More

    ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್​ಗೆ ಜಾಮೀನು

    ಮುಂಬೈ: ಮನಿ ಲಾಂಡರಿಂಗ್ ಕೇಸ್​ನಲ್ಲಿ ಆರೋಪಿಯಾಗಿರುವ ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚರ್​ಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ. 5 ಲಕ್ಷ ರೂಪಾಯಿ ಬಾಂಡ್​ನ ಆಧಾರದ ಮೇಲೆ ಈ ಜಾಮೀನು ನೀಡಲಾಗಿದ್ದು, ಅನುಮತಿ ಇಲ್ಲದೆ ದೇಶದಿಂದ ಹೊರಹೋಗಬಾರದೆಂದು ನ್ಯಾಯಾಲಯ ಸೂಚಿಸಿದೆ.

    ಐಸಿಐಸಿಐ ಬ್ಯಾಂಕಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ವೀಡಿಯೋಕಾನ್ ಮತ್ತು ಇತರ ಎರಡು ಕಂಪನಿಗಳಿಗೆ ನೀಡಲಾದ 1,875 ಕೋಟಿ ರೂಪಾಯಿ ಸಾಲಗಳ ಮಂಜೂರಾತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆಸಿರುವ ಆರೋಪವನ್ನು ಕೊಚ್ಚರ್ ಎದುರಿಸುತ್ತಿದ್ದಾರೆ. ಈ ಸಂಬಂಧವಾಗಿ ಚಂದಾ ಕೊಚ್ಚರ್, ಆಕೆಯ ಪತಿ ದೀಪಕ್ ಕೊಚ್ಚರ್ ಮತ್ತು ವೀಡಿಯೋಕಾನ್ ಗ್ರೂಪ್​ನ ವೇಣುಗೋಪಾಲ್ ಧೂತ್ ವಿರುದ್ಧ ಎನ್​ಫೋರ್ಸ್​ಮೆಂಟ್ ಡೈರೆಕ್ಟೊರೇಟ್​(ಇಡಿ) 2019ರ ಫೆಬ್ರವರಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.

    ಇದನ್ನೂ ಓದಿ: ಎಲ್​ಗಾರ್ ಪರಿಷದ್​ ಪ್ರಕರಣದ ಆರೋಪಿ ಗೌತಮ್ ನವಲಖಗೆ ಜಾಮೀನು ಇಲ್ಲ

    ಜೂನ್ 2009 ರಿಂದ ಅಕ್ಟೋಬರ್ 2011 ರ ನಡುವೆ ಬ್ಯಾಂಕ್​ ನೀಡಿದ ಆರು ಸಾಲಗಳಲ್ಲಿ ಅಕ್ರಮ ನಡೆದಿದೆ ಎಂಬ ಸಿಬಿಐ ವರದಿಯ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಚಂದಾ ಕೊಚ್ಚರ್ ತಮ್ಮ ಕಾರ್ಯಾವಧಿಯಲ್ಲಿ ಗುಜರಾತಿನ ಸ್ಟರ್ಲಿಂಗ್ ಬಯೋಟೆಕ್ ಕಂಪೆನಿಗೆ ಮತ್ತು ಭೂಷನ್ ಸ್ಟೀಲ್ ಗ್ರೂಪ್​ಗೆ ನೀಡಿರುವ ಇನ್ನೆರಡು ಸಾಲಗಳ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ.(ಏಜೆನ್ಸೀಸ್)

    ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು

    ಬಂಧನ ವಾರಂಟ್​ ಜಾರಿಯಾಗುತ್ತಿದ್ದಂತೆ ಕೋರ್ಟ್​ಗೆ ದೌಡಾಯಿಸಿದ ನಟಿ ಪದ್ಮಜಾ ರಾವ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts