More

    ಕಾಂಗ್ರೆಸ್ ಮುಕ್ತ ಗ್ರಾಪಂ ಗುರಿ: ಬಳ್ಳಾರಿಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿಕೆ

    ಬಳ್ಳಾರಿ: ಗ್ರಾಪಂಗಳನ್ನು ಕಾಂಗ್ರೆಸ್ ಮುಕ್ತ ಮಾಡುವುದು ನಮ್ಮ ಗುರಿಯಾಗಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಪಂದಿಂದ ಲೋಕಸಭೆವರೆಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

    ನಗರದಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು. ನಾವು ಸ್ಪರ್ಧಿಸಿದಾಗ ಕಾರ್ಯಕರ್ತರೆಲ್ಲ ತಾವೇ ಕಣದಲ್ಲಿದ್ದೀವೆಂದು ಹೋರಾಟ ನಡೆಸಿ ನಮ್ಮನ್ನು ಗೆಲ್ಲಿಸುತ್ತೀರಿ. ಗ್ರಾಪಂ ಚುನಾವಣೆಯಲ್ಲಿ ನೀವು ನಾಯಕರಾದರೆ, ನಾವು ಕಾರ್ಯಕರ್ತರಾಗಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದರು.

    ಉಪ ಮುಖ್ಯಮಂತ್ರಿ ಲಕ್ಷ ್ಮಣ ಸವದಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಬೆವರು ಹರಿಸಿದ್ದರಿಂದ ನಾವು ವೇದಿಕೆ ಮೇಲೆ ಕುಳಿತಿದ್ದೇವೆ. ನಮಗಾಗಿ ಕಾರ್ಯಕರ್ತರು ದುಡಿದ ಋಣವನ್ನು ತೀರಿಸಲು ಸಾಧ್ಯವ್ಲಿ. ಆದರೆ, ಗ್ರಾಪಂ ಚುನಾವಣೆ ಮೂಲಕ ಸ್ವಲ್ಪ ಋಣ ಕಡಿಮೆ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಸಾಮಾಜಿಕ ನ್ಯಾಯವೂ ಇದೆ. ಪಕ್ಷದ ಕಾರ್ಯಕರ್ತರೇ ನಮ್ಮ ಬಂಡವಾಳ ಹಾಗೂ ಆಸ್ತಿ ಎಂದು ಹೇಳಿದರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾತನಾಡಿ, ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ ಎಂದರು.

    ತಂಡದ ಸದಸ್ಯರು ಗೈರು
    ಸಮಾವೇಶಕ್ಕೆ ವಿವಿಧ ಮಂಡಲಗಳಿಂದ ಎಷ್ಟು ಕಾರ್ಯಕರ್ತರು ಬಂದಿದ್ದಾರೆ ಎಂಬುದರ ಲೆಕ್ಕ ಪಡೆಯಲಾತು. ಆದರೆ, ಗ್ರಾಮ ಸ್ವರಾಜ್ ಯಾತ್ರೆಯ ತಂಡದ ಸದಸ್ಯರಾದ, ಸಂಸದರಾದ ಪ್ರತಾಪ ಸಿಂಹ, ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜ ಹವಾಲ್ದಾರ ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts