೀ ಸಾಯಿರಾಂ ಕಾಲೇಜಿನ ತಂಡ ಈ ಸಾಧನೆ ಮಾಡಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ 2022 ಹಾಲ್​ ಆಫ್​ ಫೇಮ್​ ಸೇರಿದ BTS

    ಕಿಮ್​ ಶರ್ಮ – ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts