More

    ಬಾಲರಾಮ ಪ್ರಾಣಪ್ರತಿಷ್ಠೆಯಂದೇ ಮಕ್ಕಳ ಜನನ ಕುಟುಂಬಗಳಲ್ಲಿ ಸಂಭ್ರಮ

    • ಮಕ್ಕಳಿಗೆ ರಾಮ,ಸೀತೆಯ ಹೆಸರಿಡಲು ನಿರ್ಧಾರ

    ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆ ದಿನದಂದು ದೇಶಾದ್ಯಂತ ಸಹಸ್ರಾರು ಮಕ್ಕಳು ಜನಿಸಿದ್ದು, ಬಹುತೇಕರು ಮನೆಯಲ್ಲಿ ರಾಮ, ಸೀತೆಯೇ ಹುಟ್ಟಿದ್ದಾರೆ ಎಂಬ ಸಂಭ್ರಮದಲ್ಲಿದ್ದಾರೆ.


    ಬೆಂಗಳೂರಿನಲ್ಲಿ (ರಾತ್ರಿ 8ಗಂಟೆವರೆಗೆ) ವಾಣಿವಿಲಾಸ ಆಸ್ಪತ್ರೆಯಲ್ಲಿ 35, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 10, ೋಷ ಆಸ್ಪತ್ರೆಯಲ್ಲಿ 10, ಇತರೆ ಖಾಸಗಿ ಆಸ್ಪತ್ರೆಗಳು ಸೇರಿ ನೂರಾರು ಮಕ್ಕಳು ಜನಿಸಿವೆ.


    ಬಾಲ ರಾಮನ ಪ್ರಾಣಪ್ರತಿಷ್ಠೆಯ ದಿನದಂದೇ ಮಗುವಿಗೆ ಜನ್ಮ ನೀಡಬೇಕು ಎಂದು ಬಹಳಷ್ಟು ಗರ್ಭಿಣಿಯರು ವೈದ್ಯರಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ ದಿನ ತುಂಬದೆ ಅಥವಾ ಅವಧಿಗೂ ಮುನ್ನ ಹೆರಿಗೆ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆ ಎಂಬ ಕಾರಣಕ್ಕೆ ವೈದ್ಯರು ನಿರಾಖರಿಸಿದ್ದಾರೆ. ಈ ಮೊದಲು ನೀಡಿದ್ದ ಗಡುವಿನಂತೆಯೇ ಹೆರಿಗೆ ಮಾಡಿಸಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.


    ಆದರೆ ಗರ್ಭಿಣಿಯರು ಹಾಗೂ ಕುಟುಂಬಸ್ಥರ ಒತ್ತಾಯದ ಮೇರೆಗೆೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೋಗ್ಯ ಸ್ಥಿತಿ ಆಧರಿಸಿ ಸಿಸೇರಿಯನ್ ಮಾಡಲಾಗಿದೆ. ಆದರೆ ಇಂತಹ ಪ್ರಕರಣಗಳು ತೀರ ಕಡಿಮೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.


    ಈ ವಿಶೇಷ ದಿನದಂದು ಗಂಡು ಮಗು ಜನಿಸಿದರೆ ರಾಮ, ಶ್ರೀರಾಮ, ಜಾನಕಿರಾಮ ಎಂದು ಹೆಸರಿಡಲು ಹಾಗೂ ಹೆಣ್ಣು ಮಗು ಜನಿಸಿದರೆ, ಸೀತೆ, ವೈದೇಹಿ, ಜಾನಕಿ, ಜಾನ್ಹವಿ ಎಂಬಿತ್ಯಾದಿ ಪರ್ಯಾಯ ಹೆಸರುಗಳನ್ನು ಪೋಷಕರು ಆಯ್ಕೆ ಮಾಡಿಕೊಂಡಿದ್ದಾರೆ.

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts