More

    ಬಜೆಟ್‌ನಲ್ಲಿ ದುರಸ್ತಿ ಕಾಮಗಾರಿಗಳಿಗೆ ಆದ್ಯತೆ

    ಮಧುಗಿರಿ: ಉಪವಿಭಾಗದ ಲೋಕೋಪಯೋಗಿ ವಿಭಾಗ ವ್ಯಾಪ್ತಿಯಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 227 ಕೋಟಿ ರೂಪಾಯಿ ವೆಚ್ಚದ 5641 ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
    ಪಟ್ಟಣದ ಶಿರಾ ಗೇಟ್‌ನಲ್ಲಿ 3.55 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಲೋಕೋಪಯೋಗಿ ವಿಭಾಗೀಯ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ವಾತನಾಡಿದರು.

    2020-21ನೇ ಸಾಲಿನ ಬಜೆಟ್‌ನಲ್ಲಿ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ, 750 ಕೋಟಿ ರೂ. ಬಿಡುಗಡೆ ವಾಡಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಕರೊನಾ ಪರಿಣಾಮದಿಂದ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆ ಯಾಗಿದೆ. ಅದಷ್ಟೇ ಅಲ್ಲದೇ ವಲಸೆ ಕಾರ್ಮಿಕರು ಸ್ವಂತ ರಾಜ್ಯಗಳಿಗೆ ಮರಳಿರುವುದರಿಂದ ಕಾರ್ಮಿಕರ
    ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣ ಎಂದರು.

    ಸಂಸದ ಜಿ.ಎಸ್.ಬಸವರಾಜು ವಾತನಾಡಿ, ಸತತ ಬರಗಾಲದಿಂದ ಜಯಮಂಗಲಿ, ಸುವರ್ಣಮುಖಿ ನದಿಗಳು ಬತ್ತಿವೆ. ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಲ್ಲಿ ನಿಗದಿಯಾಗಿರುವ 24 ಟಿಎಂಸಿ ನೀರು ಸಾಕಾಗುವುದಿಲ್ಲ. ಇದರ ಜತೆಗೆ
    ಕುವಾರಧಾರದಿಂದ 8 ಟಿಎಂಸಿ, ಗುರುತ್ವಾಕರ್ಷಣೆಯ ಮೂಲಕ 7 ಟಿಎಂಸಿ ನೀರು ಸೇರಿ ಹೆಚ್ಚುವರಿಯಾಗಿ 15 ಟಿಎಂಸಿ ಬರುವುದರಿಂದ ಸಮಗ್ರ ನೀರಾವರಿಗೆ ಒತ್ತು ನೀಡಿದಂತಾಗುತ್ತದೆ. ಈ ಬಗ್ಗೆ ಸಣ್ಣ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ವಾಧುಸ್ವಾಮಿ ವಾತನಾಡಿ, ಈ ಭಾಗವು ಸತತ ಬರಗಾಲ ಪೀಡಿತ ಪ್ರದೇಶವಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಈ ಭಾಗಕ್ಕೆ ಹೆಚ್ಚಿನ ಪ್ರೀತಿ, ವಿಶ್ವಾಸ ತೋರಲಿ ಎಂದರು.
    ಶಾಸಕ ಎಂ.ವಿ.ವೀರಭದ್ರಯ್ಯ ವಾತನಾಡಿ, ಮಧುಗಿರಿ ಕ್ಷೇತ್ರವು ಸತತ ಬರಗಾಲಕ್ಕೆ ತುತ್ತಾಗಿದೆ. ಇಬ್ಬರೂ ಮಂತ್ರಿಗಳು ಹೆಚ್ಚಿನ ಅನುದಾನ ನೀಡುವಂತೆ ಮನವಿ ವಾಡಿದರು.

    ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಸಿಇಒ ಶುಭಾ ಕಲ್ಯಾಣ್, ಎಂಎಲ್ಸಿ ತಿಪ್ಪೇಸ್ವಾಮಿ, ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಪಿಡಬ್ಲುೃಡಿ ಇಇ ವಿರುಪಾಕ್ಷಪ್ಪ, ಎಇಇ ಹೊನ್ನೇಶಯ್ಯ, ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ, ತಹಸೀಲ್ದಾರ್ ಡಾ. ವಿಶ್ವನಾಥ್, ಇಒ ದೊಡ್ಡಸಿದ್ದಯ್ಯ, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ನರಸಿಂಹಮೂರ್ತಿ, ಜಿಪಂ ಎಇಇ ಸುರೇಶ್‌ರೆಡ್ಡಿ, ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ ಇತರರಿದ್ದರು.

    ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಅವಕಾಶ: ಶಿರಾ/ಬುಕ್ಕಾಪಟ್ಟಣ: ಶಿರಾ ತಾಲೂಕು ರಂಗನಹಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ಸಮುಚ್ಛಯ ಕಟ್ಟಡ ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಎಂ.ಗೋವಿಂದ ಕಾರಜೋಳ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
    20 ಕೋಟಿ ರೂ.ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಯಡಿಯೂರಪ್ಪ ಸರ್ಕಾರದಲ್ಲಿ 135 ವಸತಿ ಶಾಲೆಗಳನ್ನು ಪ್ರಾರಂಭ ವಾಡಿದ್ದು, ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ಗೋವಿಂದ ಕಾರಾಜೋಳ ತಿಳಿಸಿದರು.
    ಡಿಸಿಎಂ ಗೋವಿಂದ ಕಾರಜೋಳ ಜತೆ ಚರ್ಚಿಸಿ ವಸತಿ ಶಾಲೆಗಳಲ್ಲಿ ಕನಿಷ್ಠ ಶೇ.25 ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕೆಂದು ತೀರ್ವಾನಿಸಿ, ಆದೇಶ ಹೊರಡಿಸಲಾಗಿದೆ. ಈ ವರ್ಷದಿಂದಲೇ ನಿಯಮ ಜಾರಿಗೆ ಬರಲಿದೆ ಎಂದು ಸಚಿವ ಜೆ.ಸಿವಾಧುಸ್ವಾಮಿ ಹೇಳಿದರು.
    ನಿರೀಕ್ಷಣಾ ಮಂದಿರ ಉದ್ಘಾಟನೆ: ಶಿರಾ ಪ್ರವಾಸಿ ಮಂದಿರದಲ್ಲಿ ನಿರೀಕ್ಷಣಾ ಮಂದಿರವನ್ನು ಗೋವಿಂದ ಎಂ ಕಾರಜೋಳ ಶುಕ್ರವಾರ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಶಾಸಕ ಬಿ.ಸತ್ಯನಾರಾಯಣ್, ಎಂಎಲ್‌ಸಿಗಳಾದ ವೈ.ಎ.ನಾರಾಯಣಸ್ವಾಮಿ, ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುವಾರ್, ತಹಸೀಲ್ದಾರ್ ನಾಹಿದಾ ಜಂ ಜಂ, ಜಿಪಂ ಸಿಇಒ ಶುಭಾ, ಸವಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುವಾರ್ ನಾಯಕ್, ಎಸ್ಪಿ ಡಾ. ವಂಶಿಕೃಷ್ಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಟಿ.ಎಲ್.ಎಸ್.ಪ್ರೇವಾ, ಪ್ರಾಂಶುಪಾಲ ಎನ್.ಗುರುಸ್ವಾಮಿ ಇದ್ದರು.

    ಸ್ಪರ್ಶ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಿ: ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಶ ಜಾತಿಗಳನ್ನು ಕೈಬಿಡುವಂತೆ ಶಿರಾ ತಾಲೂಕು ಅಂಬೇಡ್ಕರ್ ಯುವಸೇನೆ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿಪತ್ರ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಿರೀಕ್ಷಣಾ ಮಂದಿರ ಉದ್ಘಾಟನೆ ಆಗಮಿಸಿದ್ದ ಕಾರಜೋಳ ಅವರನ್ನು ಭೇಟಿಯಾದ ಕಾರ್ಯಕರ್ತರು, ರಾಜ್ಯದಲ್ಲಿ ಸ್ಪರ್ಶ ಜಾತಿಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸುಪ್ರೀಂಕೋರ್ಟ್ ಉಲ್ಲೇಖ ಪತ್ರದನ್ವಯ ತೀರ್ಪು ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಸ್ಪರ್ಶ ಜಾತಿಗಳನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಕೋರಿದರು. ಯುವಸೇನೆ ಅಧ್ಯಕ್ಷ ಕುವಾರ್ ಎನ್, ಪ್ರಧಾನ ಕಾರ್ಯದರ್ಶಿ ಪಾಲಾಕ್ಷಯ್ಯ, ಸದಸ್ಯರಾದ ನರಸಿಂಹಮೂರ್ತಿ (ಮೀಸೆ), ಪರಮೇಶ್, ಎನ್.ರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts