More

    ‘ಲೈಕ್​-ಶೇರ್​ ಮಾಡಿ, ದುಡ್ಡು ಕೊಡ್ತೀವಿ’ ಎಂದು ಮೋಸ ಮಾಡ್ತಾರೆ! ಕೆಲಸವಿಲ್ಲದ ಮಹಿಳೆಯರೇ ಇವರ ಟಾರ್ಗೆಟ್​!

    ಬೆಂಗಳೂರು: ಕರೊನಾ ಲಾಕ್​ಡೌನ್​ನಲ್ಲಿ ನೌಕರಿ ಕಳೆದುಕೊಂಡುವರನ್ನೇ ಟಾರ್ಗೆಟ್​ ಮಾಡಿ ಸೈಬರ್​ ವಂಚಕರು, ವಂಚನೆಗೆ ಇಳಿದಿದ್ದಾರೆ. ವಿಡಿಯೋ, ಫೋಟೋ ಲೈಕ್​, ಶೇರ್​ ಮಾಡಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿ ನೂರಾರು ಮಂದಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಹೊಸಕೆರೆಹಳ್ಳಿಯ ಕೆ.ಪಿ.ವೀಣಾ (42) ವಂಚನೆಗೆ ಒಳಗಾದವರು. ವೀಣಾ ಎಂಬಾಕೆ ಸ್ನೇಹಿತೆ “ಟಿಟಿ ಆ್ಯಡ್​ ಆ್ಯಪ್​ನ್ನು ಮೊಬೈಲ್​ಗೆ ಲಿಂಕ್​ ಕಳುಹಿಸಿ ಇದನ್ನು ಡೌನ್​ಲೋಡ್​ ಮಾಡಿಕೊಂಡು 3 ಸಾವಿರ ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಆನಂತರ ಅದರಲ್ಲಿ ಬರುವ ವಿಡಿಯೋವನ್ನು ಲೈಕ್​ ಮಾಡಿ ಸ್ಕ್ರೀನ್​ ಶಾಟ್​ ತೆಗೆದು ವಾಪಸ್​ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದರೆ 1 ಲೈಕ್​ಗೆ 2 ರೂ. ನೀಡಲಾಗುತ್ತದೆ. ಹೆಚ್ಚು ಹೆಚ್ಚು ಮಾಡಿದರೆ ಕೈತುಂಬ ಹಣ ಸಂಪಾದನೆ ಮಾಡಬಹುದು” ಎಂದು ಹೇಳಿದ್ದರು. ಇದನ್ನು ನಂಬಿದ ವೀಣಾ, ಟಿಟಿ ಆ್ಯಡ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ವಾಲೆಟ್​ನಲ್ಲಿ 3 ಸಾವಿರ ರೂ. ಪಾವತಿ ಮಾಡಿ ನೋಂದಣಿ ಮಾಡಿಕೊಂಡಿದ್ದರು.

    ವಾಟ್ಸ್​ಆ್ಯಪ್​ ಗ್ರೂಪ್​ಗೆ ವೀಣಾ ಸ್ಕ್ರೀನ್​ಶಾಟ್​ಗಳನ್ನು ಕಳುಹಿಸಿದ್ದರು. ಅದಾದ ನಂತರ ಹೆಚ್ಚು ಹೆಚ್ಚು ವಿಡಿಯೋ ಖರೀದಿಸಿದರೆ ಹೆಚ್ಚು ಹಣ ಬರಲಿದೆ ಎಂದು ಆಮಿಷವೊಡ್ಡಲಾಗಿದೆ. ಅದಕ್ಕಾಗಿ ವೀಣಾ, ಮತ್ತೆ 36,900 ರೂ. ಪಾವತಿ ಮಾಡಿದ್ದರು. ಇದಾದ ಮೇಲೆ ವೀಣಾ ನಂಬರ್​ನ್ನು ಕದೀಮರು ಬ್ಲಾಕ್​ ಮಾಡಿ ಸಂಪರ್ಕ ಕಡಿತ ಮಾಡಿದ್ದರು. ನೊಂದ, ವೀಣಾ ತನ್ನ ಸ್ನೇಹಿತೆಗೆ ಪ್ರಶ್ನಿಸಿದಾಗ ಅವರಿಗೂ ವಂಚನೆ ಮಾಡಿರುವುದು ಗೊತ್ತಾಗಿ ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಣ ವಿಭಾಗ ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಯೋಧ್ಯೆಯ ಮಸೀದಿಗೆ ಸ್ವಾತಂತ್ರ್ಯ ಹೋರಾಟಗಾರನ ಹೆಸರು

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts