More

    ದಂಡು ಮಂಡಳಿ ಪ್ರದೇಶ ಅಭಿವೃದ್ಧಿಗೆ ಬದ್ಧ

    ಬೆಳಗಾವಿ: ನಗರದಲ್ಲಿರುವ ದಂಡು ಮಂಡಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದ್ದಾರೆ.

    ನಗರದ ದಂಡು ಮಂಡಳಿ ಸಭಾಂಗಣದಲ್ಲಿ ಗುರುವಾರ ನಡೆದ ಮಂಡಳಿ ಸಭೆಯಲ್ಲಿ ಅವರು ಮಾತನಾಡಿ, ಅನುದಾನ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವೆ ಎಂದು ಕಡಾಡಿ ತಿಳಿಸಿದರು.

    ರಕ್ಷಣಾ ಸಚಿವಾಲಯದ ನಿಯಮದ ಪ್ರಕಾರವೇ ದಂಡು ಮಂಡಳಿ ಪ್ರದೇಶಗಳಲ್ಲಿರುವ ಮನೆಗಳ ನವೀಕರಣಕ್ಕೆ ಅನುಮತಿ ನೀಡಬೇಕು. ಅಲ್ಲದೆ, ಗುತ್ತಿಗೆ ಅವಧಿ ಮುಗಿದಿರುವ ಅಂಗಡಿಗಳು, ಕಟ್ಟಡಗಳನ್ನು ಹೆಚ್ಚಿನ ಬಾಡಿಗೆ ದರದಲ್ಲಿ ಗುತ್ತಿಗೆ ನೀಡಬೇಕು. ಆದಾಯ ವೃದ್ಧಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು.

    ಮಂಡಳಿಯ ಸದಸ್ಯರು ಮಾತನಾಡಿ, ನಾವೆಲ್ಲಾ ಸಂಸದ ಹಾಗೂ ಶಾಸಕರ ಆಯ್ಕೆಗೆ ಮತ ಹಾಕುತ್ತೇವೆ. ಆದರೆ, ಅನುದಾನ ಮಾತ್ರ ನೀಡುವುದಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಹಾಗಾಗಿ ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸಬೇಕು. ಮಳೆಯಿಂದಾಗಿ ಹಾನಿಗೊಂಡ ಮನೆಗಳ ಮರು ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಬೀದಿ ದೀಪಗಳೂ ಇಲ್ಲಿಲ್ಲ ಎಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿಕೊಂಡರು.

    ದಂಡು ಮಂಡಳಿ ಅಧ್ಯಕ್ಷ ಹಾಗೂ ಬ್ರಿಗೇಡಿಯರ್ ರೋಹಿತ್ ಚೌಧರಿ ಮಾತನಾಡಿ, ಮಳೆಯಿಂದ ಮನೆಗಳು ಬಿದ್ದಿದ್ದರೆ ಅಂಥಯವರು ಅರ್ಜಿ ಸಲ್ಲಿಸಿದರೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

    ಮಂಡಳಿಯ ಸದಸ್ಯರಾದ ಸದಸ್ಯ ನಿರಂಜನ ಅಷ್ಟೇಕರ್, ದಂಡುಮಂಡಳಿ ಸಿಇಒ ಬರ್ಚಸ್ವಾ, ವಿಕ್ರಂ ಪುರೋಹಿತ್, ರಿವಾನ್ ಬೇಪಾರಿ, ಅರ್ಬಿಯಾ ಧಾರವಾಡಕರ್, ಅಲ್ಲಾವುದ್ದೀನ್ ಕಿಲ್ಲೇದಾರ್, ಕರ್ನಲ್ ಡಾ.ಪದ್ಮಿನಿ, ಕರ್ನಲ್ ಚೇತನ್, ಲೆಫ್ಟಿನೆಂಟ್ ಕರ್ನಲ್ ಸಿಬೇ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts