ಬಣವಿಕಲ್ಲಿನಲ್ಲಿ ಸೇಬು ತುಂಬಿದ್ದ ಲಾರಿ ಪಲ್ಟಿ

ಕಾನಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದ ಬಳಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಸೇಬು ತುಂಬಿದ ಲಾರಿ ಪಲ್ಟಿಯಾಗಿದ್ದು, ಹಣ್ಣುಗಳಿಗಾಗಿ ಜನ ಮುಗಿಬಿದ್ದಿದ್ದರು.

ಜಮ್ಮು ಕಾಶ್ಮೀರದ ಶ್ರೀನಗರದಿಂದ ಕೇರಳದ ಕೊಚ್ಚಿನ್‌ಗೆ ಹೊರಟ್ಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಚಾಲಕ ಸೇರಿ ಲಾರಿಯಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಲಾರಿ ಬೀಳುತ್ತಿದ್ದಂತೆ ಸೇಬು ಹೊತ್ತೊಯ್ಯಲು ಜನತೆ ಮುಗಿಬಿದ್ದರು. ನೆಲಬೊಮ್ಮನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ, ಸೂಲದಹಳ್ಳಿ, ಬಣವಿಕಲ್ಲು, ಎಂ.ಬಿ.ಅಯ್ಯನಹಳ್ಳಿ ಸೇರಿದಂತೆ ಸುತ್ತಲಿನ ಸಾವಿರಾರು ಜನರು ಜಮಾಯಿಸಿದರು.

ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಕಾನಹೊಸಹಳ್ಳಿ ಪೊಲೀಸರು ಧಾವಿಸಿ ಜನರನ್ನು ನಿಯಂತ್ರಿಸಿದರು. ಪಿಎಸ್‌ಐ ಎರಿಯಪ್ಪ ಅಂಗಡಿ, ಎಎಸ್‌ಐ ಚಂದ್ರಶೇಖರ್.ಕೆ, ಸಿಬ್ಬಂದಿ ಜಗದೀಶ್, ಪ್ರಭಾಕರ್, ರವಿಗೌಡ, ಕಲ್ಲೇಶ್, ಸಿದ್ದಲಿಂಗಪ್ಪ, ತಿಪ್ಪೇರುದ್ರಪ್ಪ, ಹೊನ್ನೂರಪ್ಪ ಇತರರಿದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…