More

    ನಮ್​ ಜನ ವಿದೇಶಗಳಿಗೆ ನಾಲ್ಕೇ ದಿನದಲ್ಲಿ ಹೋಗಿ ಬರುವಂತೆ ಮಾಡುವಾಸೆ: ಜನಾರ್ದನ ರೆಡ್ಡಿ

    ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹುಟ್ಟುಹಬ್ಬದ ದಿನವೇ ಮರು ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ನಿನ್ನೆಯಷ್ಟೇ ರೆಡ್ಡಿ ಅವರು 55ನೇ ವಸತಂಕ್ಕೆ ಕಾಲಿಟ್ಟಿದ್ದು, ಇನ್ಮುಂದೆ ರಾಜಕೀಯದಲ್ಲಿ ಮತ್ತೆ ಸಕ್ರೀಯರಾಗುವುದಾಗಿ ತಿಳಿಸಿದ್ದಾರೆ.

    ಬಿಜೆಪಿಗೆ ಬಳ್ಳಾರಿ ಮೇಲೆ ಋಣ ಇದೆ ಎನ್ನುವ ಮೂಲಕವೇ ಬಿಜೆಪಿಗೆ ಟಾಂಗ್​ ಕೊಟ್ಟ ರೆಡ್ಡಿ, ಹತ್ತು ವರ್ಷದಲ್ಲಿ ಆಗದ ಕೆಲಸಗಳನ್ನ ಒಂದೇ ವರ್ಷದಲ್ಲಿ ಮಾಡುವ ಉತ್ಸಾಹ ಬಂದಿದೆ ಎನ್ನುವ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗುವ ಸುಳಿವು ನೀಡಿದ್ದಾರೆ.

    ಬಿಜೆಪಿಗೆ ಬಳ್ಳಾರಿ ಋಣ ತೀರಿಸಿಕೊಳ್ಳುವ ಅವಶ್ಯಕತೆ ಇದೆ. ಬಳ್ಳಾರಿಯ ಬೀದಿ ಬೀದಿಯಲ್ಲಿ ಮುಖ್ಯಮಂತ್ರಿ, ಸಚಿವರು ಓಡಾಡಿ ಕೆಲಸ ಮಾಡಬೇಕು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಬರಲಿಕ್ಕೆ ಬಳ್ಳಾರಿ ಕಾರಣ ಎಂದು ಹೇಳಿದರು,

    ರಾಜಕೀಯ ಕುತಂತ್ರದಿಂದ ಬಳ್ಳಾರಿಯಿಂದ ನನ್ನನ್ನು ದೂರ ಇಟ್ಟಿದ್ರು. ಈಗ ದೇವರ ಆಶೀರ್ವಾದಿಂದ‌ ಮತ್ತೆ ಬಂದಿದ್ದೇನೆ. ದೇವರು ನನಗೆ 110 ವರ್ಷ ಆಯಸ್ಸು ಕೊಟ್ಟು ಬಳ್ಳಾರಿಯಲ್ಲಿ ಇನ್ನೂ ಹತ್ತು ವರ್ಷ ಅವಕಾಶ ಕೊಡಲಿದ್ದಾನೆ. ಬಳ್ಳಾರಿಯಿಂದ ನಮ್ಮ ಜನ ಇಂಗ್ಲೆಂಡ್ ಸೇರಿ ವಿವಿಧ ದೇಶಗಳಿಗೆ ನಾಲ್ಕೇ ದಿನದಲ್ಲಿ ಹೋಗಿ ಬರುವಂತೆ ಮಾಡುವ ಆಸೆ ನನಗಿದೆ ಎಂದರು.

    ಬೆಂಗಳೂರಿನ ನಂತರ ಬಳ್ಳಾರಿಯನ್ನೇ ನಮ್ಮ ರಾಜ್ಯದ ಮಹಾನಗರ ಮಾಡುವೆ. ನನ್ನ ಕನಸಿನ ಕೆಲಸಗಳು ಅರ್ಧಂಬರ್ಧ ಕೆಲಸಗಳಾಗಿವೆ, ಒಂದೂವರೆ ವರ್ಷ ಬಿಜೆಪಿ ಸರ್ಕಾರ ಇರಲಿದೆ ಎಲ್ಲವನ್ನೂ ಮಾಡಿಸುವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ನೀವು ಯಾವಾಗಲೂ ನಮ್ಮ ಚಾಂಪಿಯನ್​: ಸೈನಾ ನೆಹ್ವಾಲ್​ ಎದುರು ಮಂಡಿಯೂರಿದ ನಟ ಸಿದ್ಧಾರ್ಥ್!​

    ಆರ್​ಆರ್​ಆರ್​​ನಲ್ಲಿ ಆಲಿಯಾ ಭಟ್​; 5 ನಿಮಿಷಕ್ಕೆ 9 ಕೋಟಿ ರೂಪಾಯಿ..

    ಯಶಸ್ವಿ ನಡಿಗೆ ರಾಮನಗರದತ್ತ ಮುಂದಡಿ: ಮೇಕೆದಾಟು ಪಾದಯಾತ್ರೆಗೆ ಮೂರನೇ ದಿನವೂ ಭಾರಿ ಜನಬೆಂಬಲ, ಕಲಾತಂಡಗಳ ಮೆರುಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts