More

    ಬಿಬಿಎಂಪಿ ಕಚೇರಿ ಮುಂದೆ ಸೀಮೆಎಣ್ಣೆ ಕ್ಯಾನ್​ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ ಕಾರ್ಪೋರೇಟರ್!​

    ಬೆಂಗಳೂರು: ಆರ್​.ಆರ್. ನಗರದ ಬಿಬಿಎಂಪಿ ಜೆಸಿ ಕಚೇರಿ ಬಳಿಗೆ ಸೀಮೆಎಣ್ಣೆ ಕ್ಯಾನ್ ಸಮೇತ ಬಂದ ಯಶವಂತಪುರ ಕಾರ್ಪೋರೇಟರ್ ಜಿ.ಕೆ. ವೆಂಕಟೇಶ್, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಕೋವಿಡ್ ನಿರ್ವಹಣೆಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಕಾರ್ಪೋರೇಟರ್ ವೆಂಕಟೇಶ್, ನಮ್ಮ ವಾರ್ಡಿನಲ್ಲಿ 72 ಮಂದಿಗೆ ಕರೊನಾ ಸೋಂಕು ಬಂದಿದೆ. ಈಗಾಗಲೇ 5 ಜನರು ಸೋಂಕಿಗೆ ಬಲಿಯಾಗಿದ್ದಾರೆ. ನಮ್ಮ ಬಳಿ ಪರಿಸ್ಥಿತಿ ನಿರ್ವಹಿಸಲು ಅಗತ್ಯ ಡಾಕ್ಟರ್ಸ್, ನರ್ಸ್ ಇಲ್ಲ. ಕೇವಲ ಒಬ್ಬರು ಡಾಕ್ಟರ್ ಮತ್ತು ಓರ್ವ ನರ್ಸ್ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ಕರೊನಾ ನಿಯಂತ್ರಿಸೋದು ಹೇಗೆ? ಎಂದು ಏರುಧ್ವನಿಯಲ್ಲೇ ಅಸಮಾಧಾನ ಹೊರ ಹಾಕಿದರು. ಸ

    ಇದನ್ನೂ ಓದಿರಿ 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ನಮ್ಮ ವಾರ್ಡಿಗೆ ಅಗತ್ಯ ಪಿಪಿಇ ಕಿಟ್, ಅಡಿಷನಲ್ ಡಾಕ್ಟರ್ಸ್, ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸ್ ಕೊಡಬೇಕು ಎಂದು ಆಗ್ರಹಿಸಿದ ಕಾರ್ಪೋರೇಟರ್​, ಸರ್ಕಾರ ಕೊಡೋ ಸೌಲಭ್ಯವನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಿ. ನಿಮ್ಮ ಬೇಜವಾಬ್ದಾರಿಯಿಂದಾಗಿ ನಾನ್ಯಾಕೆ ನಾಲಾಯಕ್ ಕಾರ್ಪೋರೇಟ್​ ಅನ್ನಿಸಿಕೊಳ್ಳಬೇಕು. ನೀವೇನಾದ್ರೂ ಸರಿಯಾಗಿ ಸೌಲಭ್ಯ ಕೊಡದಿದ್ದರೆ ಇಲ್ಲೇ ದೇಹತ್ಯಾಗ ಮಾಡ್ತೀನಿ ಎನ್ನುತ್ತ ಕಚೇರಿ ಬಳಿ ಸೀಮೆಎಣ್ಣೆ ತುಂಬಿದ್ದ ಕ್ಯಾನ್​ ಹಿಡಿದು ಪ್ರತಿಭಟನೆಗೆ ಮುಂದಾದರು. ಕೂಡಲೇ ಎಚ್ಚೆತ್ತ ಬಿಬಿಎಂಪಿ ಆರ್.ಆರ್. ನಗರ ವಲಯದ ಜೆಸಿ ಜಗದೀಶ್, ‘ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ, ಫುಡ್ ಕಿಟ್ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

    ಭರವಸೆ ಬಳಿಕ ಪ್ರತಿಭಟನೆ ಕೈಬಿಟ್ಟ ವೆಂಕಟೇಶ್, ‘ವೈದ್ಯ ಸಿಬ್ಬಂದಿ ಮತ್ತು ರೇಷನ್ ಕಿಟ್ ಕೊಟ್ಟಿಲ್ಲ ಅಂದ್ರೆ ಮತ್ತೆ ಜೆಸಿ ಕಚೇರಿ ಬಳಿಗೆ ಬರುವೆ. ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಬೆದರಿಕೆ ಹಾಕಿದ ಪ್ರಸಂಗ ಇಂದು(ಶುಕ್ರವಾರ) ಮಧ್ಯಾಹ್ನ ಸಂಭವಿಸಿದೆ.

    ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts