More

    ರೈಲು ಟಿಕೆಟ್​ಗಳಿಗೆ ನಕಲಿ ದಾಖಲೆ ನೀಡಿ ವಂಚನೆ; ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ

    ಬೆಂಗಳೂರು: ರೈಲು ಟಿಕೆಟ್​ಗಳಿಗೆ ನಕಲಿ ದಾಖಲೆ ನೀಡಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದ್ದು ಈ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

    ಬಂಧಿತನ ಬಳಿ ಇದ್ದ ದಾಖಲೆಗಳು ಮತ್ತು ಸಂಪರ್ಕ ಮಾಹಿತಿ ಕಂಡು ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗುಲಾಮ ಮುಸ್ತಾಪ್ ಬಂಧಿತ ಆರೋಪಿ.

    ರಾಜಗೋಪಾಲನಗರದ ಮಸೀದಿಯೊಂದರಲ್ಲಿ ಇದ್ದುಕೊಂಡು ಕೃತ್ಯ ನಡೆಸುತ್ತಿದ್ದ. ನಕಲಿ ಎಎನ್​ಎಂಎಸ್ ಸಾಫ್ಟ್‌ವೇರ್ ಡೆವಲಪ್ ಮಾಡಿಕೊಂಡಿದ್ದ ಆರೋಪಿ, ಆ ಮೂಲಕ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ನಕಲಿ ಐಡಿ ಸೃಷ್ಟಿ ಮಾಡಿಕೊಂಡಿದ್ದ.

    ಇ-ಟಿಕೆಟ್ ಬುಕ್ ಮಾಡಿಕೊಡುವ ನೆಪದಲ್ಲಿ ನಕಲಿ ಐಡಿ ಸೃಷ್ಟಿಸಿಕೊಂಡು, ರೈಲ್ವೆ ಇಲಾಖೆಯ ಕೆಲ ಮಾಹಿತಿ ಸಂಗ್ರಹಿಸಿದ್ದ. ಇದೇ ವೇಳೆ ಹಲವು ನಕಲಿ ದಾಖಲೆಯುಳ್ಳ ಟಿಕೆಟ್ ಮಾರಾಟ ಮಾಡಿದ್ದ ಬಗ್ಗೆ ಪತ್ತೆಯಾಗಿದೆ. 2018ರಿಂದಲೂ ಇಲ್ಲಿಯವರೆಗೂ ಕೃತ್ಯ ನಡೆಸಿದ್ದಾನೆ.

    ಈ ಬಗ್ಗೆ ತನಿಖೆ ಕೈಗೊಂಡಿದ್ದ ರೈಲ್ವೆ ಪೊಲೀಸರು, ಆರೋಪಿಯನ್ನು ಜನವರಿ 8ರಂದು ಬಂಧಿಸಿದ್ದರು. ಬಳಿಕ ಆತನ ಬಳಿ ಇದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts